ಮಂಜಿನ ನಗರಿ ಮಡಿಕೇರಿಯಲ್ಲಿ ಕ್ರಿಸ್ಮಸ್ ಸಂಭ್ರಮ -ನಾಡಿನ ಜನತೆ ಸುಖ ಶಾಂತಿಯಿಂದ ಬಾಳಲ್ಲಿ ಎಂದು ಪ್ರಾರ್ಥನೆ

Public TV
1 Min Read

ಮಡಿಕೇರಿ: ಡಿಸೆಂಬರ್ 25ರಂದು ಜಗತ್ತಿನೆಲ್ಲೆಡೆ ಕ್ರಿಸ್ಮಸ್ ಸಂಭ್ರಮ ಮೇಳೈಸುತ್ತೆ. ಹಲವು ತಿಂಗಳಿಂದ ಕಾದು ಕುಳಿತ ಕ್ರಿಸ್ತನ ಆರಾಧಕರು ರಾತ್ರಿಯಿಂದಲೆ ವಿಶೇಷ ಪ್ರಾರ್ಥನೆಗಳ ಮೂಲಕ ಏಸುವಿಗೆ ನಮಿಸುತ್ತಿದ್ದಾರೆ.

ಮಂಜಿನ ನಗರಿ ಮಡಿಕೇರಿಯಲ್ಲಿಯೂ ಸಂಭ್ರಮ ಸಡಗರದಿಂದ ಕ್ರಿಸ್ತನ ಹುಟ್ಟುಹಬ್ಬವನ್ನು ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ. ನಗರದ ಸಂತ ಮೈಕೆಲರ ಚರ್ಚ್ ನವವಧುವಿನಂತೆ ಸಿಂಗಾರಗೊಂಡಿದ್ದು, ಬಣ್ಣ ಬಣ್ಣದ ಲೈಟಿಂಗ್ ಬಲೂನ್‍ಗಳಿಂದ ಮೂಡಿದ ಚಿತ್ತಾರ ನಯನ ಮನೋಹರವಾಗಿದೆ.

ಇಡೀ ಚರ್ಚ್ ಸುಂದರ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಬಾಂಧವರು ಆಗಮಿಸಿ ಪ್ರಾರ್ಥನೆ ಮಾಡುತ್ತಿದ್ದಾರೆ. ರಾತ್ರಿ 12 ಗಂಟೆಗೆ ಏಸುವನ್ನು ಗೋಧಳಿಕೆ ಇಟ್ಟು ಸಂಭ್ರಮಿಸಿದ ಭಕ್ತರು ವಿಶೇಷ ಪ್ರಾರ್ಥನೆ ಮೂಲಕ ಕ್ರಿಸ್ತನನ್ನು ಸ್ಮರಿಸಿದರು.

ರಾತ್ರಿಯಿಂದ ಆರಂಭವಾಗಿರುವ ಕ್ರಿಸ್ಮಸ್ ಸಡಗರ ಇಂದು ಬೆಳಗ್ಗೆವರೆಗೂ ಮುಂದುವರಿದಿದೆ. ಅಷ್ಟೇ ಅಲ್ಲದೇ ನಾಡಿನ ಜನರಿಗೆ ಒಳ್ಳೆಯದು ಮಾಡಲ್ಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ನಂತರ ಮನೆಗೆ ತರೆಳಿ ಬಗೆ ಬಗೆಯ ಕೇಕ್, ವೈನ್, ಆಹಾರ ತಯಾರಿಸಿ ಬಂಧುಗಳೊಂದಿಗೆ ಸಹಭೋಜನ ಮಾಡಿ ಖುಷಿಪಡುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *