ಅಂಗಾಂಗ ದಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಹಿ

Public TV
1 Min Read

ಬೆಂಗಳೂರು: ವಿಶ್ವ ಅಂಗಾಂಗ ದಾನ ದಿನದ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವಾಕಥಾನ್ ನಡೆಯಿತು. ಈ ವೇಳೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ವಾಕಥಾನ್‌ಗೆ ಚಾಲನೆ ಕೊಟ್ಟ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನೇತ್ರದಾನ, ಅಂಗಾಂಗ ದಾನ ಮಾಡಿದ ನಟರಾದ ಪುನೀತ್ ರಾಜ್‌ಕುಮಾರ್, ಸಂಚಾರಿ ವಿಜಯ್ ಅವರನ್ನು ಸ್ಮರಿಸಿಕೊಂಡರು. ನಟ ಸಂಚಾರಿ ವಿಜಯ್ 7 ಮಂದಿಗೆ ಜೀವ ನೀಡಿದ್ದಾರೆ. ಪುನೀತ್ ಕಣ್ಣಿನ ದಾನದಿಂದ 4 ಜನರಿಗೆ ಬೆಳಕಾಗಿದ್ದಾರೆ ಎಂದರು. ಇದನ್ನೂ ಓದಿ: ಮತಾಂತರ ಮಾಡಿದ್ರೆ 10 ವರ್ಷ ಜೈಲು – ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರ ನಿಷೇಧ

ನಮ್ಮ ದೇಹದಾನದಿಂದ 8 ಜನ ಬದುಕಬಹುದು. ನಾನೂ ಕೂಡ ಅಂಗಾಂಗ ದಾನಕ್ಕೆ ಸಹಿ ಮಾಡಿದ್ದೇನೆ. ಚರ್ಮ ಸೇರಿದಂತೆ ಎಲ್ಲಾ ಅಂಗಾಂಗಗಳನ್ನು ದಾನ ಮಾಡಬಹುದು ಎನ್ನುತ್ತ ಜನರಿಗೂ ಅಂಗಾಂಗ ದಾನ ಮಾಡಲು ಮುಂದಾಗುವಂತೆ ಸಿಎಂ ಕರೆ ನೀಡಿದರು. ಇದನ್ನೂ ಓದಿ: ಸ್ವಾವಲಂಬಿ ಭಾರತ ಕಟ್ಟಲು ಕೈಜೋಡಿಸಿ: ರಾಜ್ಯಪಾಲರ ಮನವಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *