ವಿಶೇಷ ಕ್ಲಸ್ಟರ್‌ನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಂಕು ಹೆಚ್ಚು: ಬೊಮ್ಮಾಯಿ

Public TV
1 Min Read

ಬೀದರ್: ವಿಶೇಷ ಕ್ಲಸ್ಟರ್ ನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಹೆಚ್ಚು ಸೋಂಕು ಕಂಡುಬರುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ದೇಶದಲ್ಲಿ ಓಮಿಕ್ರಾನ್ ಹೊಸ ರೂಪಾಂತರಿಯ ಅಬ್ಬರದ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ಬೇರೆ ರಾಜ್ಯಗಳಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಪತ್ತೆಯಾಗುತ್ತಿರುವುದು ಗಮನಿಸಿದ್ದೇವೆ. ಈಗಾಗಲೇ ತಜ್ಞರು ಕೆಲವು ಮಾರ್ಗಸೂಚಿಗಳನ್ನು ನೀಡಿದ್ದಾರೆ. ಅವುಗಳನ್ನು ಅನುಷ್ಠಾನ ಮಾಡುವ ಕೆಲಸ ಮಾಡುತ್ತಿದ್ದೇವೆ. ಇದರ ಮೇಲೆ ಗಮನ ಇಟ್ಟಿದ್ದೇವೆ. ಅದರಲ್ಲಿಯೂ ವಿಶೇಷವಾಗಿ ಕ್ಲಸ್ಟರ್ ನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹೆಚ್ಚು ಸೋಂಕು ಬರುತ್ತಿದೆ. ಈ ಕ್ಲಸ್ಟರ್ ಮ್ಯಾನೇಜರ್ ಗಾಗಿ ಕೆಲವು ಮಾರ್ಗವನ್ನು ಸೂಚನೆಗಳನ್ನು ಕೊಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಆಗಮನ

ಚಿಕ್ಕಮಗಳೂರಿನಲ್ಲಿ ನಿನ್ನೆ ದೊಡ್ಡ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲಿನ ಎಲ್ಲ ವಿದ್ಯಾರ್ಥಿಗಳನ್ನು ಟೆಸ್ಟ್ ಮಾಡಲಾಗಿದೆ. ಪ್ರೈಮರಿ, ಸೆಕೆಂಡರಿ ಸಂಪರ್ಕಿತರನ್ನು ಪತ್ತೆ ಮಾಡಿ ಸೀಲ್‍ಡೌನ್ ಮಾಡಿದ್ದೇವೆ. ಅವರಿಗೆ ಚಿಕಿತ್ಸೆಯನ್ನು ಕೊಡುತ್ತಿದ್ದೇವೆ. ನಮ್ಮ ಸರ್ಕಾರ ಎಲ್ಲ ರೀತಿಯ ಸನ್ನದ್ಧವಾಗಿದೆ. ಕಾಲ ಕಾಲಕ್ಕೆ ಅದರ ಪರಿಣಾಮ ಹಾಗೂ ವಿಸ್ತೀರ್ಣವನ್ನು ತಜ್ಞರಿಂದ ಮಾಹಿತಿ ಪಡೆದು ಚಿಕಿತ್ಸೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇವೆ. ನಾವು ಎಲ್ಲ ಕಡೆ ಗೆಲುತ್ತೇವೆ. ಸಿದ್ದೇಶ್ವರ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಮನಸ್ಸು ಬಹಳಷ್ಟು ಹಗುರ ಹಾಗೂ ಸಂತೋಷವಾಗಿದೆ. ಬಹಳಷ್ಟು ಒಳ್ಳೆಯ ಕೆಲಸವನ್ನು ಮಾಡುವ ಆತ್ಮಸ್ಥೈರ್ಯ ಭಾಲ್ಕಿಗೆ ಬಂದ ಮೇಲೆ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *