ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ 3ನೇ ಪತ್ನಿಯ ಕ್ಲೋಸ್‌ ಫ್ರೆಂಡ್‌ ಪಲಾಯನ!

Public TV
2 Min Read

ಲಾಹೋರ್: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮೂರನೇ ಪತ್ನಿ ಬುಶ್ರಾ ಬಿಬಿ ಅವರ ಆತ್ಮೀಯ ಸ್ನೇಹಿತೆ ಫರಾಹ್‌ ಖಾನ್‌ ಬಂಧನದ ಭೀತಿಯಿಂದಾಗಿ ದುಬೈಗೆ ಪಲಾಯನಗೈದಿದ್ದಾರೆ.

ಇಮ್ರಾನ್‌ ಖಾನ್‌ ಅವರ ಸರ್ಕಾರ ಉರುಳಿದರೆ ಫರಾಹ್‌ ಖಾನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ವರದಿಗಳಾಗಿವೆ. ಹೀಗಾಗಿ ಭೀತಿಯಿಂದ ಅವರು ದೇಶ ತೊರೆದಿದ್ದಾರೆ. ಈಗಾಗಲೇ ಫರಾಹ್‌ ಖಾನ್ ಅವರ ಪತಿ ಹಸನ್‌ ಗುಜ್ಜರ್‌ ಕೂಡ ಪಾಕಿಸ್ತಾನ ತೊರೆದು ಅಮೆರಿಕದಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ: ಪಾಕ್ ಸುಪ್ರೀಂಕೋರ್ಟ್ ನಿರ್ಧಾರದಿಂದ ಇಮ್ರಾನ್ ಖಾನ್‍ಗೆ ಶಾಕ್ – ಮುಂದುವರಿದ ರಾಜಕೀಯ ಹೈಡ್ರಾಮಾ

ಫರಾಹ್ ಅವರು ಭಾನುವಾರ ಪಾಕಿಸ್ತಾನ ತೊರೆದು ದುಬೈಗೆ ಪಲಾಯನವಾಗಿದ್ದಾರೆ ಎಂದು ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ ಮಾಡಿದೆ.

ಅಧಿಕಾರಿಗಳನ್ನು ಅವರು ಬಯಸಿದ ಸ್ಥಳಗಳಿಗೆ ವರ್ಗಾವಣೆ ಮಾಡಿಸಲು ಫರಾಹ್ ಅವರು ಲಂಚ ಪಡೆದಿದ್ದಾರೆ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಹೊರಿಸಿವೆ. ಇದುವರೆಗೂ ಫರಾಹ್ ಅವರು 6 ಬಿಲಿಯನ್‌ ಪಾಕಿಸ್ತಾನಿ ರೂಪಿಯನ್ನು (32 ಮಿಲಿಯನ್‌ ಯುಎಸ್‌ ಡಾಲರ್)‌ ಲಂಚ ಪಡೆದಿದ್ದಾರೆ. ಹೀಗಾಗಿ ಅವರನ್ನು ʼಎಲ್ಲಾ ಹಗರಣಗಳ ತಾಯಿʼ ಎಂದು ಪ್ರತಿಪಕ್ಷಗಳು ಕರೆದಿವೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹೈಡ್ರಾಮಾ – ಸದ್ಯಕ್ಕೆ ಇಮ್ರಾನ್ ಪಾರು, 90 ದಿನದಲ್ಲಿ ಚುನಾವಣೆ

ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಉಪಾಧ್ಯಕ್ಷರು ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ ಅವರು, ಇಮ್ರಾನ್ ಮತ್ತು ಅವರ ಪತ್ನಿಯ ಆಜ್ಞೆಯ ಮೇರೆಗೆ ಫರಾಹ್ ಈ ಭ್ರಷ್ಟಾಚಾರವನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದೆ. ಪಾಕ್ ಸುಪ್ರೀಂಕೋರ್ಟ್‍ನಲ್ಲಿ ಪ್ರಧಾನಿ ಇಮ್ರಾನ್ ಖಾನ್‍ಗೆ ಹಿನ್ನಡೆ ಆಗಿದೆ. ಚುನಾವಣೆ ಅತ್ಯಗತ್ಯ, ಆದ್ರೇ ಅದು ಅವಿಶ್ವಾಸ ನಿಲುವಳಿ ಮೇಲಿನ ಮತದಾನದಿಂದ ನಿರ್ಧಾರವಾಗಲಿ ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

ಪಾಕಿಸ್ತಾನ ಸುಪ್ರೀಂಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಹೆಸರನ್ನು ಹಂಗಾಮಿ ಪ್ರಧಾನಿ ಹುದ್ದೆಗೆ ಇಮ್ರಾನ್ ಖಾನ್ ಪ್ರಸ್ತಾಪಿಸಿದ್ದಾರೆ. ಹೊಸ ಹಂಗಾಮಿ ಪ್ರಧಾನಿ ಅಧಿಕಾರ ಸ್ವೀಕರಿಸುವವರೆಗೂ ಇಮ್ರಾನ್ ಖಾನ್ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್‌ಖಾನ್‌ನನ್ನು ಮಿನಿ ಟ್ರಂಪ್ ಎಂದ ಮಾಜಿ ಪತ್ನಿ

Share This Article
Leave a Comment

Leave a Reply

Your email address will not be published. Required fields are marked *