ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಬಿಜೆಪಿಯ ವಿಜಯಯಾತ್ರೆ ತಡೆಯಿರಿ – ಕಾಂಗ್ರೆಸ್‍ಗೆ ಬೊಮ್ಮಾಯಿ ಸವಾಲು

Public TV
2 Min Read

ಕಲಬುರಗಿ: ಜಿಲ್ಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ವಿರಾಟ್ ಒಬಿಸಿ (OBC) ಸಮಾವೇಶದಲ್ಲಿ ಕಾಂಗ್ರೆಸ್ (Congress) ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತೆ ಗುಡುಗಿದ್ದಾರೆ. ಒಬಿಸಿಗಳು ನಿಮ್ಮ ಜೇಬಲ್ಲಿ ಇಲ್ಲ. ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಬಿಜೆಪಿಯ ವಿಜಯಯಾತ್ರೆ ತಡೆಯಿರಿ ಎಂದು ಸವಾಲು ಹಾಕಿದ್ದಾರೆ.

ವೇದಿಕೆಯಲ್ಲಿ ಮಾತನಾಡಿದ ಅವರು, ನಾನು ನಿಮ್ಮ ಸೇವಕ. ನೀವು ನಮ್ಮ ಮಾಲೀಕರು. ನಮ್ಮನ್ನು ಮತ್ತೆ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ನೆರದಿದ್ದ ಜನರನ್ನ ನೋಡಿದ್ರೆ ಬಿಜೆಪಿ ಬಾವುಟ ವಿಧಾನಸೌಧ ಮೂರನೇ ಮಹಡಿ ಮೇಲೆ ಹಾರಾಡಲಿದೆ. ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಮೋಸ ಮಾಡಿ ಮತ ಪಡೆದಿದೆ. ಸಿದ್ದರಾಮಯ್ಯನವರಿಗೆ (Siddaramaiah) ಬದಲಾವಣೆ ಕಾಲ ಬಂದಿದೆ. ಎಲ್ಲರನ್ನು ಎಲ್ಲ ಕಾಲಕ್ಕೂ ಮೋಸ ಮಾಡಲು ಆಗುವುದಿಲ್ಲ. ಕಾಗಿನೇಲೆ ಅಭಿವೃದ್ಧಿ ಮಾಡಿದ್ದು ನಮ್ಮ ನಾಯಕ ಯಡಿಯೂರಪ್ಪನವರು (B.S Yediyurappa). ಕುರುಬ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದು ನಮ್ಮ ಸರ್ಕಾರ. ಎಸ್‍ಸಿ (SC), ಎಸ್‍ಟಿ (ST) ಮೀಸಲಾತಿ ಹೆಚ್ಚಳ ಮಾಡಿ ಆದೇಶ ಮಾಡಿದ್ದೇನೆ. ಈ ವರ್ಗಗಳಿಗೆ ಹೆಚ್ಚು ನ್ಯಾಯ ನೀಡಿದ್ದು ನಮ್ಮ ಸರ್ಕಾರ ಎಂದಿದ್ದಾರೆ. ಇದನ್ನೂ ಓದಿ: ಇಸ್ರೋ ಮಾಜಿ ಅಧ್ಯಕ್ಷ ಕೆ. ಶಿವನ್, ಸಿಹಿಕಹಿ ಚಂದ್ರು ಸೇರಿ 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಮೀಸಲಾತಿ ಹೆಚ್ಚಳ ವಿಚಾರದಲ್ಲಿ ನಮ್ಮ ಶ್ರಮವಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪಕ್ಕದಲ್ಲಿ ಮನೆಯಲ್ಲಿ ಗಂಡು ಮಗು ಹುಟ್ಟಿದ್ರೆ ಇವರ ಮನೆಯಲ್ಲಿ ಸ್ವೀಟ್ ಹಂಚಿದ್ರು ಅನ್ನೊ ಹಾಗೆ ಸಿದ್ದರಾಮಯ್ಯ ಮಾಡ್ತಿದಾರೆ. ಕುರುಬ ಸಮಾಜಕ್ಕೆ ನ್ಯಾಯ ಕೊಡುವ ನೈತಿಕತೆನು ಇಲ್ಲವೇ ಸಿದ್ದರಾಮಯ್ಯನವರೇ? ಪ್ರಧಾನಿ ಮೋದಿಯವರು (Narendra Modi) ಹಿಂದುಳಿದ ವರ್ಗಗಳ ನೇತಾತರರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ದಾರಿಯಲ್ಲಿ ನಮ್ಮ ಸರ್ಕಾರ ಹೋಗುತ್ತಿದೆ. ತಳವಾರ/ಪರಿವಾರ ಎಸ್‍ಟಿಯಲ್ಲಿ ಬರಬೇಕೆಂದು ಕೇಂದ್ರ ಸರ್ಕಾರ ಆದೇಶ ಮಾಡಿದೆ. ಅದಕ್ಕಾಗಿ ತಳವಾರ/ಪರಿವಾರ ಸಮಾಜವನ್ನು ಹಿಂದುಳಿದ ವರ್ಗದಿಂದ ತೆಗೆದು ಎಸ್‍ಟಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಜನಗಳೇ ನಾನು ಕಲಬುರಗಿಗೆ ಖಾಲಿ ಕೈಯಿಂದ ಬಂದಿಲ್ಲ. ಸಮಾವೇಶದಲ್ಲಿ ತಳವಾರ್/ಪರಿವಾರವನ್ನು ಎಸ್‍ಟಿಗೆ ಸೇರಿಸಿದ ಆದೇಶ ಪ್ರತಿ ಪ್ರದರ್ಶಿಸಿದರು.

ಸಿಎಂ ಆದೇಶ ಪ್ರತಿ ತೋರಿಸುತ್ತಿದ್ದಂತೆ ತಳವಾರ್/ಪರಿವಾರ ಸಮಾಜರಿಂದ ಜಯಘೋಷ ಸಮಾವೇಶದಲ್ಲಿ ಬೊಮ್ಮಾಯಿ ಪರ ಜನ ಘೋಷಣೆ ಕೂಗಿದರು. ಹಿಂದುಳಿದ ವರ್ಗಗಳ ಪರ ಕೆಲಸ ಮಾಡಲು 24 ಗಂಟೆ ಸಿದ್ಧನಿದ್ದೇನೆ. ನಿಮ್ಮನ್ನ ನೋಡಿ ನಮಗೆ ಆನೆ ಬಲ ಬಂದಂತಾಗಿದೆ. ಹಿಂದುಳಿದ ವರ್ಗಗಳು ನಮ್ಮ ಜೇಬಿನಲ್ಲಿದೆ ಅಂತಾ ಕಾಂಗ್ರೆಸ್‍ನವರು ಅಂದುಕೊಂಡಿದ್ದಾರೆ. ಹೀಗೆ ಅಂದುಕೊಂಡರೆ ನೀವು ಕಲಬುರಗಿಗೆ ಬಂದು ಒಬಿಸಿ ಸಮಾವೇಶದಲ್ಲಿನ ಜನ ನೋಡಿ. ತಾಕ್ಕತಿದ್ದರೆ, ಧಮ್ ಇದ್ರೆ ಈ ವಿಜಯಯಾತ್ರೆ ತಡೆಯಿರಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಮೋದಿ ಹೆಬ್ಬುಲಿ, ಅಮಿತ್ ಶಾ ಹುಲಿ, ಇವರೊಂದಿಗೆ ಹೆಜ್ಜೆ ಹಾಕೋ ಮತ್ತೊಂದು ಹುಲಿ ಪ್ರಹ್ಲಾದ್ ಜೋಶಿ: ಜಗ್ಗೇಶ್

ಮಧ್ಯಪ್ರದೇಶ ಸಿಎಂ ಶಿವರಾಜ್‍ಸಿಂಗ್ ಚೌವ್ಹಾಣ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿ ಹಲವರಿದ್ದ ಈ ಸಮಾವೇಶದಲ್ಲಿ ಅಂದಾಜು 2 ಲಕ್ಷ ಕಾರ್ಯಕರ್ತರು ಪಾಲ್ಗೊಂಡಿದ್ರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *