ಅವರ ಫೋಟೋ ಹಾಕಿ, ಅವರೇ ನಾ ನಾಯಕಿ ಅಂತಿದ್ದಾರೆ: ಪ್ರಿಯಾಂಕಾ ಗಾಂಧಿ ಕಾರ್ಯಕ್ರಮದ ಬಗ್ಗೆ ಸಿಎಂ ವ್ಯಂಗ್ಯ

By
2 Min Read

ಹುಬ್ಬಳ್ಳಿ: ಪ್ರಿಯಾಂಕಾ ಗಾಂಧಿ (Priyanka Gandhi) ಅವರ ಫೋಟೋ ಹಾಕಿ ಅವರೇ ನಾ ನಾಯಕಿ ಎನ್ನುತ್ತಿದ್ದಾರೆ. ನಮ್ಮ ಕರ್ನಾಟಕದ ಮಹಿಳೆಯರು ಅವರನ್ನು ನಾಯಕಿ ಮಾಡಲು ತಯಾರಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವ್ಯಂಗ್ಯವಾಡಿದರು.

ಕಾಂಗ್ರೆಸ್‍ನ (Congress) ನಾ ನಾಯಕಿ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕಾ ಗಾಂಧಿ ಬರಲಿ ಬಿಡಿ, ಆ ಬಗ್ಗೆ ನಮ್ಮ ತಕರಾರು ಇಲ್ಲ. ಆ ಕಾರ್ಯಕ್ರಮದ ಟೈಟಲ್ ನೋಡಿದೆ. ನಾ ನಾಯಕಿ ಅಂದ್ರೇನು? ಅವರ ಫೋಟೋ ಹಾಕಿ ಅವರೇ ನಾ ನಾಯಕಿ ಎನ್ನುತ್ತಿದ್ದಾರೆ. ನಮ್ಮ ಕರ್ನಾಟಕದ ಮಹಿಳೆಯರು ಅವರನ್ನು ನಾಯಕಿ ಮಾಡಲು ತಯಾರಿಲ್ಲ ಎಂದ ಅವರು ಮಹಿಳೆಯರಿಗೆ ಪ್ರತ್ಯೇಕ ಬಜೆಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಅವರಿಗೆ ಅಧಿಕಾರ ಸಿಕ್ರೇ ತಾನೇ, ಅವರು ಏನೇನೋ ಆಶ್ವಾಸನೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

ಗಡ್ಕರಿಗೆ ಬೆದರಿಕೆ ಕರೆ: ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ (Nitin Gadkari) ಬೆದರಿಕೆ ಕರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಜೈಲಿನಿಂದಲೇ ಕರೆ ಹೋಗಿರುವುದರಿಂದ ಖಂಡಿತವಾಗಿಯೂ ಆರೋಪಿಗಳು ಸಿಗುತ್ತಾರೆ. ಕರೆ ಮಾಡಿದವರ ಹಿನ್ನೆಲೆ ಏನು? ಅವರ ಹಿಂದೆ ಯಾರು ಇದ್ದಾರೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಅದನ್ನು ನಾವು ಹೊರತೆಗೆಯುತ್ತೇವೆ ಎಂದು ತಿಳಿಸಿದರು.

ಅರ್ಥಪೂರ್ಣ ಯುವಜನೋತ್ಸವ: ಬಹಳ ಅದ್ಭುತ ಯುವಜನೋತ್ಸವ ಆಗಿದೆ. ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಈ ಭಾಗದಲ್ಲಿ ಈ ರೀತಿ ಕಾರ್ಯಕ್ರಮ ಆದರೆ ಯುವಕರಿಗೆ ಸ್ಫೂರ್ತಿ ಸಿಗುತ್ತದೆ. ನಾವು ಯುವಕರಿಗಾಗಿ ಹೊಸ ಪಾಲಿಸಿ ಮಾಡಿದ್ದೇವೆ. ಗ್ರಾಮೀಣ ಕ್ರೀಡೆಗಳಿಗೆ ಅವಕಾಶ ಕೊಟ್ಟಿದ್ದೇವೆ. ಯುವಕರಿಗಾಗಿ ನಾವು ಕ್ರೀಡೆ, ಶಿಕ್ಷಣದಲ್ಲಿ ಅವಕಾಶ. ಗ್ರಾಮೀಣ ಸೊಗಡಿನ ಕ್ರೀಡೆಗಳಿಗೆ ಅವಕಾಶ ಕೊಟ್ಟು ಪ್ರತಿಭೆ ಗುರುತಿಸುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕೆಆರ್‌ ಪೇಟೆಯಲ್ಲಿ ಜೆಡಿಎಸ್‌ ಕಾರ್ಯಕರ್ತರ, ಬಂಡಾಯ ನಾಯಕರ ನಡುವೆ ವಾಗ್ಯುದ್ಧ

ಯುವಜನೋತ್ಸವ ಅಲ್ಲ ವಿನಾಶೋತ್ಸವ ಎಂದ ಕಾಂಗ್ರೆಸ್‍ಗೆ ತಿರುಗೇಟು ನೀಡಿದ ಅವರು, ಯಥಾ ಬುದ್ಧಿ ತಥಾ ಮಾತು. ಕಾಂಗ್ರೆಸ್‍ಗೆ ವಿನಾಶದ ಕನಸುಗಳು ಬೀಳುತ್ತಿವೆ. ಇತ್ತೀಚೆಗೆ ಅವರ ಮಾತು, ನಡುವಳಿಕೆ ಕೆಳ ಮಟ್ಟದ್ದಾಗಿದೆ. ಅವರು ಬಹಳ ಹತಾಶೆದಿಂದ ಇದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಸರ್ಕಾರಕ್ಕೆ ಮತ್ತೆ ಈದ್ಗಾ ವಿವಾದ ಟೆನ್ಷನ್- ಜ. 21ರೊಳಗೆ ನಿಲುವು ಪ್ರಕಟಿಸಲು ಡೆಡ್‍ಲೈನ್

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *