ಮಂಡ್ಯ: ವಾರದೊಳಗೆ ಮುಖ್ಯಮಂತ್ರಿ ಬದಲಾವಣೆ ಮಾಡಿ, ಇಲ್ಲವೇ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ ಎಳೆಯಿರಿ ಎಂದು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ. ಉದಯ್ (Kadalur Uday) ಹೈಕಮಾಂಡ್‌ಗೆ ಗಡುವು ನೀಡಿದರು.
ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಅವರು, ವಾರದೊಳಗೆ ಸಿಎಂ ವಿಚಾರದ ಗೊಂದಲವನ್ನು ಸರಿಪಡಿಸದಿದ್ದರೇ ನಾವೇ ಹೈಕಮಾಂಡ್ ಭೇಟಿ ಮಾಡುತ್ತೇವೆ. ಆಮೇಲೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಮಾಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ನಿಂತ ಕೆಲಸ ಮತ್ತೆ ಆರಂಭಿಸಿ – ಡಿಕೆಶಿ ನಿವಾಸಕ್ಕೆ ತೆರಳಿ ಮುನಿರತ್ನ ಮನವಿ
ಸಂಪುಟದಲ್ಲಿ ಹೊಸ ಶಾಸಕರ ಸೇರ್ಪಡೆ ಹಾಗೂ ಬದಲಾವಣೆಯೂ ಆಗಬಹುದು. ಅದಕ್ಕೆ ಹೈಕಮಾಂಡ್ ದಿನವನ್ನೂ ಗೊತ್ತು ಮಾಡುತ್ತದೆ. ನಾವು ದಿನಾಂಕವನ್ನು ಗೊತ್ತುಪಡಿಸುವುದಿಲ್ಲ. ಈ ಕೆಲಸ ಆಗೇ ಆಗುತ್ತೆ ಎಂಬ ಆಶಾಭಾವನೆ ಇಟ್ಟುಕೊಂಡಿದ್ದೇವೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ – 15 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ವಿರೋಧ ಪಕ್ಷದವರು ಇದೇ ವಿಚಾರವನ್ನು ಇಟ್ಟುಕೊಂಡು ಅಸ್ತ್ರ ಮಾಡಿಕೊಂಡಿದ್ದಾರೆ. ಆದಷ್ಟು ಬೇಗ ಹೈಕಮಾಂಡ್ ಸಿಎಂ ಬದಲಾವಣೆ, ಸಂಪುಟ ಪುನರ್‌ರಚನೆ ಬಗ್ಗೆ ತೀರ್ಮಾನ ಮಾಡಬೇಕು. ಏಳೆಂಟು ದಿನ ನೋಡಿ ನಾವೇ ಹೈಕಮಾಂಡ್ ಭೇಟಿ ಮಾಡಿ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಿ, ಇಲ್ಲವೇ ಬದಲಾವಣೆ ಯಾವಾಗ ಮಾಡುತ್ತೀರಿ ಎಂದು ಹೇಳಲಿ. ಮೊದಲು ಈ ಗೊಂದಲವನ್ನು ಪರಿಹರಿಸಿ ಎಂದು ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸೈನಿಕರ ವಿರುದ್ಧ ಕಾರ್ಯಕ್ರಮ – ಅಜೀಂ ಪ್ರೇಮ್‌ಜಿ ವಿವಿ ವಿರುದ್ಧ ಎಬಿವಿಪಿ ಪ್ರತಿಭಟನೆ
ದಲಿತ ಸಿಎಂ ಮಾಡಬೇಡಿ ಎಂದು ಯಾರೂ ಹೇಳಿಲ್ಲ. ಅದಕ್ಕೆ ಯಾರ ವಿರೋಧವೂ ಇಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಸಮರ್ಥರಿದ್ದವರು ಸಿಎಂ ಆಗಲಿ. ಅವರನ್ನು ಮೀರಿಸುವವರು ಇದ್ದರೆ ಅದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಡಿ.ಕೆ. ಶಿವಕುಮಾರ್ ಅವರನ್ನೇ ಹಿಂದಿಕ್ಕೆ ಓಡಬೇಕು ಎಂದು ದಲಿತ ಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಕರ್ನಾಟಕದ ವಿರುದ್ಧ ಉತ್ತಮ ಸ್ಥಿತಿಯಲ್ಲಿ ಜಮ್ಮು ಕಾಶ್ಮೀರ – ಜೋಶಿಗೆ KSCA ಗೌರವ
ವಿರೋಧ ಪಕ್ಷದವರು ಮಾಡುವ ಅಪಪ್ರಚಾರವನ್ನು ಸೆಟೆದು ನಿಲ್ಲುವ ಸಾಮರ್ಥ್ಯ ಇರಬೇಕು. ಮನೆಯಲ್ಲಿ ಕುಳಿತಿದ್ದರೆ ಸಾಮರ್ಥ್ಯ ಹೇಗೆ ಗೊತ್ತಾಗುತ್ತದೆ ಎನ್ನುವ ಮೂಲಕ ಡಿಕೆಶಿ ಬಿಟ್ಟರೆ ಕಾಂಗ್ರೆಸ್‌ನಲ್ಲಿ ಸಮರ್ಥರಿಲ್ಲ ಎಂಬುದನ್ನು ಶಾಸಕ ಉದಯ್ ಸ್ಪಷ್ಟವಾಗಿ ತಿರುಗೇಟು ನೀಡಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ – ಸುಜಯೀಂದ್ರ ತೀರ್ಥರ ಮೂಲಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ

