ಚೌಕಿದಾರ್ ಸಿನಿಮಾದ `ಓ ಮೈ ಬ್ರೋ’ ಹಾಡಿಗೆ ಭರ್ಜರಿ ರೆಸ್ಪಾನ್ಸ್

By
1 Min Read

ನಿರ್ದೇಶಕ ಚಂದ್ರಶೇಖರ್ ಸಾರಥ್ಯದ ಚೌಕಿದಾರ್ (Chowkidar) ಸಿನಿಮಾ ಈಗಾಗಲೇ ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಹಾಡುಗಳು ಈಗಾಗಲೇ ಹಿಟ್ ಲೀಸ್ಟ್ ಸೇರಿವೆ. ಇತ್ತೀಚಿಗೆ ಬಿಡುಗಡೆಯಾಗಿದ್ದ `ಓ ಮೈ ಬ್ರೋ’ ಸಾಂಗ್‌ಗೆ (OH My Bro Song) ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಎಂಆರ್‌ಟಿ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದ ಈ ಹಾಡು ಈಗ ಒಂದು ಮಿಲಿಯನ್ ಜನರನ್ನು ತಲುಪಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆಯಾಗಿದ್ದ `ಓ ಮೈ ಬ್ರೋ’ ಸಾಂಗ್ ಸಂಗೀತ ಪ್ರಿಯರ ಮೆಚ್ಚುಗೆ ಪಡೆದುಕೊಂಡಿದೆ. ಇದನ್ನೂ ಓದಿ: ಕನ್ನಡದಲ್ಲಿ ಹೊಸ ಮೆಗಾ ಸೀರಿಯಲ್ – ಮಂಗಳವಾರ ʻಮಾಂಗಲ್ಯʼವಾರ

ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ `ಓ ಮೈ ಬ್ರೋ’ ಗೀತೆಗೆ ಖ್ಯಾತ ಗಾಯಕ ಕೈಲಾಸ್ ಖೇರ್ ಧ್ವನಿಯಾಗಿದ್ದಾರೆ. ಸಚಿನ್ ಬಸ್ರೂರ್ ಮ್ಯೂಸಿಕ್ ಒಳಗೊಂಡಿರುವ ಈ ಹಾಡಿಗೆ ನಾಯಕ ಪೃಥ್ವಿ ಅಂಬರ್ (Pruthvi Ambar) ಹಾಗೂ ಹಿರಿಯ ನಟ ಸಾಯಿಕುಮಾರ್ ಬಿಂದಾಸ್ ಆಗಿ ಕುಣಿದಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ನಟಿ ಸಾಯಿ ಧನ್ಸಿಕಾ ಜೊತೆ ನಟ ವಿಶಾಲ್ ನಿಶ್ಚಿತಾರ್ಥ

ಕಲ್ಲಹಳ್ಳಿ ಚಂದ್ರಶೇಖರ್ `ಚೌಕಿದಾರ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ವಿದ್ಯಾದೇವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಧನ್ಯಾ ರಾಮ್‌ಕುಮಾರ್ (Dhanya Ramkumar) ನಾಯಕ ನಟಿಯಾಗಿ ನಟಿಸಿದ್ದಾರೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಹಿರಿಯ ನಟ ಸಾಯಿ ಕುಮಾರ್ ಅವರು ಚೌಕಿದಾರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಸಚಿನ್ ಬಸ್ರೂರು ಸಂಗೀತ, ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿದೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದು, ಮುರುಳಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಜ್ಞಾನೇಶ್ ಮಾತಾಡ್ ಸಂಕಲನ, ಜೈ ಸುಬ್ರಹ್ಮಣ್ಯ ಸಾಹಸ ದೃಶ್ಯಗಳು ಚಿತ್ರಕ್ಕಿದೆ. `ಚೌಕಿದಾರ್’ ಬಹು ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಇದುವರೆಗೆ ಲವರ್ ಬಾಯ್ ಆಗಿದ್ದ ಪೃಥ್ವಿ, ಈ ಚಿತ್ರದಲ್ಲಿ ಬೇರೆಯದ್ದೇ ಅವತಾರ ತಾಳಿದ್ದಾರೆ.

Share This Article