ಮತ್ತೆ ಬಾಲಿವುಡ್‌ಗೆ ಕಮ್‌ಬ್ಯಾಕ್‌ ಆಗ್ತಾರಾ ಪ್ರಿಯಾಂಕಾ ಚೋಪ್ರಾ- ಇನ್ಸ್ಟಾದಲ್ಲಿ ಕೊಟ್ಟ ಹಿಂಟ್ ಏನು?

By
1 Min Read

‘ಸಿಟಾಡೆಲ್’ (Citadel) ಬೆಡಗಿ ಪ್ರಿಯಾಂಕಾ ಚೋಪ್ರಾ ಮತ್ತೆ ಬಾಲಿವುಡ್‌ಗೆ (Bollywood) ಕಮ್‌ಬ್ಯಾಕ್ ಮಾಡಲಿದ್ದಾರೆ. ಇದಕ್ಕಾಗಿ ಹುಟ್ಟೂರಿಗೆ ನಟಿ ಎಂಟ್ರಿ ಕೊಟ್ಟಿದ್ದು, ಬಾಲಿವುಡ್‌ಗೆ ಮರಳುವ ಬಗ್ಗೆ ನಟಿ ಸುಳಿವು ಕೊಟ್ಟಿದ್ದಾರೆ. ಇದನ್ನೂ ಓದಿ:ವಿಜಯ್‌ ದೇವರಕೊಂಡ ಅಲ್ಲ, ರಾಮ್‌ ಪೋತಿನೇನಿಗೆ ರುಕ್ಮಿಣಿ ವಸಂತ್‌ ನಾಯಕಿ

‘ಪಾನಿ’ ಎಂಬ ಸಿನಿಮಾ ಮೂಲಕ ಪ್ರಿಯಾಂಕಾ ಚೋಪ್ರಾ (Priyanka Chopra) ನಿರ್ಮಾಪಕಿಯಾಗಿ ಬಾಲಿವುಡ್‌ಗೆ ಮರಳುತ್ತಿದ್ದಾರೆ. ಈ ಚಿತ್ರವು ಅಕ್ಟೋಬರ್‌ನಲ್ಲಿ ರಿಲೀಸ್ ಆಗಲಿದೆ. ಇನ್ನೂ ‘ಪಾನಿ’ ಸಿನಿಮಾ ತಂಡವನ್ನು ಸದ್ಯದಲ್ಲೇ ನಟಿ ಭೇಟಿಯಾಗಲಿದ್ದಾರೆ. ಇದನ್ನೂ ಓದಿ:ಬಂಗಾರದ ಬೆಳೆ ತೆಗೆದ ‘ಸ್ತ್ರೀ 2’- 11 ದಿನದಲ್ಲಿ ವಿಶ್ವದಾದ್ಯಂತ 560 ಕೋಟಿ ಗಳಿಕೆ ಮಾಡಿದ ಶ್ರದ್ಧಾ ಕಪೂರ್ ಚಿತ್ರ

ಇನ್ನೂ ಸಹೋದರ ಸಿದ್ಧಾರ್ಥ್ ಚೋಪ್ರಾ ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮುಂಬೈ ಸಿಟಿಯ ಫೋಟೋವನ್ನು ಪ್ರಿಯಾಂಕಾ ಹಂಚಿಕೊಂಡಿದ್ದಾರೆ. ಈ ಬೆನ್ನಲ್ಲೇ ನಟಿ ಮತ್ತೆ ನಟನೆಗೂ ಕಮ್‌ಬ್ಯಾಕ್ ಮಾಡಲಿದ್ದಾರೆ. ಅದಕ್ಕಾಗಿಯೇ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಹೊಸ ಸಿನಿಮಾದ ಕಥೆ ಕೂಡ ನಟಿ ಒಪ್ಪಿಕೊಂಡಿದ್ದಾರೆ ಎಂಬುದು ಇನ್‌ಸೈಡ್ ನ್ಯೂಸ್. ನಿಜನಾ ಎಂಬುದನ್ನು ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಪ್ರಿಯಾಂಕಾರ ಕಮ್‌ಬ್ಯಾಕ್ ಸುದ್ದಿಗೆ ಮತ್ತಷ್ಟು ಪುಷ್ಠಿ ಸಿಕ್ಕಿರೋದು ಇತ್ತೀಚೆಗೆ ಅಮೆರಿಕದ ನಟಿಯ ಮನೆಗೆ ಫ್ಯಾಷನ್ ಸಿನಿಮಾ ನಿರ್ದೇಶಕ ಮಧುರ್ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದರ ಸೀಕ್ವೆಲ್ ಬಗ್ಗೆ ಭಾರೀ ಚರ್ಚೆ ಶುರುವಾಗಿತ್ತು. ಹಾಗಾಗಿ ನಟಿಯ ಮುಂಬರುವ ಸಿನಿಮಾ ಬಗ್ಗೆ ಅಭಿಮಾನಿಗಳು ಕ್ಯೂರಿಯಸ್ ಆಗಿದ್ದಾರೆ.

Share This Article