ವಾಚ್‍ಮ್ಯಾನ್ ಜೊತೆಗೆ 16ರ ಪೋರಿಯ ಸೆಕ್ಸ್-ನೋಡಿದ 8ರ ಹುಡ್ಗನ ಕೊಂದೇ ಬಿಟ್ಟಳು

Public TV
2 Min Read

ಪಾಟ್ನಾ: ವಾಚ್‍ಮ್ಯಾನ್ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯವನ್ನು ನೋಡಿದ ಅಂತಾ 8 ವರ್ಷದ ಬಾಲಕನನ್ನು ಕೊಲೆ ಮಾಡಿದ್ದಾಗಿ, 16 ವರ್ಷದ ಬಾಲಕಿಯೊಬ್ಬಳು ಒಪ್ಪಿಕೊಂಡಿದ್ದಾಳೆ.

ಜುಲೈ 9 ರಂದು ಬಿಹಾರದ ಪಾಟ್ನಾ ಜಿಲ್ಲೆಯ ಹಾಸ್ಟೆಲ್‍ವೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಅಭಿಮನ್ಯು ಕೊಲೆಯಾದ ಬಾಲಕ. ಪ್ರಕರಣದ ಕುರಿತು ಬಾಲಕಿಯನ್ನು ಈ ಮೊದಲು ವಿಚಾರಣೆಗೆ ಒಳಪಡಿಸಿದಾಗ, ಅಭಿಮನ್ಯು ತನ್ನ ಪುಸ್ತಕದ ಹಾಳೆ ಹರೆದಿದ್ದ, ಹೀಗಾಗಿ ಆತನನ್ನು ಜೋರಾಗಿ ದೂಡಿದಾಗ ಕೆಳಗೆ ಬಿದ್ದು ಮೃತಪಟ್ಟಿದ್ದ ಎಂದು ಕಥೆ ಹೇಳಿದ್ದಳು. ಪೊಲೀಸರು ಬಾಲಕಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾಳೆ.

ಅಂದು ನಡೆದಿದ್ದು ಏನು..?
ಅಭಿಮನ್ಯು ಹಾಗೂ ಕೊಲೆ ಮಾಡಿದ ಬಾಲಕಿ ಪಾಟ್ನಾ ಸಮೀಪದ ಫೂತುಹಾದನ ಸೆಫಾಲಿ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು. ಅಭಿಮನ್ಯು ಎಲ್‍ಕೆಜಿ ಹಾಗೂ ಬಾಲಕಿ 8ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಒಂದೇ ಹಾಸ್ಟೆಲ್ ಹಾಗೂ ಒಂದೇ ರೂಮ್‍ನಲ್ಲಿ ಮತ್ತಿಬ್ಬರು ಬಾಲಕಿಯರೊಂದಿಗೆ ಇದ್ದರು. ಬಾಲಕಿ ವಾಚ್‍ಮ್ಯಾನ್ ಪಪ್ಪು ಎಂಬಾತನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಹಿಂದೆಯೂ ಪಪ್ಪು ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದನು.

ಜುಲೈ 6 ರಂದು ರಾತ್ರಿ ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಬರುವಂತೆ ಪಪ್ಪು ಒತ್ತಾಯಿಸಿದ್ದ. ಆದರೆ ಹಾಸ್ಟೆಲ್‍ನಲ್ಲಿ ಎಲ್ಲರೂ ಇದ್ದಾರೆ ನಾನು ಬರುವುದಿಲ್ಲ ಎಂದು ಬಾಲಕಿ ನಿರಾಕರಿಸಿದ್ದಕ್ಕೆ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಹೆದರಿಸಿದ್ದನು. ಹೀಗಾಗಿ ಶೌಚಾಲಯಕ್ಕೆ ಹೋದ ಬಾಲಕಿ ಪಪ್ಪು ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದಾಗ ರೂಮಿನಲ್ಲಿದ್ದ ಅಭಿಮನ್ಯು ನೋಡಿದ್ದನು.

ತನ್ನ ಕೃತ್ಯವನ್ನು ಅಭಿಮನ್ಯು ಬಯಲು ಮಾಡುತ್ತಾನೆ ಎಂದು ಅರಿತ ಬಾಲಕಿ, ಜುಲೈ 8ರಂದು ಅಭಿಮನ್ಯುನ ಕುತ್ತಿಗೆಯನ್ನು 10 ನಿಮಿಷ ಗಟ್ಟಿಯಾಗಿ ಹಿಡಿದು ಕೊಲೆ ಮಾಡಿದ್ದಳು. ಅಲ್ಲದೆ ದೇಹವನ್ನು ಸಾಗಿಸಲು ಪ್ರಯತ್ನಿಸಿ ವಿಫಲವಾಗಿ, ಆತನ ಹಾಸಿಗೆಯಲ್ಲಿ ಮಲಗಿಸಿದ್ದಳು.

ಪ್ರಕರಣ ಗೊತ್ತಾಗುತ್ತಿದ್ದಂತೆ ಹಾಸ್ಟೆಲ್‍ಗೆ ಬಂದ ಪೊಲೀಸರು ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕಟ್ಟು ಕತೆ ಹೇಳಿದ್ದಳು. ಕೊಲೆಯಾದ ದಿನದಿಂದ ಪಪ್ಪು ಕಾಣೆಯಾಗಿದ್ದರಿಂದ ಪೊಲೀಸರು ಬಾಲಕಿ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ತೀವ್ರ ತನಿಖೆಯ ನಂತರ, ತಾನು ಪಪ್ಪು ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವುದನ್ನು ಅಭಿಮನ್ಯು ನೋಡಿದ್ದನು. ಅವನು ಎಲ್ಲಿ ನನ್ನ ಪೋಷಕರಿಗೆ ಹಾಗೂ ಇತರರಿಗೆ ಹೇಳುತ್ತಾನೆ ಎಂದು ಹೆದರಿ ಕೊಲೆ ಮಾಡಿದ್ದಾಗಿ ಬಾಲಕಿ ಸತ್ಯ ಒಪ್ಪಿಕೊಂಡಿದ್ದಾಳೆ.

ಬಾಲಕಿ ನಡತೆ ಸರಿಯಿಲ್ಲ. ಪಪ್ಪು ಜೊತೆಗೆ ಎಲ್ಲಂದರಲ್ಲಿ ಓಡಾಡುತ್ತಾಳೆ ಎಂದು ಅಭಿಮನ್ಯು ನಮ್ಮ ಬಳಿ ದೂರು ನೀಡಿದ್ದ. ಹೀಗಾಗಿ ಬಾಲಕಿ ಬಗ್ಗೆ ಎಚ್ಚರ ವಹಿಸುವಂತೆ ಶಾಲಾ ಆಡಳಿತ ಮಂಡಳಿಯ ತಿಳಿಸಿದ್ದೇವು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮೃತ ಅಭಿಮನ್ಯು ಚಿಕ್ಕಪ್ಪ ಸಂತೋಷ್ ಸಿಂಗ್ ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *