ಶಾಲೆಯ ವಾಶ್ ರೂಂನಲ್ಲೇ 9ರ ಬಾಲಕನಿಗೆ ಚೂರಿ ಇರಿದ್ರು!

Public TV
1 Min Read

ಗಾಂಧಿನಗರ: ಕಳೆದ ವರ್ಷ ದೆಹಲಿ ಸಮೀಪದ ಗುರ್ ಗಾಂವ್ ಶಾಲೆಯೊಂದರಲ್ಲಿ ನಡೆದ ಬಾಲಕನ ಕೊಲೆ ಪ್ರಕರಣದಂತೆ ಇದೀಗ ಗುಜರಾತ್ ನ ವಡೋದರಾದಲ್ಲಿ ಅಂತಹದ್ದೆ ಘಟನೆ ನಡೆದಿದೆ.

ವಡೋದರಾ ಶಾಲೆಯ ಶೌಚಾಲಯದಲ್ಲಿ 14 ವರ್ಷದ ಬಾಲಕ ಕೊಲೆಯಾಗಿ ಪತ್ತೆಯಾಗಿದ್ದಾನೆ. ಈತ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದನು. ಇದನ್ನೂ ಓದಿ: ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಕೊಲೆ

ಬಾಲಕನ ಹೊಟ್ಟೆಗೆ ಇರಿದು ಕೊಲೆಗೈದ ರೀತಿಯಲ್ಲಿ ಪತ್ತೆಯಾಗಿದೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಇದನ್ನೂ ಓದಿ: ಪ್ರದ್ಯುಮನ್ ಕೊಲೆ ಪ್ರಕರಣ- ವಿದ್ಯಾರ್ಥಿ ಮೇಲೆ ತಿಂಗಳ ಹಿಂದೆಯೇ ಸಿಬಿಐಗೆ ಅನುಮಾನವಿತ್ತು

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಗುರ್‍ಗಾಂವ್ ನ ಶಾಲೆಯ ಶೌಚಾಲಯದಲ್ಲಿ 7 ವರ್ಷದ ಬಾಲಕನನ್ನು ಕತ್ತು ಸೀಳೀ ಕೊಲೆಗೈಯಲಾಗಿತ್ತು. ಈ ಘಟನೆ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಅಲ್ಲದೇ ಘಟನೆ ಕುರಿತಂತೆ ಅನೇಕ ಪ್ರತಿಭಟನೆಗಳು ಕೂಡ ನಡೆದಿತ್ತು. ಇದನ್ನೂ ಓದಿ: ಬಾಲಕ ಪ್ರದ್ಯುಮನ್ ಕೊಲೆ ಆರೋಪಿಯನ್ನ ಚಾಕು ಅಂಗಡಿಗೆ ಕರೆದುಕೊಂಡು ಹೋದ ಸಿಬಿಐ

Share This Article
Leave a Comment

Leave a Reply

Your email address will not be published. Required fields are marked *