ಮನೆಯಲ್ಲಿ ಹನಿಕೇಕ್ ಮಾಡಿ ಆರೋಗ್ಯಕರ ಕ್ರಿಸ್‍ಮಸ್ ಆಚರಿಸಿ

Public TV
3 Min Read

ಮಂಗಳವಾರ ಕ್ರಿಸ್‍ಮಸ್ ಹಬ್ಬ. ಈಗಾಗಲೇ ಜನರು ಕ್ರಿಸ್‍ಮಸ್ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಲಂಕಾರಿಕ ವಿದ್ಯುತ್ ದೀಪಗಳು, ಕ್ರಿಸ್‍ಮಸ್ ಟ್ರೀ, ಸಾಂತಾ ಡ್ರೆಸ್ ಹೀಗೆ ಸಿದ್ಧತೆ ಭರ್ಜರಿಯಾಗಿಯೇ ನಡೆದಿದೆ. ಮಾರುಕಟ್ಟೆಗಳಲ್ಲಿ ಕ್ರಿಸ್‍ಮಸ್ ಟ್ರೀಗಳ ಅಲಂಕಾರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. ಹಬ್ಬ ಅಂದಮೇಲೆ ಮನೆಯಲ್ಲಿ ಸಿಹಿ ಇರಲೇಬೇಕು. ಕ್ರಿಸ್‍ಮಸ್ ಅಂದ್ರೆ ಕೇಕ್ ಬೇಕೇ ಬೇಕು. ಇತ್ತೀಚಿನ ದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ಕೆಲ ವ್ಯಾಪಾರಿ ಅಪಾಯಕಾರಿ ಕೆಮಿಕಲ್ ಬಳಸಿ ನೋಡಲು ಚೆನ್ನಾಗಿ ಕಾಣುವ ಕೇಕ್ ತಯಾರಿಸಿ ಮಾರಟಕ್ಕೀಡುತ್ತಾರೆ. ಕೆಮಿಕಲ್ ಮಿಶ್ರಿತ ಕೇಕ್ ತಿನ್ನುವ ಬದಲು ಮನೆಯಲ್ಲಿಯೇ ತಯಾರಿಸಿ ಆರೋಗ್ಯಕರ ಕ್ರಿಸ್‍ಮಸ್ ಆಚರಿಸಿ.

ಸಿಂಪಲ್ ಹನಿಕೇಕ್ ಮಾಡುವ ವಿಧಾನಗಳು

ಬೇಕಾಗುವ ಸಾಮಾಗ್ರಿಗಳು
* ಮೈದಾ ಹಿಟ್ಟು – 1 ಕಪ್
* ಜೋಳದ ಹಿಟ್ಟು – 1.5 ಸ್ಪೂನ್
* ಉಪ್ಪು – ಚಿಟಿಕೆ
* ಬೇಕಿಂಗ್ ಪೌಡರ್, ಸೋಡಾ – 1 ಸ್ಪೂನ್
* ಕಂಡೆನ್ಡ್ಸ್ ಮಿಲ್ಕ್ – 200 ಎಂಎಲ್
* ಸಕ್ಕರೆ ಪುಡಿ – 3 ಸ್ಪೂನ್
* ವೆನಿಲಾ ಎಸೆನ್ಸ್ – 1 ಸ್ಪೂನ್
* ಅಡುಗೆ ಎಣ್ಣೆ – ಅರ್ಧ ಕಪ್
* ಹಾಲು – ಅರ್ಧ ಕಪ್
* ವೆನಿಗರ್ – ಅರ್ಧ ಸ್ಪೂನ್
* ಸಕ್ಕರೆ – ಅರ್ಧ ಕಪ್
* ಜೇನುತುಪ್ಪ – 2-3 ಸ್ಪೂನ್
* ಜಾಮ್ – ಅರ್ಧ ಕಪ್
* ಒಣಕೊಬ್ಬರಿ ಪೌಡರ್ – ಅರ್ಧ ಕಪ್

ಮಾಡುವ ವಿಧಾನ
* ಮೊದಲು ಒಂದು ಬೌಲ್‍ಗೆ ಮೈದಾ ಹಿಟ್ಟು, ಜೋಳದ ಹಿಟ್ಟು, ಚಿಟಿಕೆ ಉಪ್ಪು, ಬೇಕಿಂಗ್ ಪೌಡರ್, ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ.
* ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಕಂಡೆನ್ಡ್ಸ್ ಮಿಲ್ಕ್, 1 ಸ್ಪೂನ್ ಸಕ್ಕರೆ ಪುಡಿ, 1 ಸ್ಪೂನ್ ವೆನಿಲಾ ಎಸೆನ್ಸ್ ಸೇರಿಸಿ ಮಿಕ್ಸ್ ಮಾಡಿ..
* ಮಿಶ್ರಣಕ್ಕೆ ಅರ್ಧ ಕಪ್ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ಈಗ ಮೊದಲು ಮಿಶ್ರಣ ಮಾಡಿದ ಮೈದಾ, ಜೋಳದ ಹಿಟ್ಟು ಮಿಶ್ರಣವನ್ನು ಸೇರಿಸಿ ಹಾಲು ಸೇರಿಸಿ ಮಿಕ್ಸ್ ಮಾಡಿ
* ಮಿಶ್ರಣದ ಬ್ಯಾಟರ್‍ನಲ್ಲಿ ಯಾವುದೇ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ. ಮಿಶ್ರಣ ತೀರ ಗಟ್ಟಿಯಾಗಿ, ತೆಳ್ಳಗೂ ಇರಬಾರದು.
* ಈಗ ಅರ್ಧ ಸ್ಪೂನ್ ವೆನಿಗರ್ ಸೇರಿಸಿ ಮಿಕ್ಸ್ ಮಾಡಿಟ್ಟುಕೊಳ್ಳಿ.
* ಈಗ ಒಂದು ಕೇಕ್ ಪ್ಯಾನ್‍ಗೆ ಎಣ್ಣೆ ಸವರಿ ಕೇಕ್ ಪೇಪರ್ ಹಾಕಿ. ಅದರ ಮೇಲೆ ಮಿಶ್ರಣವನ್ನು ಸಮ ಪ್ರಮಾಣದಲ್ಲಿ ಹಾಕಿ.

