ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿದ ಬೊಮ್ಮಾಯಿ

Public TV
1 Min Read

ಹುಬ್ಬಳ್ಳಿ: ನಗರದಲ್ಲಿ ನೂತನವಾಗಿ ನಿರ್ಮಿಸಿದ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉದ್ಫಾಟಿಸಿದರು.

ಗೋಕುಲ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಗರದಲ್ಲಿ ಸ್ಥಾಪನೆಯಾಗಿರುವ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಡಿಎನ್‍ಎ, ಸೈಬರ್, ಆಡೀಯೋ ವಿಡೀಯೋ, ಮೊಬೈಲ್ ಫಾರೆನ್ಸಿಕ್ ಹಾಗೂ ಭೌತಶಾಸ್ತ್ರ ವಿಭಾಗಗಳಿವೆ. ಶೀಘ್ರದಲ್ಲಿಯೇ ನಾರ್ಕೊಟಿಕ್ ಪತ್ತೆ ವಿಭಾಗ ಪ್ರಾರಂಭಿಸಲಾಗುವುದು ಎಂದರು. ಇದನ್ನೂ ಓದಿ: ಉಕ್ರೇನ್‍ನಿಂದ ವಾಪಸ್ಸಾದ ವಿದ್ಯಾರ್ಥಿನಿಯನ್ನು ಬರ ಮಾಡಿಕೊಂಡ ಬೊಮ್ಮಾಯಿ

ಅಪರಾಧ ಶೋಧನೆಯಲ್ಲಿ ನ್ಯಾಯವಿಜ್ಞಾನ ಪ್ರಯೋಗಾಲಯಗಳ ವರದಿಗಳು ಬಹಳ ಮಹತ್ವ ಹೊಂದಿವೆ. ಈ ಹಿಂದೆ ಬೆಂಗಳೂರಿನ ಪ್ರಯೋಗಾಲಯದಿಂದ ವರದಿಗಳು ದೊರೆಯಲು 2 ರಿಂದ ಎರಡೂವರೆ ವರ್ಷಗಳ ಕಾಲಾವಧಿ ಬೇಕಾಗುತ್ತಿತ್ತು. ಈಗ ಸೈಬರ್ ಶೋಧನೆ ವಿಭಾಗ ಅಭಿವೃದ್ಧಿಪಡಿಸಿದ ನಂತರ ಮೂರು ತಿಂಗಳೊಳಗೆ ವರದಿಗಳು ಬರುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್

ಡಿಜಿಟಲ್ ಜಾಲಗಳ ಮೂಲಕ ನಡೆಯುವ ಅಪರಾಧಗಳನ್ನು ತ್ವರಿತವಾಗಿ ಪತ್ತೆ ಮಾಡಲಾಗುತ್ತಿದೆ. ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಂಚಿಸಲು ಯತ್ನಿಸುವ ಪ್ರಕರಣಗಳನ್ನು ರಾಜ್ಯದಲ್ಲಿ ನಿಯಂತ್ರಿಸಲಾಗಿದೆ. ಹುಬ್ಬಳ್ಳಿಯಲ್ಲಿ ಪ್ರಾರಂಭವಾಗಿರುವ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯಲದಲ್ಲಿ ಡಿಎನ್‍ಎ, ಕಂಪ್ಯೂಟರ್, ಮೊಬೈಲ್, ಆಡೀಯೋ-ವಿಡೀಯೋ ಫಾರೆನ್ಸಿಕ್ ಹಾಗೂ ಭೌತಶಾಸ್ತ್ರ ವಿಭಾಗಗಳಿವೆ, ಶೀಘ್ರದಲ್ಲಿಯೇ ನಾರ್ಕೊಟಿಕ್ ಪತ್ತೆ ವಿಭಾಗ ಪ್ರಾರಂಭಿಸಲಾಗುವುದು. ಇದಲ್ಲದೆ ಗೋಕುಲ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ವಾಕರಸಾಸಂಸ್ಥೆಯು ಅರ್ಧ ಎಕರೆ ನಿವೇಶನ ನಿಡಬೇಕು ಎಂದು ಸೂಚಿಸಿದರು.

Share This Article
Leave a Comment

Leave a Reply

Your email address will not be published. Required fields are marked *