ಹೃದಯಾಘಾತದಿಂದ 7 ತರಗತಿ ವಿದ್ಯಾರ್ಥಿನಿ ಸಾವು

Public TV
1 Min Read

ಚಿಕ್ಕಮಗಳೂರು: ಶಾಲೆಗೆ (School) ತೆರಳುತ್ತಿದ್ದ ವೇಳೆ ಹೃದಯಾಘಾತವಾಗಿ (Heart Attack) 7ನೇ ತರಗತಿ ವಿದ್ಯಾರ್ಥಿನಿ (Student) ಸಾವನ್ನಪ್ಪಿದ ಘಟನೆ ಮೂಡಿಗೆರೆ (Mudigere) ತಾಲೂಕಿನ ಜೋಗಣ್ಣನಕೆರೆ ಗ್ರಾಮದಲ್ಲಿ ನಡೆದಿದೆ.

ಸೃಷ್ಟಿ (13) ಮೃತ ವಿದ್ಯಾರ್ಥಿನಿ. ಈಕೆ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಂದು ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ಸಂದರ್ಭ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾಳೆ. ಆಸ್ಪತ್ರೆಗೆ ಸಾಗಿಸುವ ವೇಳೆ ಬಾಲಕಿ ಸೃಷ್ಟಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: NIAಯಿಂದ ಬಂಧನಕ್ಕೊಳಗಾದ ವಿದ್ಯಾರ್ಥಿಗೆ ಕಾಲೇಜಲ್ಲಿರುವಾಗ್ಲೇ ಇತ್ತು ISIS ಸಂಪರ್ಕ!

ಮೂಡಿಗೆರೆ ಎಂಜಿಎಂ ಸರ್ಕಾರಿ ಆಸ್ಪತ್ರೆ ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದು, ಮಗಳ ಸಾವಿನಿಂದ ಕುಟುಂಬಸ್ಥರು ಆಘಾತಗೊಂಡಿದ್ದಾರೆ. ಇದನ್ನೂ ಓದಿ: ಪ್ರೇಮಿಗಳು ಪರಾರಿ – ಯುವತಿಯ ಕಡೆಯವರಿಂದ ಯುವಕನ ತಂದೆಗೆ ಥಳಿತ

Share This Article