ಸಿಎಂ-ಡಿಸಿಎಂ ಶನಿವಾರ ದೆಹಲಿ ಪ್ರಯಾಣ – ಡಿಕೆ ಆಪ್ತರೂ ಕೂಡ ದಿಲ್ಲಿಗೆ ತೆರಳಲು ಸಿದ್ಧತೆ

1 Min Read

– ಬಲಪ್ರದರ್ಶನ ಬೇಕಿಲ್ಲ; ಆಪ್ತರಿಗೆ ಸೂಚನೆ

ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಡಿನ್ನರ್ ಪಾಲಿಟಿಕ್ಸ್ ಮಧ್ಯೆ ಶನಿವಾರ (ಡಿ.13) ದೆಹಲಿಗೆ ಸಿಎಂ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತೆರಳುತ್ತಿದ್ದಾರೆ. ವೋಟ್ ಚೋರಿ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗಿಯಾಗುತ್ತಿದ್ದಾರೆ. ಇದರ ಮಧ್ಯೆಯೇ, ಸುಮಾರು 25ಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳುತ್ತಿದ್ದು, ಎಐಸಿಸಿ ನಾಯಕರ ಭೇಟಿಗೂ ಆಲೋಚಿಸಿದ್ದಾರೆ.

ಆದ್ರೆ, ನನ್ನ ಹಿಂದೆ ಯಾರೂ ಬರೋದು ಬೇಡ. ಯಾವ ಪ್ರದರ್ಶನವೂ ಬೇಡ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ಆಪ್ತೇಷ್ಠರಿಗೆ ಹೇಳಿದ್ದಾರೆ. ಇದನ್ನೂ ಓದಿ: ರಿಷಬ್ ಹರಕೆ ನೇಮೋತ್ಸವ ವಿವಾದ – ಹಿರಿಯರು ಹೇಳಿದ ಉಪದೇಶದ ರೀತಿ ದೈವ ನರ್ತನ ಮಾಡಿದ್ದೇನೆ: ಮುಖೇಶ್

ಯತೀಂದ್ರ (Yathindra Siddaramaiah) ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರೋ, ಮಾಗಡಿ ಬಾಲಕೃಷ್ಣ ಬಹಿರಂಗ ಹೇಳಿಕೆಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಈ ಮಧ್ಯೆ, ಡಿಕೆಶಿ ಬಣ ಸಂಕ್ರಾಂತಿವರೆಗೆ ಡೆಡ್‌ಲೈನ್ ಹಾಕಿಕೊಂಡಿದ್ದು, ಬಹಿರಂಗ ಹೇಳಿಕೆ ನೀಡದಿರಲು ನಿರ್ಧರಿಸಿದೆ.

ಇನ್ನೂ ಬೆಳಗಾವಿ ಅಧಿವೇಶನದ ನಂತರ ಕಾಂಗ್ರೆಸ್ ಹೈಕಮಾಂಡ್ ಸಿಎಂ ಹಾಗೂ ಡಿಸಿಎಂಗೆ ಬುಲಾವ್ ನೀಡುತ್ತಾ ಅನ್ನೋ ಚರ್ಚೆಗಳು ಆಗಲಿದೆ. ಆದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಯಾವುದೇ ಸಂದೇಶ ನೀಡಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ದೆಹಲಿ ವಾಯು ಮಾಲಿನ್ಯ ಕುರಿತು ಚರ್ಚೆಗೆ ರಾಹುಲ್ ಮನವಿ – ಕೇಂದ್ರ ಸಮ್ಮತಿ

ಮತ್ತೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಡಿಕೆಶಿ ಸಿಎಂ ಆಗಲಿ. ಯಾರ ಬೇಡ ಅಂದಿದ್ದು ಅಂತ ಜಮೀರ್ ಅಹ್ಮದ್ ಹೇಳಿದ್ದಾರೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವಾಗ ಹೈಕಮಾಂಡ್ ಯಾವುದೇ ಗಡುವು ನೀಡಿಲ್ಲ ಅಂತ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

Share This Article