ಕೊಡಗು ಪರಿಹಾರ ನಿಧಿ- ಸಹಾಯ ಮಾಡುವಂತೆ ಸಿಎಂ ಎಚ್‍ಡಿಕೆ ಮನವಿ

Public TV
2 Min Read

ಬೆಂಗಳೂರು: ಪ್ರವಾಹದಿಂದ ತೀವ್ರ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯ ಜನತೆಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಸಾರ್ವಜನಿಕರು ಕೊಡುಗೆ ನೀಡುವಂತೆ ಕೋರಿದ್ದಾರೆ. ವಿಧಾನಸೌಧ ವಿಳಾಸಕ್ಕೆ ಚೆಕ್ ಅಥವಾ ಡಿಡಿ ರೂಪದಲ್ಲಿ ಮಾತ್ರವಲ್ಲದೆ ಆನ್ ಲೈನ್ ಮೂಲಕವೂ ಸಲ್ಲಿಸಬಹುದು ಅಂತ ಮನವಿ ಮಾಡಿದ್ದಾರೆ. ಹೆಚ್ಚಿನ ವಿವರಗಳ ಬಗ್ಗೆ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಮಂದಿಗೆ ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದು ಬರುತ್ತಿದೆ. ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್‍ ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಿದ್ದಾರೆ. ರಾಜ್ಯ ಸಭಾ ಸದಸ್ಯ ಕುಪ್ಪೆಂದ್ರ ರೆಡ್ಡಿ ಅವರು 25 ಲಕ್ಷ ರೂ. ಚೆಕ್ ನೀಡಿದ್ದಾರೆ. ಆನಂದ್ ನಾಗಮಂಗಲದ ನಿವಾಸಿ ಮನೆ ಗೃಹ ಪ್ರವೇಶ ನಿಲ್ಲಿಸಿ 1 ಲಕ್ಷ ರೂ. ಸಿಎಂ ಪರಿಹಾರ ನಿಧಿಗೆ ಹಣ ನೀಡಿದ್ದಾರೆ.

ರಾಜ್ಯದ ಸಾರಿಗೆ ಸಿಬ್ಬಂದಿಗಳು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ. ಆಗಸ್ಟ್ ತಿಂಗಳ ಒಂದು ದಿನದ ವೇತನ ನೀಡಲು ತಿರ್ಮಾನಿಸಿದ್ದು, ಒಟ್ಟು 1.16 ಲಕ್ಷ ಸಿಬ್ಬಂದಿ ಇದ್ದು, ಅಂದಾಜು 11. 80 ಕೋಟಿ ರೂ. ಹಣವನ್ನು ನೀಡಲು ತಿರ್ಮಾನ ಮಾಡಿದ್ದಾರೆ.

ಕೊಡಗು ಪ್ರವಾಹದ ಬಗ್ಗೆ ಕುಮಾರಸ್ವಾಮಿ ಸಭೆ ನಡೆಸಿದ್ದು, ಎರಡು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ. ಹಲವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದ್ದು, 12 ಜನ ಮೃತಪಟ್ಟಿದ್ದಾರೆ. ಸುಮಾರು 845 ಮನೆಗಳು ಪೂರ್ಣ ಹಾನಿಗೊಳಗಾಗಿವೆ ಎಂದು ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಇದೇ ವೇಳೆ ಕೊಡಗಿನ ನಿರಾಶ್ರಿತರಿಗೆ ಸರ್ಕಾರ ತಾತ್ಕಾಲಿಕ ಪರಿಹಾರ ಘೋಷಿಸಿದೆ. ಸದ್ಯಕ್ಕೆ 3,800 ರೂಪಾಯಿ ಹಣ ನೀಡಲು ನಿರ್ಧರಿಸಿದ್ದಾರೆ. ಜೊತೆಗೆ 10 ಕೆ.ಜಿ ಅಕ್ಕಿ, 1 ಕೆಜಿ ಸಕ್ಕರೆ, 1ಕೆಜಿ ಎಣ್ಣೆ, 1 ಕೆಜಿ ತೊಗರಿ ಬೇಳೆ, 5 ಲೀಟರ್ ಸೀಮೆಎಣ್ಣೆಯನ್ನು ಉಚಿತವಾಗಿ ನೀಡಲಿದೆ. ನಿರಾಶ್ರಿತರಿಗೆ ನರೇಗಾ ಯೋಜನೆಯಲ್ಲಿ ಕೆಲಸ ನೀಡಲು ಸಿಎಂ ಆದೇಶಿಸಿದ್ದು, 2 ಸಾವಿರ ಅಲ್ಯೂಮಿನಿಯಂ ಶೆಡ್ ನಿರ್ಮಿಸಲು ಸೂಚಿಸಿದ್ದಾರೆ.

ಕೊಡಗಿನಲ್ಲಿ ಮಳೆಯಿಂದ ಹಾನಿ ಹಿನ್ನೆಲೆ
ಹೊಸ ರಿಲೀಫ್ ಅಕೌಂಟ್ ತೆರೆದ ಸಿಎಂ
ಖಾತೆ ಸಂಖ್ಯೆ : 37887098605
ಐಎಫ್‍ಎಸ್‍ಸಿ ಕೋಡ್ : ಎಸ್‍ಬಿಐಎನ್ 0040277
ಎಂಐಸಿಆರ್ : 560003419

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
2 Comments

Leave a Reply

Your email address will not be published. Required fields are marked *