ಛಾವಣಿಯಿಂದ 10ನೇ ತರಗತಿ ವಿದ್ಯಾರ್ಥಿನಿ ತಳ್ಳಿದ ಕೋತಿಗಳು – ಕೆಳಗೆ ಬಿದ್ದು ಬಾಲಕಿ ಸಾವು

Public TV
1 Min Read

ಪಾಟ್ನಾ: ಕೋತಿಗಳ ಗುಂಪೊಂದು ಛಾವಣಿಯಿಂದ ತಳ್ಳಿದ ಪರಿಣಾಮ ಬಿಹಾರದ ಸಿವಾನ್‌ನಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ.

ಪ್ರಿಯಾ ಕುಮಾರಿ ಮೃತಪಟ್ಟ ಬಾಲಕಿ. ಈಕೆ ಛಾವಣಿ ಮೇಲೆ ಕುಳಿತು ಓದುತ್ತಿದ್ದಳು. ಈ ವೇಳೆ ಕೋತಿಗಳು ಆಕೆ ಮೇಲೆ ದಾಳಿ ಮಾಡಿವೆ. ಭಯಭೀತಳಾಗಿ ಕೋತಿಗಳಿಂದ ತಪ್ಪಿಸಿಕೊಳ್ಳಲು ಮುಂದಾದಳು. ಆಗ ಕೋತಿಗಳು ಆಕ್ರಮಣ ಮಾಡಿದವು.

ಛಾವಣಿಯಿಂದ ಬಿದ್ದ ಬಾಲಕಿ ಗಂಭೀರ ಗಾಯಗೊಂಡಿದ್ದಳು. ಆಕೆಯ ತಲೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರವಾದ ಗಾಯಗಳಾಗಿವೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಕುಟುಂಬ ಸದಸ್ಯರು ಚಿಕಿತ್ಸೆಗಾಗಿ ಸಿವಾನ್ ಸದರ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ ಮುಂಬೈನ ಮಹಾಲಕ್ಷ್ಮಿ ಪ್ರದೇಶದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಮತ್ತು ವಸತಿ ಸೊಸೈಟಿಯ ಮಗು, ಮಂಗಗಳ ದಾಳಿಯಿಂದ ಗಾಯಗೊಂಡಿದ್ದರು.

Share This Article