ಸಾಮಾನ್ಯರನ್ನ ಸೂಪರ್‌ ಮ್ಯಾನ್‌ಗಳಾಗಿ ಪರಿವರ್ತಿಸುತ್ತೇವೆ – ಶಿಂಧೆ ಪ್ರತಿಜ್ಞೆ

Public TV
3 Min Read

– ಲಡ್ಕಿ ಬಹಿನ್ ಯೋಜನೆ ಮಹಾರಾಷ್ಟ್ರದ ಗೇಮ್ ಚೇಂಜರ್ ಎಂದ ಪವಾರ್‌
– ನಾನು ಆಧುನಿಕ ಅಭಿಮನ್ಯು – ಚಕ್ರವ್ಯೂಹ ಭೇದಿಸುವುದು ಗೊತ್ತು: ಫಡ್ನವಿಸ್‌

ಮುಂಬೈ: ಮುಂದಿನ 5 ವರ್ಷವೂ ಮಹಾರಾಷ್ಟ್ರ (Maharashtra) ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದ್ದೇವೆ. ಸಾಮಾನ್ಯರನ್ನು ಸೂಪರ್‌ ಮ್ಯಾನ್‌ಗಳಾಗಿ ಪರಿವರ್ತಿಸುತ್ತೇವೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ (Eknath Shinde) ಪ್ರತಿಜ್ಞೆ ಮಾಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ (Maharashtra Election Results) ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗಿದೆ. ಸದ್ಯದ ಅಂಕಿಅಂಶಗಳ ಪ್ರಕಾರ, ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ +236, ಎಂವಿಎ +48, ಇತರೆ +4 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಹಾಲಿ ಸಿಎಂ ಏಕನಾಥ್‌ ಶಿಂಧೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಬಳಿಕ ಸಿಎಂ ಶಿಂಧೆ, ದೇವೇಂದ್ರ ಫಡ್ನವಿಸ್ ಮತ್ತು ಎನ್‌ಸಿಪಿ ಬಣದ ಅಜಿತ್ ಪವಾರ್ (Ajit Pawar) ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇದನ್ನೂ ಓದಿ: 14 ರಾಜ್ಯಗಳ 48 ಕ್ಷೇತ್ರಗಳಿಗೆ ಉಪಚುನಾವಣೆ – 23 ಕ್ಷೇತ್ರಗಳಲ್ಲಿ ಎನ್‌ಡಿಎ ಕಮಾಲ್

ನಾವು ಟೀಕೆಗಳಿಗೆ ಕೆಲಸ ಮೂಲಕ ಉತ್ತರ ಕೊಟ್ಟಿದ್ದೇವೆ, ಇದು ಜನ ಮೆಚ್ಚುಗೆ ಪಡೆದಿದೆ. ನಾವೆಲ್ಲ ಜನರೊಂದಿಗೆ ಕೆಲಸ ಮಾಡುವವರು, ಹಾಗೆಯೇ ಮಾಡಿದ್ದೇವೆ. ಮನೆಯಲ್ಲಿದ್ದುಕೊಂಡು ಸರ್ಕಾರ ನಡೆಸಲು ಸಾಧ್ಯವಿಲ್ಲ. ನೀವು ಜನರ ಬಳಿ ಹೋಗಿದ್ದರೆ ಹೀಗಾಗುತ್ತಿರಲಿಲ್ಲ ಎಂದು ವಿಪಕ್ಷಗಳಿಗೆ ಕುಟುಕಿದ್ದಾರೆ.

ನಾವು ಬಾಳಾಸಾಹೇಬ್ ಠಾಕ್ರೆಯವರ ಆದರ್ಶಗಳನ್ನ ಮುಂದುವರಿಸುತ್ತೇವೆ, ಹೊಸ ಸರ್ಕಾರ ರಚನೆ ಮಾಡುತ್ತೇವೆ. 2019ರಲ್ಲೇ ಈ ರೀತಿಯ ಸರ್ಕಾರ ರಚನೆ ಆಗಬೇಕಿತ್ತು. ಆದ್ರೆ ಆಗಲಿಲ್ಲ, ಜನ ಕೂಡ ಹಳೆಯದ್ದನ್ನು ಮರೆತಿಲ್ಲ ಎಂದು ಶಿಂಧೆ ಹೇಳಿದ್ದಾರೆ. ಇದನ್ನೂ ಓದಿ: ಜಾರ್ಖಂಡ್, ವಯನಾಡಲ್ಲಿ ಕಾಂಗ್ರೆಸ್ ಗೆಲುವಿಗೆ ಧನ್ಯವಾದ ತಿಳಿಸಿದ ರಾಹುಲ್ ಗಾಂಧಿ

