ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಇಂದು ಸಿಎಂ ಯಡಿಯೂರಪ್ಪನವರು ಬೆಳಗ್ಗೆ 11.30ಕ್ಕೆ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಿಎಂ ಮಂಡ್ಯ ಜಿಲ್ಲೆಯ 6 ಕ್ಷೇತ್ರಗಳ ಜೆಡಿಎಸ್ ಪಕ್ಷದ ಶಾಸಕರಿಗೆ ಆಹ್ವಾನ ನೀಡಿದ್ದಾರೆ. ಈ ಎಲ್ಲಾ ಶಾಸಕರು ಕಾರ್ಯಕ್ರಮಕ್ಕೆ ಬರ್ತಾರಾ ಅನ್ನೋದು ಇದೀಗ ಯಕ್ಷ ಪ್ರಶ್ನೆಯಾಗಿದೆ.
ಈ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆಯ 6 ಮಂದಿ ಜೆಡಿಎಸ್ ಶಾಸಕರುಗಳಿಗೆ ಸಿಎಂ ಆಹ್ವಾನ ನೀಡಿದ್ದಾರೆ. ಈ ಮೂಲಕ ಜೆಡಿಎಸ್ ಪಕ್ಷದ ಶಾಸಕರು ಹಾಗೂ ಮುಖಂಡರನ್ನು ವಿಶ್ವಾಸದಲ್ಲಿಟ್ಟುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಮೇಲುಕೋಟೆ ಕ್ಷೇತ್ರದ ಸಿ.ಎಸ್.ಪುಟ್ಟರಾಜು, ಮಂಡ್ಯ ಕ್ಷೇತ್ರದ ಶ್ರೀನಿವಾಸ್, ಮದ್ದೂರು ಕ್ಷೇತ್ರದ ಡಿ.ಸಿ.ತಮ್ಮಣ್ಣ, ನಾಗಮಂಗಲದ ಕೆ.ಸುರೇಶ್‍ಗೌಡ, ಮಳವಳ್ಳಿಯ ಕೆ.ಅನ್ನದಾನಿ, ಶ್ರೀರಂಗಪಟ್ಟಣ ಕ್ಷೇತ್ರದ ರವೀಂದ್ರ ಶ್ರೀಕಂಠಯ್ಯರಿಗೆ ಸಿಎಂ ಆಮಂತ್ರಿಸಿದ್ದಾರೆ. ಅದರಲ್ಲೂ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯರಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಆಹ್ವಾನಿಸಲಾಗಿದೆ.
ನಾಲ್ಕನೇ ಬಾರಿಗೆ ಬಾಗಿನ ಅರ್ಪಿಸುತ್ತಿರುವ ಸಿಎಂ ಕಾರ್ಯಕ್ರಮಕ್ಕೆ ಜೆಡಿಎಸ್ ಶಾಸಕರು ಪಕ್ಷಭೇದ ಮರೆತು ಬರ್ತಾರಾ? ಇಲ್ಲ ಸರ್ಕಾರ ಬೀಳಿಸಿದ ಸೇಡನ್ನಿಟ್ಟುಕೊಂಡು ಗೈರಾಗುತ್ತಾರಾ? ಕಾದು ನೋಡಬೇಕಿದೆ .