ರಂಜಾನ್ ಮುನ್ನಾ ದಿನವೇ ಎರಡು ಗುಂಪುಗಳ ಮಧ್ಯೆ ಗಲಾಟೆ – ಇಂಟರ್ನೆಟ್ ಸ್ಥಗಿತ

Public TV
1 Min Read

ಜೈಪುರ: ಪವಿತ್ರ ರಂಜಾನ್ `ಈದ್ ಉಲ್ ಫ್ರಿತ್’ ಆಚರಣೆಗೂ ಮುನ್ನಾದಿನವೇ ರಾಜಾಸ್ಥಾನದ ಜೋದ್‌ಪುರದ ಜಲೋರಿ ಗೇಟ್ ಬಳಿ ಮುಸ್ಲಿಂ ಧ್ವಜ ಹಾಗೂ ಧ್ವನಿವರ್ಧಕಗಳನ್ನು ಅಳವಸುವ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿದೆ.

police (1)

ಇಲ್ಲಿನ ಜಲೋರಿ ಗೇಟ್ ಬಳಿಯಿದ್ದ ಹಿಂದೂ ಧ್ವಜವನ್ನು ತೆರವುಗೊಳಿಸಿ ಮುಸ್ಲಿಂ ಧ್ವಜ ಹಾಗೂ ಬ್ಯಾನರ್‌ಗಳನ್ನು ಅಳವಡಿಸುವ ವಿಚಾರಕ್ಕೆ ವಿವಾದ ಏರ್ಪಟ್ಟಿದ್ದು, ಪರಿಸ್ಥಿತಿ ತಿಳಿಗೊಳಿಸಲು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ; PSI ನೇಮಕಾತಿಯಲ್ಲಿ ಅಕ್ರಮ – ಬೆಂಗ್ಳೂರಿನ 7 ಪರೀಕ್ಷಾ ಕೇಂದ್ರಗಳ ಮೇಲೆ ಕಣ್ಣು

ಇಲ್ಲಿನ ಸ್ವಾತಂತ್ರ‍್ಯ ಹೋರಾಟಗಾರ ಬಾಲ್ ಮುಕುಂದ್ ಬಿಸ್ಸಾ ಅವರ ಪ್ರತಿಮೆಯ ಮೇಲೆ ಮುಸ್ಲಿಂ ಧ್ವಜವನ್ನು ಹಾಕಲಾಗಿತ್ತು. ಜಲೋರಿ ವೃತ್ತದಲ್ಲಿ ಈದ್‌ಗೆ ಸಂಬಂಧಿಸಿದ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಮತ್ತೊಂದು ಸಮುದಾಯ ಇದರ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸುತ್ತಿದ್ದಂತೆ ಇತರ ಪ್ರತಿಭಟನಾಕಾರರು ಆಕ್ರೋಶಗೊಂಡು ಪ್ರತಿಭಟನೆಗಿಳಿದಿದ್ದಾರೆ.

_Jodhpur

ಎರಡೂ ಸಮಯದಾಯದ ಜನರಿಂದಲೂ ಕಲ್ಲು ತೂರಾಟ ನಡೆದಿದ್ದು, ವಾಹನಗಳಿಗೆ ಹಾನಿಯಾಗಿದೆ. ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದ್ದು, ಧ್ವನಿವರ್ಧಕವನ್ನು ಕಿತ್ತೆಸೆಯಲಾಗಿದೆ. ನಂತರ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ವೇಳೆ ಪತ್ರಕರ್ತರ ಮೇಲೂ ಲಾಠಿಚಾರ್ಜ್ ನಡೆದಿದ್ದು, 11 ಮಂದಿಗೆ ಗಾಯಗಳಾಗಿವೆ ಎಂದು ವರದಿ ಉಲ್ಲೇಖಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆಸ್ಪತ್ರೆಗೆ ದಾಖಲು – ಪರಿಸ್ಥಿತಿ ಗಂಭೀರ

ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಈ ಘಟನೆ ಸಂಭವಿಸಿರುವುದು ದುರದೃಷ್ಟಕರ. ಜೋದ್ ಪುರದದಲ್ಲಿ ಸಂಪ್ರದಾಯವನ್ನು ಗೌರವಿಸಿ, ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಎಲ್ಲ ಪಕ್ಷದ ನಾಯಕರಲ್ಲಿಮನವಿ ಮಾಡುತ್ತೇನೆ’ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *