Bigg Boss: ಆಟ ಆಡೋಕೆ ಲಾಯಕ್ಕಿಲ್ಲ- ಸ್ನೇಹಿತ್‌ಗೆ ಕಾರ್ತಿಕ್ ಧಮಕಿ

Public TV
2 Min Read

ಬಿಗ್‌ಬಾಸ್ ಆಟ (Bigg Boss Kannada 10) ಇದೀಗ 60ನೇ ದಿನಕ್ಕೆ ಮುನ್ನುಗ್ಗುತ್ತಿದೆ. ಈ ವಾರ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ತಂಡಗಳನ್ನಾಗಿ ಮಾಡಿ ಹೊಸ ಬಗೆಯ ಟಾಸ್ಕ್ ವೊಂದನ್ನ ಕೊಟ್ಟಿದ್ದಾರೆ. ಈ ವೇಳೆ, ಸಂಗೀತಾ, ವಿನಯ್, ನಮ್ರತಾ, ಕಾರ್ತಿಕ್ ನಡುವೆ ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದ್ದರು. ಕ್ಯಾಪ್ಟನ್ ಸ್ನೇಹಿತ್ ಸೈಲೆಂಟ್ ಆಗಿದ್ದರು. ಸ್ನೇಹಿತ್ ನಡೆಗೆ ಸಂಗೀತಾ ಟೀಮ್ ಕ್ಯಾಕರಿಸಿ ಉಗಿದಿದ್ದಾರೆ.

ಗಂಧರ್ವರು ಟೀಮ್ ಗೆ ವರ್ತೂರು ಸಂತೋಷ್ ಕ್ಯಾಪ್ಟನ್ ಆಗಿದ್ರೆ, ರಾಕ್ಷಸರು ಟೀಮ್ ಸಂಗೀತಾ ಕ್ಯಾಪ್ಟನ್ ಆಗಿದ್ದಾರೆ. ಈ ವೇಳೆ ಎರಡು ತಂಡದ ನಡುವೆ ಮಾರಾಮಾರಿ ನಡೆದಿದೆ. ಚಟುವಟಿಕೆ ವೇಳೆ ವಿನಯ್ – ಕಾರ್ತಿಕ್ (Karthik Mahesh) ಮಧ್ಯೆ ತಳ್ಳಾಟ, ನೂಕಾಟ ನಡೆಯಿತು. ಇತ್ತ ನಮ್ರತಾ ಹಾಗೂ ಸಂಗೀತಾ ಮಧ್ಯೆಯೂ ಫಿಸಿಕಲ್ ಅಟ್ಯಾಕ್ ಆಯ್ತು. ಇಷ್ಟೆಲ್ಲಾ ನಡೆಯುತ್ತಿದ್ದರೂ, ಕ್ಯಾಪ್ಟನ್ ಆಗಿ ಬಿಗ್ ಬಾಸ್ ಲೋಕದ ಒಡೆಯನಾಗಿ ಸ್ನೇಹಿತ್ ಸುಮ್ಮನೆ ನೋಡಿಕೊಂಡು ನಿಂತಿದ್ದರು. ಜಗಳ ನಿಲ್ಲಿಸಲು ಸ್ನೇಹಿತ್ (Snehith Gowda) ಪ್ರಯತ್ನಿಸಲೇ ಇಲ್ಲ.‌ ಇದನ್ನೂ ಓದಿ:‘ಆಸೆ’ ಧಾರಾವಾಹಿ ನಿರ್ಮಾಣ ಮಾಡಿದ ನಟ ರಮೇಶ್ ಅರವಿಂದ್

ಎರಡು ತಂಡದ ಕೂಡ ಹೊಡೆದಾಡುವ ಹಂತಕ್ಕೆ ಹೋದರೂ ಏನೂ ಮಾತನಾಡದೇ ಜಗಳ ನೋಡುತ್ತಾ ನಿಂತಿದ್ದಾರೆ. ಈ ವೇಳೆ ತನಿಷಾ, ಆಟ ಫಿಸಿಕಲ್ ಆಗುತ್ತಿದೆ ಆ್ಯಕ್ಷನ್ ತಗೋಳಿ ಎಂದು ಸ್ನೇಹಿತ್‌ಗೆ ಮನವಿ ಮಾಡಿದರೂ ಕ್ಯಾರೆ ಎನ್ನದೇ ನಿಂತಿದ್ದರು. ಆಗ ಕಾರ್ತಿಕ್ ಮಹೇಶ್, ಆಟ ಆಡೋಕೆ ಲಾಯಕ್ಕಿಲ್ಲ ನೀ ಹೊರಡು ಎಂದು ಸ್ನೇಹಿತ್‌ಗೆ ಧಮಕಿ ಹಾಕಿದ್ದಾರೆ.

ಫಿಸಿಕಲ್ ಅಟ್ಯಾಕ್ ಹೆಚ್ಚಾಗಿದ್ರಿಂದ ಆಟವನ್ನ ಸ್ವತಃ ಬಿಗ್ ಬಾಸ್ ನಿಲ್ಲಿಸಿದರು. ಯಾವುದೇ ನಿರ್ಧಾರ ತೆಗೆದುಕೊಳ್ಳದ ಸ್ನೇಹಿತ್‌ಗೆ ಸಂಗೀತಾ & ಟೀಮ್ ಕಟುವಾಗಿ ಟೀಕಿಸಿದ್ದಾರೆ. ನೀವು ಯಾವ ಸೀಮೆ ಕ್ಯಾಪ್ಟನ್ ಅಂತ ಛೀಮಾರಿ ಹಾಕಿದ್ದಾರೆ.

ಸ್ನೇಹಿತ್ ಕ್ಯಾಪ್ಟನ್ ಆಗಿದ್ರೂ ವಿನಯ್ ಮತ್ತು ನಮ್ರತಾ (Namratha Gowda) ಚೇಲನಾಗಿ ಆಟ ಆಡೋದನ್ನ ಬಿಟ್ಟಿಲ್ಲ ಎಂದೂ ಟೀಮ್ ಕ್ರಿಯೇಟ್ ಮಾಡುವಾಗಲೇ ಸ್ನೇಹಿತ್ ವಿರುದ್ದ ಸಂಗೀತ ಸಿಡಿದೆದಿದ್ದರು. ಈ ವಾರಾಂತ್ಯದಲ್ಲಿ ಸುದೀಪ್ ಬೆಂಡೆತ್ತೋಕೆ ಸರಿಯಾದ ಟಾಪಿಕ್ ಸಿಕ್ಕಿದೆ. ಈ ಮೂಲಕ ಸ್ನೇಹಿತ್ ತಮ್ಮ ಗುಂಡಿ ತಾವೇ ತೊಡಿಕೊಂಡಿದ್ದಾರೆ. ಎಲ್ಲದ್ದಕ್ಕೂ ಕಿಚ್ಚನ ಪಂಚಾಯಿತಿಯಲ್ಕಿ ಉತ್ತರ ಸಿಗಲಿದೆ.

Share This Article