ನವದೆಹಲಿ: 8ನೇ ತರಗತಿ ವಿದ್ಯಾರ್ಥಿ ಕಬ್ಬಿಣದ ರಾಡ್‍ನಿಂದ ತನ್ನ ಶಿಕ್ಷಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಸಾಕೇತ್ ಎಂಬಲ್ಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಪ್ರಕರಣದ ಬಳಿಕ ಭಯಭೀತನಾದ ವಿದ್ಯಾರ್ಥಿ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದನು. ಸದ್ಯ ಹಲ್ಲೆಗೊಳಗಾಗಿರುವ ಶಿಕ್ಷಕರನ್ನು ಏಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸುಂದರ್, ವಿದ್ಯಾರ್ಥಿಯಿಂದ ಹಲ್ಲೆಗೊಳಾಗದ ಶಿಕ್ಷಕ. ಇಂದು ಬೆಳಗ್ಗೆ ಶಾಲೆಗೆ ಬಂದ ವಿದ್ಯಾರ್ಥಿ ಮೇಲೆ ಹಾಜರಾತಿ ವಿಷಯದಲ್ಲಿ ಗರಂ ಆಗಿದ್ದರು. ಶಾಲೆಗೆ ಪದೇ ಪದೇ ಗೈರಾಗುತ್ತಿರೋದ್ರಿಂದ ವಿದ್ಯಾರ್ಥಿ ಮೇಲೆ ಶಿಕ್ಷಕರು ಸಹಜವಾಗಿಯೇ ಕೋಪಗೊಂಡಿದ್ದರು.
ಇದೇ ವೇಳೆ ವಿದ್ಯಾರ್ಥಿಯ ಬ್ಯಾಗ್ ಚೆಕ್ ಮಾಡುವಾಗ ಪುಸ್ತಕಗಳ ಮಧ್ಯೆ ಕಬ್ಬಿಣದ ರಾಡ್ ಸಿಕ್ಕಿದೆ. ಅನುಮಾನಗೊಂಡ ಶಿಕ್ಷಕರು ನಿನ್ನ ಬಳಿ ರಾಡ್ ಎಲ್ಲಿಂದ ಬಂತು ಪ್ರಶ್ನಿಸಿ ರಾಡ್‍ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಟೇಬಲ್ ಮೇಲೆ ಇಟ್ಟ ರಾಡ್ ತೆಗೆದುಕೊಳ್ಳುವಾಗ ಶಿಕ್ಷಕರು ಆತನನ್ನು ತಡೆದಿದ್ದ ಸಂದರ್ಭದಲ್ಲಿ ಅದರಿಂದಲೇ ಹಲ್ಲೆ ಮಾಡಿ ವಿದ್ಯಾರ್ಥಿ ಪರಾರಿಯಾಗಿದ್ದಾನೆ.
ಇಂದು ಬೆಳಗ್ಗೆ ಸುಮಾರು 9.30ಕ್ಕೆ ಶಿಕ್ಷಕರು ವಿದ್ಯಾರ್ಥಿಗಳ ಬ್ಯಾಗ್ ಚೆಕ್ ಮಾಡುವಾಗ ರಾಡ್ ದೊರೆತಿದೆ. ಕೂಡಲೇ ಶಿಕ್ಷಕ ಸುಂದರ್ ರಾಡ್ ವಶಕ್ಕೆ ಪಡೆದು ಟೇಬಲ್ ಮೇಲಿಟ್ಟು ಪಾಠ ಆರಂಭಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ ಶಿಕ್ಷಕರಿಗೆ ಗೊತ್ತಾಗದಂತೆ ಮತ್ತೆ ರಾಡ್ ತೆಗೆದುಕೊಂಡು ಬ್ಯಾಗ್‍ನಲ್ಲಿ ಇಟ್ಟುಕೊಂಡಿದ್ದಾನೆ. ಶಿಕ್ಷಕ ಸುಂದರ್ ವಿದ್ಯಾರ್ಥಿಯ ಬ್ಯಾಗ್ ಪಡೆಯಲು ಮುಂದಾದಾಗ ಅದೇ ರಾಡ್‍ನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಸುಂದರ್ ಅವರ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ. ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸುಂದರ್ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv