ಮಸೀದಿ ಬಳಿಯ ಅಕ್ರಮ ಕಟ್ಟಡಗಳು ಧ್ವಂಸ – ದೆಹಲಿಯಲ್ಲಿ ಕಲ್ಲುತೂರಾಟ, ಐವರು ಪೊಲೀಸರಿಗೆ ಗಾಯ

2 Min Read

– 2 ಮದುವೆ ಮಂಟಪ, 3 ಫಾರ್ಮಸಿ ನೆಲಸಮ

ನವದೆಹಲಿ: ಇತ್ತೀಚೆಗಷ್ಟೇ ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ನಡೆದಿದ್ದ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ರಾಜಧಾನಿ ದೆಹಲಿಯಲ್ಲಿ (New Delhi) ಮತ್ತೊಂದು ಬೃಹತ್‌ ಬುಲ್ಡೋಜರ್‌ ಕಾರ್ಯಾಚರಣೆ ನಡೆದಿದೆ.

ಇದೇ ಜನವರಿ 6 ಮತ್ತು 7ರ ಮಧ್ಯರಾತ್ರಿ (ಬುಧವಾರ ರಾತ್ರಿ) 1 ಗಂಟೆ ಸುಮಾರಿಗೆ ದೆಹಲಿಯ ತುರ್ಕಮನ್‌ ಗೇಟ್‌ನಲ್ಲಿರುವ ಫೈಜ್-ಎ-ಇಲಾಹಿ ಮಸೀದಿ (Faiz-e-Elahi mosque) ಬಳಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿದೆ. ದೆಹಲಿ ಹೈಕೋರ್ಟ್‌ (Delhi High Court) ಆದೇಶದಂತೆ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಅಧಿಕಾರಿಗಳು ಮಸೀದಿ ಮತ್ತು ಸುತ್ತಮುತ್ತಲಿನ ಕಟ್ಟಡಗಳನ್ನ ಧ್ವಂಸಗೊಳಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಬುಲ್ಡೋಜರ್‌ಗಳಿಂದ ಕಾರ್ಯಾಚರಣೆ ನಡೆಸಲಾಗಿದೆ. ಇದನ್ನೂ ಓದಿ: ತಮಿಳುನಾಡಿನ ದೀಪೋತ್ಸವಕ್ಕೆ ಅನುಮತಿ – ಡಿಎಂಕೆ ಸರ್ಕಾರಕ್ಕೆ ಹಿನ್ನಡೆ, ಕೋರ್ಟ್ ತೀರ್ಪಿಗೆ ಭಕ್ತರ ಸಂತಸ

ಪಾಲಿಕೆ ಅಧಿಕಾರಿಗಳ ಈ ಕಾರ್ಯಾಚರಣೆಯನ್ನು ಸ್ಥಳೀಯ ನಿವಾಸಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ತೆರವು ಕಾರ್ಯಾಚರಣೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿ ಪ್ರತಿಭಟಿಸಿದ್ದಾರೆ. ಈ ವೇಳೆ ಗುಂಪಿನಲ್ಲಿದ್ದ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸದ್ಯ ಅಲ್ಲಿನ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಹೆಚ್ಚಿನ ಪೊಲೀಸ್‌ ಭದ್ರತೆಯನ್ನ ನಿಯೋಜಿಸಲಾಗಿದೆ. ಇದನ್ನೂ ಓದಿ: ವೆನೆಜುವೆಲಾದಂತೆ ಟ್ರಂಪ್ ಭಾರತದ ಪ್ರಧಾನಿ ಮೋದಿಯನ್ನು ಕಿಡ್ನ್ಯಾಪ್ ಮಾಡ್ತಾರಾ? – ಪೃಥ್ವಿರಾಜ್ ಚವಾಣ್ ವಿವಾದಿತ ಹೇಳಿಕೆ

ಐವರು ಪೊಲೀಸರಿಗೆ ಗಾಯ
ಇನ್ನೂ ಕಲ್ಲುತೂರಾಟದ ವೇಳೆ ನಡೆದ ಘರ್ಷಣೆಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ದೆಹಲಿ ಡಿಸಿಪಿ ತಿಳಿಸಿದ್ದಾರೆ. ಘಟನೆಗೆ ಕಾರಣರಾದವರನ್ನ ಗುರುತಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಏನೇನು ಧ್ವಂಸ?
ಒತ್ತುವರಿ ತೆರವು ಕಾರುಆಚರಣೆ ವೇಳೆ ಮಸೀದಿ ಬಳಿಯಿದ್ದ ಮದುವೆ ಮಂಟಪ, 2 ಬೃಹತ್‌ ಮಳಿಗೆಗಳು, ಮೂರು ಫಾರ್ಮಸಿ, ಸೇರಿದಂತೆ ಸುತ್ತಮುತ್ತಲಿನ ಅನೇಕ ಕಟ್ಟಡಗಳನ್ನ ತೆರವುಗೊಳಿಸಲಾಯಿತು. ಇದನ್ನೂ ಓದಿ: ಭಾರತದಲ್ಲಿ ‘ನಕಲಿ ರೇಬೀಸ್ ಲಸಿಕೆ’ ಹಾವಳಿ – ವಿದೇಶಗಳ ಸಲಹೆ ಏನು?

Share This Article