ಬಿಟ್‌ಕಾಯಿನ್ ಹಗರಣ ತನಿಖೆ ನಡೆಸುತ್ತಿದ್ದ ಅಧಿಕಾರಿಗಳ ಮನೆ ಮೇಲೆಯೇ CID ದಾಳಿ

Public TV
1 Min Read

ಬೆಂಗಳೂರು: ಬಿಟ್‌ಕಾಯಿನ್ ಹಗರಣಕ್ಕೆ (Bitcoin Scam) ಮತ್ತೊಂದು ಟ್ವಿಸ್ಟ್ ದೊರಕಿದೆ. ಬಿಟ್‌ಕಾಯಿನ್ ಪ್ರಕರಣ ತನಿಖೆ ನಡೆಸುತ್ತಿದ್ದ ಅಧಿಕಾರಿಗಳ ಮನೆಗಳ ಮೇಲೆಯೇ 7 ಕಡೆ ಸಿಐಡಿ ದಾಳಿ (CID Raid) ನಡೆಸಿದೆ.

ಬಿಟ್‌ಕಾಯಿನ್ ಹಗರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ. ಹಗರಣದ ಕಿಂಗ್‌ಪಿನ್ ಹ್ಯಾಕರ್ ಶ್ರೀಕಿ ಜೊತೆ ಸೇರಿ ಕೆಲ ಸಾಕ್ಷ್ಯ ನಾಶ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿರುವ ಹಿನ್ನೆಲೆ ಒಟ್ಟು 5 ಪೊಲೀಸ್ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಸಿಐಡಿ ಎಡಿಜಿಡಿ ಮನೀಶ್ ಕರ್ಬೀಕರ್ ನೇತೃತ್ವದ ತಂಡ ದಾಳಿ ನಡೆಸಲಾಗಿದೆ.

ಕಳೆದ ವಾರವಷ್ಟೇ ಹರ್ವೀಂದ್ರ ಸಿಂಗ್, ನಿತಿನ್ ಮೆಶ್ರಾಮ್, ದರ್ಶಿತ್ ಪಟೇಲ್ ಎಂಬುವವರನ್ನು ಸಿಐಡಿ ಸ್ಪೆಷಲ್ ಟೀಂ ಬಂಧಿಸಿತ್ತು. ಸೈಬರ್ ಎಕ್ಸ್‌ಪರ್ಟ್ ಸಂತೋಷ್ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಲಾಗಿತ್ತು. ಸಂತೋಷ್ ಕಚೇರಿಯಲ್ಲಿಯೇ ಶ್ರೀಕಿಯನ್ನು 20 ದಿನ ಇರಿಸಿ, ಆತನನ್ನು ಬಳಸಿಕೊಂಡು ಹ್ಯಾಕ್ ಮಾಡಲಾಗಿತ್ತು. ಇದನ್ನೂ ಓದಿ: ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ: ಪೂರ್ಣಾವಧಿ ಸಿಎಂ ಪ್ರಶ್ನೆಗೆ ಸಿದ್ದರಾಮಯ್ಯ ಮಾತು

ಲ್ಯಾಪ್‌ಟಾಪ್ ಅನ್ನು ಎಸ್‌ಐಟಿಗೆ ನೀಡದ ಹಿನ್ನೆಲೆ ದಾಳಿ ನಡೆಸಿದೆ. ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಮನೆಯ ಮೇಲೆ 10 ಜನರ ತಂಡದಿಂದ ಎಸ್‌ಐಟಿ ದಾಳಿ ಮಾಡಿದೆ. ಇದೀಗ ಎಸ್‌ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ವಿದ್ಯುಕ್ತ ಚಾಲನೆ – 35 ಕ್ಕೂ ಅಧಿಕ ಸಂಸ್ಥೆಗಳು ಭಾಗಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್