ಸಿನಿ ರಂಗದೊಂದಿಗೆ ಸಿಜೆ ರಾಯ್‌ ನಂಟು ಅಪಾರ – ಕನ್ನಡ, ಮಲಯಾಳಂ ನಲ್ಲಿ 11 ಸಿನಿಮಾ ನಿರ್ಮಾಣ

2 Min Read

ಬೆಂಗಳೂರು: ಐಟಿ ಅಧಿಕಾರಿಗಳ (IT Officers) ವಿಚಾರಣೆ ವೇಳೆ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಸಿ.ಜೆ ರಾಯ್‌ (CJ Roy) ಕುರಿತು ಅನೇಕ ಸಂಗತಿಗಳು ಹೊರಬೀಳುತ್ತಿವೆ.

ಹೌದು. ಕಾನ್ಫಿಡೆಂಟ್ ಗ್ರೂಪ್ (Confident Group) ಕೇವಲ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಸಿ.ಜೆ ರಾಯ್ ಅವರ ಬಹುಮುಖ ಪ್ರತಿಭೆ ಮತ್ತು ಆಸಕ್ತಿಗಳು ಸಂಸ್ಥೆಯನ್ನ ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಲು ಕಾರಣವಾಗಿತ್ತು. ಸಿನಿ ರಂಗದೊಂದಿಗೂ ಅಪಾರ ನಂಟು ಹೊಂದಿದ್ದ ಉದ್ಯಮಿ, ಮಲಯಾಳಂ ಮತ್ತು ಕನ್ನಡದಲ್ಲಿ 11 ಚಿತ್ರಗಳನ್ನ ನಿರ್ಮಿಸಿದ್ದಾರೆ. ಇದನ್ನೂ ಓದಿ: ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ರಾಯ್‌ – 1 ಗಂಟೆ ಐಟಿ ವಿಚಾರಣೆ ಬಳಿಕ ಆತ್ಮಹತ್ಯೆ; ಆಗಿದ್ದೇನು?

‘ಮರಕ್ಕಾರ್’ ಎಂಬ ಅತಿ ದೊಡ್ಡ ಬಜೆಟ್‌ನ ಮಲಯಾಳಂ ಚಿತ್ರವನ್ನು (Malayalam Cinema) ಸಹ ನಿರ್ಮಿಸಿದ್ದಾರೆ. 2006 ರಲ್ಲಿ, ‘ಐಡಿಯಾ ಸ್ಟಾರ್ ಸಿಂಗರ್’ ಎಂಬ ಜನಪ್ರಿಯ ಟಿವಿ ಕಾರ್ಯಕ್ರಮಕ್ಕೆ ಹಣಕಾಸು ಒದಗಿಸುವ ಮೂಲಕ ಕಾನ್ಫಿಡೆಂಟ್ ಗ್ರೂಪ್ ಅನ್ನು ಪ್ರಚಾರ ಮಾಡುವ ಅವರ ಆಲೋಚನೆ ಯಶಸ್ವಿಯಾಗಿತ್ತು. ದಿವಂಗತರಾದ ಡಾ. ರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಅರೊಂದಿಗೂ ಗುರುತಿಸಿಕೊಂಡಿದ್ದರು. ದಿಗ್ಗಜ ನಟ ಮೋಹನ್‌ ಲಾಲ್‌ ಅವರ ಸಿನಿಮಾವನ್ನೂ ನಿರ್ಮಿಸಿದ್ದರು. ಇದನ್ನೂ ಓದಿ: ಐಟಿ ದಾಳಿಗೆ ಹೆದರಿ ಶೂಟ್ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

ಸಿಜೆ ರಾಯ್‌ ನಿರ್ಮಿಸಿದ ಸಿನಿಮಾಗಳು
* ಮರಕ್ಕರ್: ಅರೇಬಿಕಡಲಿಂಟೆ ಸಿಂಹಂ (2021): ಮೋಹನ್‌ಲಾಲ್ ಅಭಿನಯದ ಈ ಚಿತ್ರಕ್ಕೆ ಕಾನ್ಫಿಡೆಂಟ್ ಗ್ರೂಪ್ ಸಹ-ನಿರ್ಮಾಪಕರಾಗಿದ್ದರು.
* ಮೇ ಹೂಂ ಮೂಸಾ (2022): ಸುರೇಶ್ ಗೋಪಿ ಮುಖ್ಯ ಭೂಮಿಕೆಯಲ್ಲಿದ್ದ ಮಲಯಾಳಂ ಚಿತ್ರ.
* ಕ್ರೇಜಿ ಲೋಕ (2012): ವಿ. ರವಿಚಂದ್ರನ್ ಅಭಿನಯದ ಕನ್ನಡ ಚಿತ್ರ.
* ಕಾಜಿನೋವಾ (2012): ಮೋಹನ್‌ಲಾಲ್ ಅಭಿನಯದ ಈ ಚಿತ್ರವನ್ನು ರಾಯ್ ಸಿ.ಜೆ ನಿರ್ಮಿಸಿದ್ದರು.
* ಲೇಡೀಸ್ ಅಂಡ್ ಜಂಟಲ್‌ಮನ್ (2013): ಮಲಯಾಳಂ ಚಿತ್ರರಂಗದ ಮತ್ತೊಂದು ಗಮನಾರ್ಹ ಸಿನಿಮಾ.
* ಅಲೋನ್ (2023): ಮೋಹನ್‌ಲಾಲ್ ಏಕೈಕ ಪಾತ್ರದಲ್ಲಿ ನಟಿಸಿದ ಚಿತ್ರ.
* ಐಡೆಂಟಿಟಿ (2025): ಇತ್ತೀಚೆಗೆ ಬಿಡುಗಡೆಗೆ ಸಜ್ಜಾಗಿರುವ ಚಿತ್ರ.

ಸಾದರಪಡಿಸಿದ (Presented) ಕನ್ನಡ ಚಿತ್ರಗಳು 
* ರಾಧನ ಗಂಡ (2013)
* ರಂಗಪ್ಪ ಹೋಗ್ಬಿಟ್ನಾ (2011)
* ಮತ್ತೆ ಬನ್ನಿ ಪ್ರೀತಿಸೋಣ (2011)
* ಪ್ರೀತಿಯಿಂದ ರಮೇಶ್ (2010)

Share This Article