ಹೊಳಲ್ಕೆರೆ ಬಿಜೆಪಿ ಶಾಸಕನಿಂದ ಬೆದರಿಕೆ – ಡೆತ್‌ನೋಟ್‌ ಬರೆದು ಗ್ರಾ.ಪಂ. ಕ್ಲರ್ಕ್‌ ಆತ್ಮಹತ್ಯೆ

Public TV
2 Min Read

ಚಿತ್ರದುರ್ಗ: ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ (Holalkere BJP MLA Chandrappa) ಹೆಸರನ್ನು ಬರೆದಿಟ್ಟು ಗ್ರಾಮ ಪಂಚಾಯತ್‌ ಕ್ಲರ್ಕ್‌ (Village Panchayat Clerk) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ (Chitradurga ) ಜಿಲ್ಲೆಯ ಹೊಸದುರ್ಗದ ಜಾನಕಲ್‌ ಬಳಿ ನಡೆದಿದೆ.

ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿ ಗ್ರಾಮಪಂಚಾಯತ್‌ನ ತಿಪ್ಪೇಸ್ವಾಮಿ ಆತ್ಮಹತ್ಯೆಗೆ (Suicide) ಶರಣಾದ ಕ್ಲರ್ಕ್‌. ಅಕ್ರಮ ಖಾತೆ ಮಾಡಿಕೊಡುವ ವಿಚಾರಕ್ಕೆ ಹೊಳಲ್ಕೆರೆ ಕ್ಷೇತ್ರದ ಶಾಸಕ‌ಎಂ. ಚಂದ್ರಪ್ಪ,ತಾಪಂ ಇಒ‌ ರವಿ ಹಾಗೂ ಗ್ರಾಪಂ ಸದಸ್ಯರಾದ ಮೋಹನ್, ಮೂರ್ತಿ, ಉಗ್ರಪ್ಪ, ಲವ, ರಾಜಪ್ಪ ‌ಒತ್ತಡ‌ ಹೇರಿದ್ದರು. ಪದೇ ಪದೇ ಫೋನ್ ಮಾಡಿ ಕಿರುಕುಳ‌ ನೀಡುತ್ತಿದ್ದರು. ಹೀಗಾಗಿ ಮನನೊಂದು ಅವರ ಕಿರುಕುಳ‌ ತಾಳಲಾರದೇ ನಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಮರಣ ಪತ್ರದಲ್ಲಿ ‌ಮೃತ ತಿಪ್ಪೇಸ್ವಾಮಿ ಉಲ್ಲೇಖಿಸಿದ್ದಾರೆ.

ಶನಿವಾರ ಸಂಜೆ ಆತಹತ್ಯೆಗೆ ಶರಣಾಗಿರುವ ತಿಪ್ಪೇಸ್ವಾಮಿ ಚಿತ್ರದುರ್ಗ ತಾಲ್ಲೂಕಿನ ಸೊಂಡೆಕೊಳ ಮೂಲದವರಾಗಿದ್ದಾರೆ. ಅವರ ಸಂಬಂಧಿಕರಿದ್ದ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮಕ್ಕೆ ನಿನ್ನೆ ತೆರಳಿದ್ದರು. ಈ ವೇಳೆ ದೂರ‌ದ‌ ಜಮೀನಿಗೆ ತೆರಳಿ‌ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 2-3 ಸ್ಥಾನ ಅಲ್ಪಸಂಖ್ಯಾತರಿಗೆ ನೀಡಿ – ಕಾಂಗ್ರೆಸ್‌ಗೆ ಮುಖಂಡರ ಬೇಡಿಕೆ

ಹೊಸದುರ್ಗ ಪೊಲೀಸ್ ಠಾಣೆಗೆ ತಿಪ್ಪೇಸ್ವಾಮಿಯವರ ಪುತ್ರಿ ಆಶಾ ರಾಜಶೇಖರ್ ದೂರು ನೀಡಿದ್ದಾರೆ‌. ದೂರಿನಲ್ಲಿ ಶಾಸಕ ಎಂ.ಚಂದ್ರಪ್ಪ, ತಾ.ಪಂ ಇಓ ರವಿ ಹೆಸರು ಉಲ್ಲೇಖವಿಲ್ಲ. ಗ್ರಾ.ಪಂ ಸದಸ್ಯರ ಕಿರುಕುಳ ಹಿನ್ನಲೆ ಆತ್ಮಹತ್ಯೆ ಎಂದು‌ ಮಾತ್ರ ದೂರು‌ ದಾಖಲಾಗಿದೆ.‌

 


ಈ ಸಂಬಂಧ ದೂರುದಾರರಾದ ಆಶಾ ಅವರನ್ನು ಸಂಪರ್ಕಿಸಿ ಡೆತ್ ನೋಟಲ್ಲಿ ಶಾಸಕರ ಹೆಸರಿದೆ. ಆದರೆ ನೀವ್ಯಾಕೆ ದೂರಿನಲ್ಲಿ ಕೇವಲ ಗ್ರಾಪಂ ಸದಸ್ಯರ ವಿರುದ್ಧ ದೂರು ನೀಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಈ ಪ್ರಕರಣ‌ದ ಸಂಬಂಧ ಏನು ಹೇಳುವುದಿಲ್ಲ.ನಾವು ದುಃಖದಲ್ಲಿದ್ದೇವೆ ಎಂದು ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ.

ಚಿತ್ರದುರ್ಗ ಎಸ್ಪಿ ‌ಪರಶುರಾಮ್‌ ಅವರನ್ನು ಪ್ರಕರಣ ಸಂಬಂಧ ಪಬ್ಲಿಕ್ ಟಿವಿ ದೂರವಾಣಿ ಮೂಲಕ‌ ಸಂಪರ್ಕಿಸಿದೆ. ಆಗ ಅವರು ಈ ಸಂಬಂಧ ದೂರುದಾರರು ದೂರಿನಲ್ಲಿ ನೀಡಿರುವ ವಿಚಾರದ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ. ಒಂದು ವೇಳೆ ಪ್ರಕರಣದ ಸಂಬಂಧ ಅಗತ್ಯವಿದ್ದರೆ ಶಾಸಕರನ್ನು ವಿಚಾರಣೆ ನಡೆಸುತ್ತೇವೆ ಎಂದು ಸ್ಪಷ್ಟ ಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹೊಸದುರ್ಗ ಠಾಣೆ ಪೊಲಿಸರು‌ ತನಿಖೆ ಮುಂದುವರೆಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್