ವಿದೇಶ ಪ್ರವಾಸದಿಂದ ಬಂದಿರುವ ಸಿಎಂ ಮುಂದಿವೆ ಮೂರು ಅವಕಾಶಗಳು

Public TV
1 Min Read

ಬೆಂಗಳೂರು: ವಿದೇಶದಿಂದ ಬಂದಿರುವ ಸಿಎಂ ಮುಂದೆ ಮೂರು ಅವಕಾಶಗಳಿವೆ. ಈ ಮೂರು ಪ್ಲಾನ್ ಗಳಲ್ಲಿ ಮುಖ್ಯಮಂತ್ರಿಗಳು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕುತೂಹಲ ರಾಜ್ಯ ರಾಜಕೀಯ ಅಂಗಳದಲ್ಲಿ ಮೂಡಿದೆ.

ಆಯ್ಕೆ 1: ಶತಾಯಗತಾಯ ಹೋರಾಟ ಮಾಡಿ ಸರ್ಕಾರ ಉಳಿಸಿಕೊಳ್ಳಲು ಮುಂದಾಗುವುದು. ಕೈ ತಪ್ಪಿಹೋದ ಶಾಸಕರನ್ನ ಏನಾದರು ಮಾಡಿ ಮನವೊಲಿಕೆ ಮಾಡಿಕೊಂಡು, ಇನ್ನುಳಿದ ಶಾಸಕರು ಕೈತಪ್ಪಿ ಹೋಗದಂತೆ ನೋಡಿಕೊಳ್ಳುವುದು. ತಮಗಿರುವ ಎಲ್ಲಾ ಅವಕಾಶಗಳನ್ನ ಬಳಸಿಕೊಂಡು ಸರ್ಕಾರವನ್ನ ಉಳಿಸಿಕೊಳ್ಳುವುದು.

ಆಯ್ಕೆ 2: ಯಾವುದೇ ಮುಲಾಜಿಲ್ಲದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರ ಮುಂದೆ ಹೋಗುವುದು. ಹೇಗಿದ್ದರು ಶಾಸಕರು ಕೈ ತಪ್ಪಿ ಹೋಗಿದ್ದಾರೆ ಸರ್ಕಾರ ಅಲ್ಪ ಮತಕ್ಕೆ ಕುಸಿಯುವ ಭೀತಿ ಎದುರಾಗಿದ್ದು, ಬಹುಮತ ಸಾಬೀತಿಗೆ ಯತ್ನಿಸಿ ವಿಫಲವಾಗಿ ಮುಖಭಂಗ ಅನುಭವಿಸೋದು ಬೇಡ ಎಂದು ನಿರ್ಧರಿಸಬಹುದು. ಬಹುಮತ ಸಾಬೀತು ಮಾಡುವ ಬದಲಿ ರಾಜೀನಾಮೆ ನೀಡಿ ಮುಂದಿನ ಬೆಳವಣಿಗೆಗಳನ್ನು ತಾಳ್ಮೆಯಿಂದ ಗಮನಿಸುವುದು.

ಆಯ್ಕೆ 3: ಯಡಿಯೂರಪ್ಪ ಅವರು ಮಾಡಿದಂತೆ ಸದನದಲ್ಲೇ ಎಲ್ಲವೂ ತೀರ್ಮಾನವಾಗಲಿ ಅಂತ ವಿಶ್ವಾಸ ಮತ ಸಾಬೀತಿಗೆ ಮುಂದಾಗುವುದು. ವಿಶ್ವಾಸಮತ ಸಾಬೀತು ಮಾಡಲಾಗದಿದ್ದರೆ ಹಿಂದೆ ಯಡಿಯೂರಪ್ಪ ಮಾಡಿದಂತೆ ಬಿಜೆಪಿ ವಿರುದ್ಧ ಸದನದಲ್ಲೇ ವಾಗ್ದಾಳಿ ನಡೆಸಿ ತಮ್ಮ ಮನದ ಮಾತನ್ನ ಸದನದಲ್ಲೆ ಆಡುವುದು. ಆ ಮೂಲಕ ತಮ್ಮ ಸರ್ಕಾರವನ್ನ ಬಿಜೆಪಿ ಕೆಡವಿದೆ ಎಂಬುದನ್ನು ಜನರ ಮುಂದಿಡುವುದು.

ಹೀಗೆ ಮೂರು ಆಯ್ಕೆಗಳನ್ನ ಸಿಎಂ ಮುಕ್ತವಾಗಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿಗೆ ಬಂದ ಮೇಲೆ ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಮಯ ಸಂದರ್ಭ ನೋಡಿ ಯಾವುದು ಸೂಕ್ತವೋ ಆ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *