ಶಿವಮೊಗ್ಗ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕ್ಷೇತ್ರದಲ್ಲೇ ಸಿಎಂ ಎಚ್ ಡಿ ಕುಮಾರಸ್ವಾಮಿ ಅಖಾಡಕ್ಕೆ ಇಳಿಯಲಿದ್ದಾರೆ. ಮಂಡ್ಯ, ರಾಮನಗರಕ್ಕಿಂತ ಶಿವಮೊಗ್ಗವೇ ನನಗೆ ಇಂಪಾರ್ಟೆಂಟ್ ಎಂದ ಎಚ್‍ಡಿ ಕುಮಾರಸ್ವಾಮಿ ಅವರು ಶಿವಮೊಗ್ಗಕ್ಕೆ ತೆರಳಲಿದ್ದಾರೆ.
ಇಂದಿನಿಂದ ನಾಲ್ಕು ದಿನ ಶಿವಮೊಗ್ಗದಲ್ಲಿ ಸಿಎಂ ಎಚ್‍ಡಿಕೆ ಕ್ಯಾಂಪೇನ್ ಮಾಡಲಿದ್ದಾರೆ. ಯಡಿಯೂರಪ್ಪ ಕ್ಷೇತ್ರದಿಂದಲೇ ಎಚ್‍ಡಿಕೆ ಬ್ರಹ್ಮಾಸ್ತ್ರ ಹೂಡಲಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪಕ್ಕೆ ಹೆಚ್‍ಡಿಕೆ ಎಂಟ್ರಿ ಕೊಡಲಿದ್ದಾರೆ. ಸೋಮವಾರ ಸಾಗರ, ಸೊರಬ, ತೀರ್ಥ ಹಳ್ಳಿಗಳಲ್ಲಿ ಎಚ್ ಡಿಕೆ ಪ್ರಚಾರ ನಡೆಸಲಿದ್ದಾರೆ.
ಮಂಗಳವಾರ ಬೈಂದೂರು, ಭದ್ರಾವತಿಯಲ್ಲಿ ಎಚ್‍ಡಿಕೆ ಪ್ರವಾಸ ಮಾಡಲಿದ್ದು, ಬುಧವಾರ ಶಿವಮೊಗ್ಗ ನಗರದಲ್ಲೇ ಕುಮಾರಸ್ವಾಮಿ ರಣತಂತ್ರ ಹೂಡಲಿದ್ದಾರೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಕಟ್ಟಿಹಾಕಿದ್ರೆ ಸರ್ಕಾರ ಸೇಫ್ ಅನ್ನೋ ಮಂತ್ರವಾಗಿದೆ. ಒಟ್ಟಿನಲ್ಲಿ ಇಂದಿನಿಂದ ಶಿವಮೊಗ್ಗದಲ್ಲಿ ಅಸಲಿ ಅಖಾಡ ಶುರುವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv