ಮೌಢ್ಯಕ್ಕೆ ಹೆದರಿದ್ರಾ ಸಿಎಂ ಬೊಮ್ಮಾಯಿ?

Public TV
1 Min Read

ಚಾಮರಾಜನಗರ: ಮುಖ್ಯಮಂತ್ರಿ ಬೊಮ್ಮಾಯಿ ಅವರು ಮೌಢ್ಯಕ್ಕೆ ಹೆದರಿದ್ರಾ ಎಂಬ ಪ್ರಶ್ನೆ ಎದ್ದಿದೆ. ಆಸ್ಪತ್ರೆಯ ಉದ್ಘಾಟನೆಯ ಕಾರ್ಯಕ್ರಮಕ್ಕೆ ಬೈಪಾಸ್‌ ರಸ್ತೆಯ ಮೂಲಕ ಆಗಮಿಸಿದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಈಗ ಎದ್ದಿದೆ.

ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಬೊಮ್ಮಾಯಿ ನಾನು ಚಾಮರಾಜನಗರಕ್ಕೆ ಹೋಗುತ್ತೇನೆ ಎಂದು ಹೇಳಿದ್ದರು. ಆದರೆ ಇಂದು 450 ಹಾಸಿಗೆ ಸಾಮರ್ಥ್ಯದ 166.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಬೋಧನಾ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮಕ್ಕೆ  ಚಾಮರಾಜನಗರದ ಮೂಲಕ ಬಾರದೇ ಬೈಪಾಸ್‌ ರಸ್ತೆ ಬಳಸಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್‌ ಕೇಸ್‌ – ಶಾರೂಖ್ ಪುತ್ರ ಆರ್ಯನ್ ಜೈಲುಪಾಲು

ಚಾಮರಾಜನಗರದ ಹೊರ ವಲಯದಲ್ಲಿರುವ ಯಡಪುರಬೆಟ್ಟದಲ್ಲಿ ಆಸ್ಪತ್ರೆ ನಿರ್ಮಾಣವಾಗಿದ್ದು, ಬೈಪಾಸ್‌ ರಸ್ತೆಯಲ್ಲೇ ಆಗಮಿಸಿ ಆ ರಸ್ತೆಯಲ್ಲೇ ಬೆಂಗಳೂರಿಗೆ ತೆರಳಿದ್ದಾರೆ. ಕಾಲೇಜು ಉದ್ಘಾಟನೆ ಭಾಷಣ ವೇಳೆ ಮತ್ತೊಮ್ಮೆ ಚಾಮರಾಜನಗರಕ್ಕೆ ಬರುವ ಭರವಸೆಯನ್ನು ಸಿಎಂ ನೀಡಿದರು.

ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಯಿದೆ. ಈ ಕಾರಣಕ್ಕೆ ಚಾಮರಾಜನಗರಕ್ಕೆ ಬಾರದೇ ಬೈಪಾಸ್‌ ರಸ್ತೆ ಬಳಸಿದ್ರಾ ಎಂಬ ಪ್ರಶ್ನೆ ಎದ್ದಿದೆ.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕನ್ನಡದಲ್ಲಿ ಭಾಷಣ ಪ್ರಾರಂಭಿಸಿ, ನನಗೆ ಕರ್ನಾಟಕಕ್ಕೆ ಬರುವುದು ತುಂಬಾ ಇಷ್ಟ. ನಿಮ್ಮ ಜೊತೆಯಲ್ಲಿರುವುದು ಸಂತೋಷ. ಎಂದು ಕನ್ನಡದಲ್ಲಿ ಹೇಳಿದಾಗ ಸಭಿಕರಿಂದ ಹರ್ಷೋದ್ಘಾರ ಕೇಳಿಬಂತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಾನು ಚಾಮರಾಜನಗರ ಜಿಲ್ಲೆಗೆ ಬರುವ ವಿಚಾರ ಸಾಕಷ್ಟು ಚರ್ಚೆ ಯಾಗಿತ್ತು. ಇಲ್ಲಿಗೆ ಬರುವುದು ನನ್ನ ಕರ್ತವ್ಯ. ಚಾಮರಾಜನಗರದಲ್ಲಿ ಜನ ಕಲ್ಯಾಣ ಮಾಡುವುದು ನನ್ನ ಕರ್ತವ್ಯ. ನಾನು ಬಾರದಿದ್ದರೆ ಕರ್ತವ್ಯ ಲೋಪವಾಗುತ್ತಿತ್ತು. ಯಾರು ಏನೇ ಹೇಳಿದರು ಅದು ಅವರಿಗೆ ಬಿಟ್ಟಿದ್ದು. ಮುಂದೆಯೂ ನಾನು ಚಾಮರಾಜನಗರಕ್ಕೆ ಬಂದು ಪ್ರಗತಿ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಾಯಿಯಿಂದ ನಾಯಿಗೆ ರಕ್ತದಾನ

Share This Article
Leave a Comment

Leave a Reply

Your email address will not be published. Required fields are marked *