ಕ್ರಿಸ್ಮಸ್ ಸ್ಪೆಷಲ್ – ತಂದೂರಿ ಚಿಕನ್ ಮಾಡುವುದು ಹೇಗೆ?

Public TV
2 Min Read

ಇಂದು ಕ್ರಿಸ್ಮಸ್ ಹಬ್ಬ, ಪ್ರಪಂಚದಾದ್ಯಂತ ಮೂಲೆ ಮೂಲೆಗಳಲ್ಲಿ ಈ ಹಬ್ಬವನ್ನು ಜನರು ಆಚರಿಸುತ್ತಾರೆ. ಈ ದಿನ ಒಂದು ಸ್ಪೆಷನ್ ನಾನ್‌ವೆಜ್ ಅಡುಗೆ ಮನೆಯಲ್ಲಿ ಮಾಡಿಲ್ಲವೆಂದರೆ ಹೇಗೆ? ನಾವಿಂದು ತಂದೂರಿ ಚಿಕನ್ (Tandoori Chicken) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವೂ ಇದನ್ನು ಮಾಡಿ ಹಬ್ಬವನ್ನು ಆಚರಿಸಿ.

ಬೇಕಾಗುವ ಪದಾರ್ಥಗಳು:
ಎಣ್ಣೆ – 3 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಗರಂ ಮಸಾಲಾ ಪುಡಿ – 1 ಟೀಸ್ಪೂನ್
ಮೊಸರು – 1 ಕಪ್
ನಿಂಬೆ ರಸ – 2 ಟೀಸ್ಪೂನ್
ಹೆಚ್ಚಿದ ಬೆಳ್ಳುಳ್ಳಿ – 4 ಎಸಳು
ಶುಂಠಿ ಪೇಸ್ಟ್ – 2 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಸ್ಕಿನ್‌ಲೆಸ್ ಚಿಕನ್ ಲೆಗ್ ಪೀಸ್ – 4 (ಡ್ರಮ್‌ಸ್ಟಿಕ್ ಹಾಗೂ ತೊಡೆ ಬಳಸಿ) ಇದನ್ನೂ ಓದಿ: ಸಂಡೇ ಸ್ಪೆಷಲ್ – ಫಟಾಫಟ್ ಅಂತಾ ಮಾಡಿ ಹೊಸ‌ ರುಚಿಯ ಫಿಶ್ ಫ್ರೈಡ್‌ರೈಸ್

ಮಾಡುವ ವಿಧಾನ:
* ಮೊದಲಿಗೆ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ಕೊತ್ತಂಬರಿ, ಜೀರಿಗೆ, ಅರಿಶಿನ, ಗರಂ ಮಸಾಲಾ, ಕೆಂಪು ಮೆಣಸಿನ ಪುಡಿ ಸೇರಿಸಿ, ಪರಿಮಳ ಬರುವವರೆಗೆ ಹುರಿದುಕೊಳ್ಳಿ. ಬಳಿಕ ತಣ್ಣಗಾಗಲು ಬಿಡಿ.
* ಈಗ ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಂಡು, ಅದಕ್ಕೆ ಹುರಿದಿಟ್ಟುಕೊಂಡ ಮಸಾಲೆ, ನಿಂಬೆ ರಸ, ಬೆಳ್ಳುಳ್ಳಿ, ಉಪ್ಪು, ಶುಂಠಿ ಸೇರಿಸಿ ಮಿಶ್ರಣ ಮಾಡಿ.
* ಈಗ ಚಿಕನ್ ತುಂಡುಗಳನ್ನು ತೆಗೆದುಕೊಂಡು, ಅವುಗಳ ಮೇಲೆ ಚಾಕುವಿನಿಂದ 3-4 ಆಳವಾದ ಸೀಳುಗಳನ್ನು ಮಾಡಿ.
* ಈಗ ಮೊಸರಿನ ಮಿಶ್ರಣದಲ್ಲಿ ಚಿಕನ್ ತುಂಡುಗಳನ್ನು ಅದ್ದಿ, ಮುಚ್ಚಿ, 5 ಗಂಟೆಗಳ ಕಾಲ ಫ್ರಿಜ್‌ನಲ್ಲಿ ವಿಶ್ರಾಂತಿ ನೀಡಿ.
* ಈಗ ನೀವು ಗ್ರಿಲ್ ಅನ್ನು ತಯಾರಿಸಿಟ್ಟುಕೊಳ್ಳಿ. ಒಂದು ಬದಿ ನೇರವಾಗಿ ಶಾಖ ಬೀಳುವಂತೆ ಹಾಗೂ ಒಂದು ಬದಿ ಗ್ರಿಲ್ ಅನ್ನು ತಣ್ಣಗಿರಲು ಬಿಡಿ.

* ಮ್ಯಾರಿನೇಟ್ ಮಾಡಿರುವ ಚಿಕನ್ ತುಂಡುಗಳನ್ನು ತೆಗೆದುಕೊಂಡು, ಹೆಚ್ಚುವರಿ ಮ್ಯಾರಿನೇಶನ್ ಮಿಶ್ರಣವಿದ್ದರೆ ಅದನ್ನು ಅಲುಗಾಡಿಸಿ, ಬಿಸಿಯಾಗಿರುವ ಗ್ರಿಲ್ ಮೇಲಿರಿಸಿ.
* ಗ್ರಿಲ್ ಅನ್ನು ಕವರ್ ಮಾಡಿ, 2-3 ನಿಮಿಷ ಬೇಯಿಸಿ.
* ಬಳಿಕ ಚಿಕನ್ ತುಂಡುಗಳನ್ನು ಮಗುಚ ಹಾಕಿ ಇನ್ನೊಂದಿ ಬದಿಯಲ್ಲಿ 2-3 ನಿಮಿಷ ಬೇಯಿಸಿಕೊಳ್ಳಿ.
* ಈಗ ಚಿಕನ್ ತುಂಡುಗಳನ್ನು ಗ್ರಿಲ್‌ನ ಸ್ವಲ್ಪ ತಣ್ಣಗಿರುವ ಭಾಗದಲ್ಲಿ ಇಟ್ಟು, ಕವರ್ ಮಾಡಿ, 20-30 ನಿಮಿಷ ಬೇಯಿಸಿ.
* ಇದೀಗ ತಂದೂರಿ ಚಿಕನ್ ತಯಾರಾಗಿದ್ದು, 5 ನಿಮಿಷ ಅವುಗಳನ್ನು ತಣ್ಣಗಾಗಲು ಬಿಟ್ಟು ಬಳಿಕ ಸವಿಯಿರಿ. ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಸಿಗಡಿ ಚಿಲ್ಲಿ ಫ್ರೈ ಮಾಡಿ ನೋಡಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *