ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬುಲೆಟ್ ಓಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
650 ಎಂಜಿನ್ ಸಾಮರ್ಥ್ಯದ ಹಿಮಾಲಯನ್ ಬುಲೆಟ್ ಬೈಕನ್ನು ಆಯುಕ್ತರು ಓಡಿಸಿದ್ದಾರೆ. ಕಮಿಷನರ್ ಹಿಂಬದಿಯಲ್ಲಿ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ರವಿಕಾಂತೇಗೌಡ ಸಹ ಕುಳಿತಿದ್ದಾರೆ. ಬುಲೆಟ್ ಬೈಕ್ ಓಡಿಸಿ ಒಂದೊಳ್ಳೆಯ ರೈಡ್ ಅಂತ ಕಮಿಷನರ್ ಹೇಳಿದ್ದಾರೆ.
ಕೊ ರೈಡರ್ ರವಿಕಾಂತೇಗೌಡ ಜೊತೆ ಬೈಕ್ ರೈಡ್ ಎಂದಿರುವ ಕಮಿಷನರ್, ತಲೆಗೆ ಹೆಲ್ಮೆಟ್ ಮತ್ತು ಕೈ ಕಾಲಿಗೆ ಸೇಫ್ಟಿ ಗಾರ್ಡ್ ಧರಿಸಿ ಬೈಕ್ ಚಾಲನೆ ಮಾಡಿದ್ದಾರೆ. ಅಲ್ಲದೇ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಮಹಿಳೆಯರ ಸೇಫ್ಟಿಗಾಗಿ ಬೈಕ್ ರ‍್ಯಾಲಿ ವೇಳೆ ಬುಲೆಟ್ ಓಡಿಸಲಾಗಿದ್ದು, ಮೂರು ದಿನಗಳ ಹಿಂದೆ ಚಾಮರಾಜಪೇಟೆಯ ಸಿಎಆರ್ ಗ್ರೌಂಡ್ ನಿಂದ 20ಕ್ಕೂ ಹೆಚ್ಚು ಮಹಿಳಾ ಸಬ್ ಇನ್ಸ್ ಪೆಕ್ಟರ್ ಗಳು ಬೈಕ್ ರ‍್ಯಾಲಿ ಮಾಡಿದರು. ಮಹಿಳೆಯರ ಸೇಫ್ಟಿಗಾಗಿ ರ‍್ಯಾಲಿ ಆಯೋಜನೆ ಮಾಡಲಾಗಿದ್ದು, ನಂದಿ ಹಿಲ್ಸ್ ವರೆಗೆ ಬೈಕ್ ರೈಡ್ ಮಾಡಲಾಗಿತ್ತು.
A good ride on 650 CC Himalayan Bullet, my corider is RaviKant our Joint CP Traffic… pic.twitter.com/jHV12px9ZY
— Bhaskar Rao (@Nimmabhaskar22) January 18, 2020