`ಮಹಾ’ ಪೆಟ್ಟಿಗೆ ತತ್ತರ- ಬಿಎಸ್‍ವೈ ಬಳಿ ವರಸೆ ಬದಲಿಸಿದ ಬಿಜೆಪಿ ಹೈಕಮಾಂಡ್

Public TV
1 Min Read

ಬೆಂಗಳೂರು: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ ಬಿಜೆಪಿ ಹೈಕಮಾಂಡ್ ಈಗ ತನ್ನ ಕರ್ನಾಟಕದ ನಿಲುವಿನಲ್ಲಿ ಬದಲಾಗಿದೆ. ಕರ್ನಾಟಕದಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ತನ್ನ ವರಸೆಯನ್ನು ಬದಲಿಸಿದೆ.

ಮಹಾರಾಷ್ಟ್ರದಲ್ಲಿ ಮಹಾ ಹೊಡೆತ ಬಿಜೆಪಿ ಹೈಕಮಾಂಡ್‍ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದೊಡ್ಡ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಕಮಲ ಮಾಯವಾಗಿದೆ. ಈಗ ಅಧಿಕಾರದಲ್ಲಿರುವ ಕರ್ನಾಟಕವನ್ನು ಉಳಿಸಿಕೊಳ್ಳಲೇಬೇಕು ಎನ್ನುವ ಪ್ಲ್ಯಾನ್ ಅನ್ನು ಬಿಜೆಪಿ ರೂಪಿಸಿದೆ. ಇದಕ್ಕಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಬಳಿ ವರಸೆ ಬದಲಿಸಿದೆ. ಮೊದಲೆಲ್ಲ ಹೆಜ್ಜೆ ಹೆಜ್ಜೆಗೂ ಬಿಎಸ್‍ವೈಗೆ ಕಡಿವಾಣ ಹಾಕುತ್ತಿದ್ದ ಹೈಕಮಾಂಡ್ ಈಗ ಕೂಲ್ ಆಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಕರ್ನಾಟಕ ವಿಧಾನಸಭೆ ಉಪ ಚುನಾವಣೆ ಮೇಲೆ ಮಹಾರಾಷ್ಟ್ರದ ಹಿನ್ನಡೆ ಪರಿಣಾಮ ಬೀರುತ್ತಾ ಎಂಬ ಭಯ ಬಿಜೆಪಿ ಪಡೆಯಲ್ಲಿ ಮೂಡಿದೆ. ಹೀಗಾಗಿ ಇಷ್ಟು ದಿನ ‘ಹೈ’ಗೇಮ್ ಆಡುತ್ತಿದ್ದವರು ಈಗ ಕೂಲ್ ಆಗಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರೆ ಮಾಡಿ, ಯಡಿಯೂರಪ್ಪನವರೇ ನಿಮ್ಮ ಸರ್ಕಾರ ನಿಮ್ಮ ಕೈಯಲ್ಲಿ ಇದೆ. ಉಪ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಎಡವುದು ಬೇಡ. ಬೀ ಸೇಫ್, ಬೀ ಕೇರ್‍ಫುಲ್, ಡೋಂಟ್‍ವರಿ ನಾವಿದ್ದೇವೆ. ನಿಮ್ಮ ಸರ್ಕಾರಕ್ಕೆ ತೊಂದರೆ ಆಗಲ್ಲ ಎಂದು ಅಭಯ ನೀಡಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಬಿಜೆಪಿ 2014ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎಯ ಸರ್ಕಾರದ ರಚಿಸಿದ ಬಳಿಕ, ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಭರ್ಜರಿ ಗೆಲವು ಸಾಧಿಸಿತ್ತು. ಕೆಲವು ರಾಜ್ಯಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸಿದರೆ, ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜತೆಗೂಡಿ ಮೈತ್ರಿ ಸಾಧಿಸಿ ಅಧಿಕಾರ ಹಿಡಿದಿತ್ತು. ಆದರೆ 2018ರ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *