ಐದನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಓರ್ವ ಬಂಧನ

Public TV
1 Min Read

ನವದೆಹಲಿ: ಮುನ್ಸಿಪಲ್ ಕಾರ್ಪೊರೇಷನ್ (Municipal Corporation of Delhi) ನಡೆಸುತ್ತಿದ್ದ ಶಾಲೆಯ (School) ಐದನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಾಲಾ ಸಿಬ್ಬಂದಿಯಿಂದ ಸಾಮೂಹಿಕ ಅತ್ಯಾಚಾರ (Gang-rape) ನಡೆದ ಘಟನೆ ದೆಹಲಿಯಲ್ಲಿ ನಡೆದಿದೆ.

ಆರೋಪಿ ಶಾಲಾ ಸಹಾಯಕ ಅಜಯ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಆತನ ಮೂವರು ಸಹಚರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಘಟನೆ ಮಾ.14 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ನಂತರ ಬಾಲಕಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಳು. ಪರೀಕ್ಷೆಗೆ (exams) ಸಹ ಹಾಜರಾಗಿರಲಿಲ್ಲ. ಇದನ್ನೂ ಓದಿ: ಇಂದಿನಿಂದ ರಂಜಾನ್ ಉಪವಾಸ ಆಚರಣೆ – ಪ್ರಧಾನಿ ಮೋದಿ ವಿಶ್

ಶಿಕ್ಷಕರು ಆಕೆಯ ಸಹೋದರನನ್ನು ಸಂಪರ್ಕಿಸಿ ಅಂತಿಮ ಪರೀಕ್ಷೆಗೆ ಹಾಜರಾಗದ ಬಗ್ಗೆ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಆಕೆಯ ಸಹೋದರ ಶಿಕ್ಷಕರಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

ತಕ್ಷಣದ ಕ್ರಮ ಕೈಗೊಳ್ಳದಿರುವ ಕಾರಣ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ತರಗತಿ ಶಿಕ್ಷಕರಿಗೆ ಶೋಕಾಸ್ ನೋಟಿಸ್ (Notice) ಜಾರಿ ಮಾಡಲಾಗಿದೆ.

ಉತ್ತರ ಪ್ರದೇಶದ (Uttar Pradesh) ಜೌನ್‍ಪುರ  (Jaunpur) ಮೂಲದ ಆರೋಪಿ ಕಳೆದ ಹತ್ತು ವರ್ಷಗಳಿಂದ ಮುನ್ಸಿಪಲ್ ಕಾರ್ಪೊರೇಷನ್ ಶಾಲೆಯಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಪೊಲೀಸರು (Police) ತಿಳಿಸಿದ್ದಾರೆ.

ಆರೋಪಿಗಳು ಬಾಲಕಿಯನ್ನು ಶಾಲೆಯಿಂದ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಮಾದಕ ವಸ್ತು ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಭದ್ರತಾ ಕಾರಣಕ್ಕೆ TikTok ಬ್ಯಾನ್ ಮಾಡಿದ ಬ್ರಿಟಿಷ್ ಸಂಸತ್ತು

Share This Article
Leave a Comment

Leave a Reply

Your email address will not be published. Required fields are marked *