* ಈಗ ಪ್ರಿಹೀಟ್ ಆಗಿರುವ ಓವನ್‍ನಲ್ಲಿ ಪ್ಯಾನ್ ಇಟ್ಟು 180 ಡಿಗ್ರಿಯಲ್ಲಿ 35 ನಿಮಿಷ ಬೇಯಿಸಿ.
* ಕೇಕ್ ಬೇಯುವಷ್ಟರಲ್ಲಿ ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ಅರ್ಧ ಕಪ್ ಸಕ್ಕರೆ, ಅರ್ಧ ಕಪ್ ನೀರು ಸೇರಿಸಿ. ಕರಗುವ ತನಕ ಕಾಯಿಸಿ. ದಪ್ಪ ಪಾಕ ಬೇಡ.
* ಸಕ್ಕರೆ ಕರಗಿದ ಮೇಲೆ ಕೆಳಗಿಳಿಸಿ. ಸ್ವಲ್ಪ ಆರಿದ ಮೇಲೆ 2-3 ಸ್ಪೂನ್ ಜೇನು ಸೇರಿಸಿ.
* ಬಳಿಕ ಒಂದು ನಾನ್‍ಸ್ಟಿಕ್ ಪ್ಯಾನ್‍ಗೆ ರೆಡಿ ಇರುವ ಜಾಮ್ ತೆಗೆದುಕೊಳ್ಳಿ. (ಕಿಸಾನ್ ಜಾಮ್, ಫ್ರೂಟ್ ಜಾಮ್ ಯಾವುದಾದರೂ ಬಳಸಬಹುದು)
* ಒಂದು ಕಪ್‍ನಷ್ಟು ಜಾಮ್‍ಗೆ 1 ಸ್ಪೂನ್ ಪುಡಿ ಸಕ್ಕರೆ ಸೇರಿಸಿ. 2 ನಿಮಿಷ ಬೇಯಿಸಿ. ಜಾಮ್ ಲಿಕ್ವಿಡ್ ರೂಪಕ್ಕೆ ಬಂದಾಗ ಕೆಳಗಿಳಿಸಿ.
* ಈಗ ಓವನ್‍ನಲ್ಲಿಟ್ಟ ಕೇಕ್ ಹೊರ ತೆಗೆದು ಒಂದು ಗಾರ್ನಿಷಿಂಗ್ ಪ್ಲೇಟ್‍ಗೆ ಹಾಕಿ.
* ಕೇಕ್‍ನ ಅಂಚುಗಳನ್ನು ಕಟ್ ಮಾಡಿ.
* ಕೇಕ್ ಮೇಲ್ಭಾಗದಲ್ಲಿ ಫೋರ್ಕ್‍ನಿಂದ ಸಣ್ಣ ಸಣ್ಣ ರಂಧ್ರಗಳನ್ನ ಮಾಡಿ..
* ಈಗ ಆ ರಂಧ್ರಗಳ ಮೂಲಕ ಕೇಕ್‍ಗೆ ಸಕ್ಕರೆ ಪಾಕವನ್ನು ಹಾಕಿರಿ.
* ಬಳಿಕ ಮೇಲ್ಭಾಗದಲ್ಲಿ ಕರಗಿಸಿಟ್ಟ ಜಾಮ್ ಅನ್ನು ಲೇಪಿಸಿ.
* ಈಗ ಚಿಕ್ಕ ಚಿಕ್ಕಿ ಭಾಗವಾಗಿ ಕೇಕ್ ಅನ್ನು ಕತ್ತರಿಸಿ, ಮಿಕ್ಕ ಸಕ್ಕರೆ ಪಾಕದಲ್ಲಿ ಕೇಕ್‍ಅನ್ನು ಡಿಪ್ ಮಾಡಿ.
* ಬಳಿಕ ಜಾಮ್ ಭಾಗವನ್ನು ಒಣಕೊಬ್ಬರಿ ಪೌಡರ್ ನಲ್ಲಿ ಡಿಪ್ ಮಾಡಿದ್ರೆ ಹನಿ ಕೇಕ್ ರೆಡಿ.

ಇದನ್ನೂ ಓದಿ: ಕ್ರಿಸ್‍ಮಸ್ ಸ್ಪೆಷಲ್- ಮನೆಯಲ್ಲಿಯೇ ಮಾಡಿ ಕಾರ್ನ್ ಕೇಕ್

Share This Article
Leave a Comment

Leave a Reply

Your email address will not be published. Required fields are marked *