ಬಿಜೆಪಿ ಶಾಸಕನಿಗೆ ಉದಯಪುರ ಅರಮನೆ ಪ್ರವೇಶಕ್ಕೆ ನಿರಾಕರಣೆ – ಬೆಂಬಲಿಗರಿಂದ ಕಲ್ಲು ತೂರಾಟ, ಪರಿಸ್ಥಿತಿ ಉದ್ವಿಗ್ನ

Public TV
1 Min Read

ಜೈಪುರ: ಮೇವಾರ್‌ ರಾಜಮನೆತನದ ಬಿಜೆಪಿ ಶಾಸಕ ವಿಶ್ವರಾಜ್‌ ಸಿಂಗ್‌ ಮೇವಾರ್‌ಗೆ ಅರಮನೆ ಪ್ರವೇಶಕ್ಕೆ ನಿರಾಕರಿಸಿದ್ದಕ್ಕೆ ಹೊರಗಡೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಮೇವಾರದ 77ನೇ ಮಹಾರಾಣಾ ಆಗಿ ಬಿಜೆಪಿ ಶಾಸಕ ವಿಶ್ವರಾಜ್ ಸಿಂಗ್ ಮೇವಾರ್ ಪಟ್ಟಾಭಿಷೇಕದ ನಂತರ ಉದಯಪುರ ಅರಮನೆಯಲ್ಲಿ ಗದ್ದಲ ಸೃಷ್ಟಿಯಾಗಿದೆ. ಸಿಂಗ್ ಮತ್ತು ಬೆಂಬಲಿಗರಿಗೆ ಅರಮನೆಗೆ ಪ್ರವೇಶ ನಿರಾಕರಿಸಲಾಯಿತು.

ಇದರಿಂದ ಕುಪಿತಗೊಂಡ ಬೆಂಬಲಿಗರು ರಾತ್ರಿ 10 ಗಂಟೆಯ ನಂತರ ಕಲ್ಲು ತೂರಾಟ ನಡೆಸಿ ಅರಮನೆ ಗೇಟ್‌ಗೆ ನುಗ್ಗಲು ಯತ್ನಿಸಿದರು. ಗಲಭೆ ದೃಶ್ಯದ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಉಡತ್ತಿವೆ. ಘರ್ಷಣೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಪೊಲೀಸರು ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.

ವಿಶ್ವರಾಜ್ ಸಿಂಗ್ ಕೂಡ ನಿನ್ನೆ ರಾತ್ರಿ ಐದು ಗಂಟೆಗಳ ಕಾಲ ಸ್ಥಳದಲ್ಲಿ ತಮ್ಮ ಬೆಂಬಲಿಗರೊಂದಿಗೆ ನಿಂತಿದ್ದರು. ಇದೀಗ ಜಿಲ್ಲಾಡಳಿತ ಮಧ್ಯ ಪ್ರವೇಶಿಸಲು ನಿರ್ಧರಿಸಿದೆ.

ತಂದೆ ಮಹೇಂದ್ರ ಸಿಂಗ್ ಅವರ ಮರಣದ 12 ದಿನಗಳ ನಂತರ ಐತಿಹಾಸಿಕ ಚಿತ್ತೋರ್‌ಗಢ ಕೋಟೆಯಲ್ಲಿ ನಡೆದ ಸಾಂಪ್ರದಾಯಿಕ ಪಟ್ಟಾಭಿಷೇಕ ಸಮಾರಂಭದಲ್ಲಿ ವಿಶ್ವರಾಜ್ ಸಿಂಗ್‌ರನ್ನು ಮೇವಾರ್‌ ರಾಜವಂಶದ ಉತ್ತರಾಧಿಕಾರಿ ಎಂದು ಘೋಷಿಸಲಾಯಿತು. ಪಟ್ಟಾಭಿಷೇಕ ಸಮಾರಂಭದಲ್ಲಿ ಪುರೋಹಿತರು ಪೂಜೆಗಳನ್ನು ಸಲ್ಲಿಸಿ ಹವನವನ್ನು ಮಾಡಿದರು.

Share This Article