ಕುಚಿಕು ಪತ್ನಿ ಮೇಲೆ ಗೆಳೆಯನ ಕಣ್ಣು-ಸಾಲ ಪಡೆದಿದ್ದಕ್ಕೆ ಒಡೆದ ಸಂಸಾರ

Public TV
1 Min Read

-ಇದು ಮಾಜಿ ಮಂತ್ರಿ ಆಪ್ತನ ಕಾಮಕಾಂಡ

ಚಿತ್ರದುರ್ಗ: ಗಂಡ, ಹೆಂಡತಿ ಜಗಳ ಉಂಡು ಮಲಗೋತನಕ ಎಂಬ ಮಾತಿದೆ. ಆದರೆ ಚಿತ್ರದುರ್ಗ ತಾಲೂಕಿನ ಸಿರಿಗೆರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ, ಮಾಜಿ ಸಚಿವರ ಆಪ್ತ ಮಾಡಿರುವ ಎಡವಟ್ಟಿನಿಂದ ಕುಟುಂಬದಲ್ಲಿ ಬಿರುಕು ಮೂಡಿದೆ.

ಕಳೆದ 20 ವರ್ಷಗಳ ಹಿಂದೆ ಟಿ.ನುಲೇನೂರು ಗ್ರಾಮದ ಪಾರ್ವತಿ ಎಂಬಾಕೆಯನ್ನ ಸಿರಿಗೆರೆಯ ಪರಮೇಶ್ವರ್ ಎಂಬವರು ಮದುವೆಯಾಗಿದ್ದರು. ಪರಮೇಶ್ವರ್ ವೃತ್ತಿಯಲ್ಲಿ ಫೋಟೋಗ್ರಾಫರ್, ಪಾರ್ವತಿ ಶಿಕ್ಷಕಿ. ಇವರಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಹೀಗೆ ಇವರ ಸಂಸಾರ ಸುಂದರವಾಗಿಯೇ ಸಾಗುತ್ತಿತ್ತು. 3 ವರ್ಷಗಳ ಹಿಂದೆ ಪರಮೇಶ್ವರ್ ಮನೆ ಕಟ್ಟೋದಕ್ಕೆ ಅಂತಾ ಜಿಲ್ಲಾ ಪಂಚಾಯತ್ ಸದಸ್ಯ ತಿಪ್ಪೇಸ್ವಾಮಿ ಬಳಿ 9 ಲಕ್ಷ ರೂ. ಸಾಲ ಪಡೆದಿದ್ದನು.

ಇದೇ ಸಾಲ ಇವರ ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟಿದೆ. ತಿಪ್ಪೇಸ್ವಾಮಿ ಬಳಿ ಪಡೆದ ಅಷ್ಟು ಹಣವನ್ನು ಪರಮೇಶ್ವರ್ ಹಿಂದಿರುಗಿಸಿದ್ದರು. ಆದರೆ ಇದನ್ನೇ ನೆಪವಾಗಿಸಿಕೊಂಡ ಈ ತಿಪ್ಪೇಸ್ವಾಮಿ ಪರಮೇಶ್ವರನ ಪತ್ನಿ ಪಾರ್ವತಿಗೆ ಅನೈತಿಕ ಸಂಬಂಧ ಬೆಳಸಿದ್ದನು.

ತಿಪ್ಪೇಸ್ವಾಮಿ ಮತ್ತು ಪಾರ್ವತಿ ಜೊತೆಯಲ್ಲಿದ್ದಾಗ ರೆಡ್‍ಹ್ಯಾಂಡ್ ಆಗಿ ಪರಮೇಶ್ವರನ ಕೈಗೆ ಸಿಕ್ಕಿಬಿದ್ದಿದ್ದಾರೆ. ಆದರೂ ಪರಮೇಶ್ವರ್ ನಯವಾಗಿಯೇ ಇಬ್ಬರಿಗೂ ಬಿಟ್ಟುಬಿಡಿ ಅಂತ ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆ ನಡುವೆಯೂ ಇವರಿಬ್ಬರೂ ತಮ್ಮ ಅಕ್ರಮ ಸಂಬಂಧ ಮುಂದುವರಿಸಿದ್ದರು ಇದರಿಂದ ರೊಚ್ಚಿಗೆದ್ದ ಪರಮೇಶ್ವರ್ ಇಬ್ಬರಿಗೂ ಭರ್ಜರಿ ಗೂಸಾ ಕೊಟ್ಟಿದ್ದಾರೆ. ಆಕ್ರೋಶಗೊಂಡ ಪಾರ್ವತಿ ಈಗ ಗಂಡ ಹಾಗೂ ಮಕ್ಕಳನ್ನು ಬಿಡುವ ಮಟ್ಟಕ್ಕೆ ತಲುಪಿದ್ದಾಳೆ. ಅಲ್ಲದೇ ತಿಪ್ಪೇಸ್ವಾಮಿ ಜೊತೆ ನಾನು ಮದುವೆಯಾಗಿದ್ದೇನೆ. ಹೀಗಾಗಿ ನನ್ನನ್ನು ಪ್ರಶ್ನಿಸಲು ನೀನ್ಯಾರು ಅಂತಾ ತನ್ನ ಗಂಡ ಪರಮೇಶ್ವರ್ ಗೆ ವಿಡಿಯೋ ಕಳಿಸಿದ್ದಾಳೆ.

ಅಂದಹಾಗೆ ಈ ತಿಪ್ಪೇಸ್ವಾಮಿ ಮಾಜಿ ಸಚಿವ ಆಂಜನೇಯನವರ ಬಂಟ. ಹೀಗಿದ್ದುಕೊಂಡು ಒಂದು ಸಂಸಾರವನ್ನೇ ಛಿದ್ರಛಿದ್ರ ಮಾಡಿದ್ದಾನೆ. ಸ್ನೇಹಿತ ಅಂತಾ ನಂಬಿ ತಿಪ್ಪೇಸ್ವಾಮಿ ಜೊತೆ ವ್ಯವಹಾರ ಮಾಡಿದ ತಪ್ಪಿಗೆ ಪರಮೇಶ್ವರ್ ಕುಟುಂಬ ಬೀದಿಗೆ ಬಿದ್ದಿದೆ. ಒಂದೇ ಮನೆಯಲ್ಲಿ ಗಂಡ -ಹೆಂಡತಿ ಪ್ರತ್ಯೇಕವಾಗಿ ವಾಸಿಸುವಂತಾಗಿದೆ. ಹೀಗಾಗಿ ತನಗಾದ ಅನ್ಯಾಯ ಮತ್ಯಾರಿಗೂ ಆಗದಿರಲಿ ಅಂತಾ ಪರಮೇಶ್ವರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *