ಸಿಎಂ ಏನು ತಪ್ಪು ಮಾಡಿಲ್ಲ, ಕಾನೂನಿಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗಿದ್ದಾರೆ: ಡಿಕೆಶಿ

Public TV
1 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಏನು ತಪ್ಪು ಮಾಡಿಲ್ಲ, ಕಾನೂನಿಗೆ ಗೌರವ ಕೊಟ್ಟು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ (DCM DK Shivakumar) ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.ಇದನ್ನೂ ಓದಿ: 132 ವರ್ಷ ದಾಖಲೆ ಸರಿಗಟ್ಟಿದ ಟ್ರಂಪ್‌ – ಗೆದ್ದಿದ್ದು ಹೇಗೆ?

ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ (Lokayuktha) ವಿಚಾರಣೆಗೆ ಹಾಜರಾದ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಅವರು ಕಾನೂನಿಗೆ ಗೌರವ ಕೊಟ್ಟಿದ್ದಾರೆ. ಸಿಎಂಗೆ ನೋಟಿಸ್ ಕೊಟ್ಟಿದ್ರು, ಚುನಾವಣೆ ಪ್ರಚಾರ ಇದ್ದರೂ ಕೂಡ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಕಾನೂನಿಗೆ ಗೌರವ ಕೊಡಬೇಕು ಎಂದು ಪ್ರಚಾರವನ್ನು ಕೈಬಿಟ್ಟು ವಿಚಾರಣೆಗೆ ಹಾಜರಾಗಿದ್ದಾರೆ. ಸಿಎಂ ಅವರು ಒಂದು ವಾರ ವಿನಾಯಿತಿ ಕೇಳಬಹುದಿತ್ತು. ಆದರೆ ಅಧಿಕಾರದಲ್ಲಿ ಇದ್ದುಕೊಂಡು ಅಧಿಕಾರ ದುರುಪಯೋಗ ಮಾಡಬಾರದು ಎಂದು ಹೇಳಿ ಕಾನೂನಿಗೆ ಗೌರವ ಕೊಟ್ಟು ಹೋಗಿದ್ದಾರೆ. ಸಿಎಂ ಏನು ತಪ್ಪು ಮಾಡಿಲ್ಲ. ಲೋಕಾಯುಕ್ತ ಏನು ಕೇಳುತ್ತಾರೋ ಅದಕ್ಕೆ ಉತ್ತರ ಕೊಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.

ಸಿಎಂ ಸಿದ್ದರಾಮಯ್ಯ ಅವರ ವಿಚಾರಣೆ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಲೋಕಾಯುಕ್ತ ಕೇಳಿರುವ ಪ್ರಶ್ನೆಗಳ ಕುರಿತು ಮುಡಾದಲ್ಲಿ ಹಗರಣದಲ್ಲಿ ಏನಿದೆ? ಏನು ಇಲ್ಲ? ಮಂಜೂರು ಮಾಡಿಲ್ಲ, ಸಹಿಯೂ ಹಾಕಿಲ್ಲ ಎಂದು ನೀವು ಲೋಕಾಯುಕ್ತ ಅಧಿಕಾರಿಗಳಿಗೆ ಕೇಳಬೇಕು. ಲೋಕಾಯುಕ್ತದವರು ಕರೆದಿದ್ದರು. ಸಿಎಂ ಹೋಗಿದ್ದಾರೆ ಅಷ್ಟೇ ಎಂದು ತಿಳಿಸಿದರು.ಇದನ್ನೂ ಓದಿ: ‘ಜೈ ಹನುಮಾನ್’ ಸಿನಿಮಾದಲ್ಲಿ ರಾಮನಾಗಿ ರಾಣಾ ದಗ್ಗುಬಾಟಿ?

Share This Article