ಮುಂದುವರಿದು, ನಮ್ಮ ಸರ್ಕಾರ ಶ್ರೀಸಾಮಾನ್ಯರ ಸರ್ಕಾರವಾಗಿದೆ. ಪ್ರಧಾನಿ ಮೋದಿ ಅವರ ಅತ್ಯುತ್ತಮ ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಮಹಿಳೆಯರು, ಮಕ್ಕಳು ಮತ್ತು ರೈತರು ನಮಗೆ ಕೇಂದ್ರ ಬಿಂದುವಾಗಿದ್ದರು. ನಾವು ಕಾಮನ್ ಮ್ಯಾನ್​ ಅನ್ನು ಸೂಪರ್​ಮ್ಯಾನ್​ಗಳಾಗಿ ಪರಿವರ್ತಿಸಲು ಬಯಸುತ್ತೇವೆ ಎಂದಿದ್ದಾರೆ.

ಥಾಣೆ ಜಿಲ್ಲೆಯ ಕೊಪ್ರಿ-ಪಚ್ಚಖಾಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಿಂಧೆ 1,20,717 ಮತಗಳ ಅಂತರದಿಂದ ಶಿವಸೇನಾ (ಯುಬಿಟಿ) ಅಭ್ಯರ್ಥಿ ಕೇದಾರ್ ದಿಘೆ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದಿದೆ: ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿಗೆ ಮೋದಿ ಕೃತಜ್ಞತೆ

ನಾನು ಆಧುನಿಕ ಅಭಿಮನ್ಯು; ಚಕ್ರವ್ಯೂಹ ಭೇದಿಸುವುದು ಗೊತ್ತು:
ಮತ್ತೊಂದೆಡೆ ಮಹಾಯುತಿ ವಿಜಯದ ಸಂತೋಷ ಹಂಚಿಕೊಂಡಿರುವ ಬಿಜೆಪಿಯ ದೇವೇಂದ್ರ ಫಡ್ನವಿಸ್‌, ತಮ್ಮನ್ನು ಆಧುನಿಕ ಅಭಿಮನ್ಯುಗೆ ಹೋಲಿಸಿಕೊಂಡಿದ್ದಾರೆ. ʻಚಕ್ರವ್ಯೂಹ ಭೇದಿಸುವುದು ನನಗೆ ಚೆನ್ನಾಗಿ ತಿಳಿದಿದೆ, ನಾನು ಆಧುನಿಕ ಅಭಿಮನ್ಯು ಎಂದು ನಾನು ಮೊದಲೇ ಹೇಳಿದ್ದೆ. ಈ ಗೆಲುವಿನಲ್ಲಿ ನನ್ನ ಕೊಡುಗೆ ಚಿಕ್ಕದಾಗಿದೆ, ಇದು ನಮ್ಮ ತಂಡದ ಗೆಲುವು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಮುಂದುವರಿದು, ನಕಲಿ ನಿರೂಪಣೆಯನ್ನು ಪ್ರಚಾರ ಮಾಡುವ ವಿರೋಧ ಪಕ್ಷದವರ ಪ್ರಯತ್ನಗಳು ಮತ್ತು ಧರ್ಮದ ಆಧಾರದ ಮೇಲೆ ಮತದಾರರ ಧ್ರುವೀಕರಣವನ್ನು ಜನಸಾಮಾನ್ಯರು ವಿಫಲಗೊಳಿಸಿದ್ದಾರೆ ಎಂದು ನುಡಿದಿದ್ದಾರೆ.

ಲಡ್ಕಿ ಬಹಿನ್ ಯೋಜನೆ ಮಹಾರಾಷ್ಟ್ರದ ಗೇಮ್ ಚೇಂಜರ್:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಲಡ್ಕಿ ಬಹಿನ್ ಯೋಜನೆ ಮಹಾರಾಷ್ಟ್ರದ ಗೇಮ್‌ ಚೇಂಜರ್‌. ಇದು ನಮ್ಮ ವಿರೋಧಿಗಳನ್ನು ಸೋಲಿಸಿದೆ. ಈ ಗೆಲುವು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಮುಂದಿನ 5 ವರ್ಷಗಳ ವರೆಗೂ ಮಹಾರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಮಹಾಯುತಿ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

Share This Article