ತ್ರಿವಿಕ್ರಮ್ ಗೋಮುಖ ವ್ಯಾಘ್ರ: ಕೆರಳಿದ ಮೋಕ್ಷಿತಾ

Public TV
1 Min Read

ಬಿಗ್ ಬಾಸ್ ಮನೆ (Bigg Boss Kannada 11) ಇದೀಗ ಮತ್ತೆ ರಣರಂಗವಾಗಿದೆ. ಸ್ಪರ್ಧಿಗಳಿಬ್ಬರ ನಡುವೆ ಕಿಚ್ಚು ಹೊತ್ತಿಕೊಂಡಿದೆ. ನಟ ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ನಡುವೆ ವಾಕ್ಸಮರ ಶುರುವಾಗಿದೆ. ಮಾತಿನ ಚಕಮಕಿಯ ನಡುವೆ ಮೋಕ್ಷಿತಾ (Mokshitha Pai) ಅವರು ತ್ರಿವಿಕ್ರಮ್ (Trivikram) ಗೋಮುಖ ವ್ಯಾಘ್ರ ಎಂದು ಕರೆದಿದ್ದಾರೆ. ತ್ರಿವಿಕ್ರಮ್ ವಿರುದ್ಧ ನಟಿ ಕೆರಳಿದ್ದಾರೆ. ಇದನ್ನೂ ಓದಿ:ಕೇರಳದ ಹೇಮಾ ಕಮಿಟಿ ಮೂಲಕ ದಾಖಲಾಗಿದ್ದ ಕೇಸ್ ಬೆಂಗಳೂರಿಗೆ ವರ್ಗಾವಣೆ

ತ್ರಿವಿಕ್ರಮ್ ಮತ್ತು ಮೋಕ್ಷಿತಾ ಈಗ ಮನೆಯಲ್ಲಿ ಹಾವು ಮುಂಗುಸಿಯಾಗಿದ್ದಾರೆ. ಅದರಲ್ಲೂ ತ್ರಿವಿಕ್ರಮ್ ಆಡಿರುವ ಮಾತು ಮೋಕ್ಷಿತಾ ಪೈ ಕಿವಿಗೆ ಬಿದ್ದಿದ್ದು, ಇದೇ ವಿಚಾರವಾಗಿ ವಾಗ್ವಾದಕ್ಕಿಳಿದ್ದಿದ್ದಾರೆ ಮೋಕ್ಷಿತಾ. ಉಗ್ರಂ ಮಂಜು (Ugramm Manju) ಜೊತೆಗೆ ತ್ರಿವಿಕ್ರಮ್ ಮಾತನಾಡುತ್ತಾ, ಅವರು 10 ವಾರಕ್ಕೆ ಬಂದಿರೋರು. 10 ವಾರದ ಬಳಿಕ ಅವರ ಅವಶ್ಯಕತೆ ಇಲ್ಲ ಅಣ್ಣ ಎಂದು ಹೇಳಿದ್ದರು. ಇದೇ ಮಾತು ಈಗ ಮೋಕ್ಷಿತಾ ಕಿವಿಗೆ ಬಿದ್ದಿದೆ. ನಾನು 10 ವಾರ ಇರುತ್ತೇನೆ ಅಂತ ಡಿಸೈಡ್ ಮಾಡೋಕೆ ನೀವು ಯಾರು ಎಂದು ಪ್ರಶ್ನಿಸಿದ್ದಾರೆ ಮೋಕ್ಷಿತಾ. ಅದಕ್ಕೆ ತ್ರಿವಿಕ್ರಮ್, ಆಯ್ತಮ್ಮಾ ನೀನು ಫಿನಾಲೆಗೆ ಹೋಗಮ್ಮ ಎಂದು ತಿರುಗೇಟು ನೀಡಿದ್ದಾರೆ.

ರೊಚ್ಚಿಗೆದ್ದ ಮೋಕ್ಷಿತಾ ಇಷ್ಟಕ್ಕೆ ಸುಮ್ಮನಾಗದೆ, ನಾವೆಲ್ಲಾ ಇಲ್ಲಿ ಏನು ಅಲ್ಲ. ಯಾವುದೋ ಒಂದು ಸೀರಿಯಲ್ ಐದುವರೆ ವರ್ಷ ಮಾಡಿಕೊಂಡು ಬಂದಿದ್ದೀವಿ ಸುಮ್ನೆ. ನೀವು ಏನು ಅಲ್ಲ ತಿಳಿದುಕೊಂಡುಬಿಟ್ಟಿದ್ದೀರಿ. ನೀವು ಗೋಮುಖ ವ್ಯಾಘ್ರ ತರಹ ಆಟ ಆಡ್ತಾ ಇದ್ದೀರಾ. ಇವತ್ತಿಂದ ಆಟ ಶುರು ಎಂದು ಮೋಕ್ಷಿತಾ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ನೀವು ಏನು ತಿಳಿದುಕೊಂಡಿದ್ದೀರಾ ಅದನ್ನು ಸಾಬೀತುಪಡಿಸುತ್ತೇನೆ ಎಂದು ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು ಹಾಕಿದ್ದಾರೆ.

ಬಿಗ್ ಬಾಸ್‌ಗೆ ಬಂದ ದಿನದಿಂದ ಸೈಲೆಂಟ್ ಆಗಿದ್ದ ಪಾರು ಇದೀಗ ತ್ರಿವಿಕ್ರಮ್ ವಿರುದ್ಧ ವೈಲೆಂಟ್ ಆಗಿ ಸಮರ ಸಾರಿರೋದನ್ನು ನೋಡಿ ಸ್ಪರ್ಧಿಗಳು,ಪ್ರೇಕ್ಷಕರು ದಂಗಾಗಿದ್ದಾರೆ. ಮೋಕ್ಷಿತಾ ಇನ್ ಫೈರ್ ಅಂತ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

Share This Article