ಚಿರು ಸರ್ಜಾ ಈಗ ಸಖತ್ ಬ್ಯುಸಿ

Public TV
1 Min Read

ಬೆಂಗಳೂರು: ಬಹುಶಃ ಕನ್ನಡ ಚಿತ್ರರಂಗದ ಬೇರಾವ ಸ್ಟಾರ್ ಗಳೂ ಇಲ್ಲದಷ್ಟು ಬ್ಯುಸಿ ಇರೋ ನಟ ಅಂದರೆ ಅದು ಚಿರಂಜೀವಿ ಸರ್ಜಾ. ಈಗಷ್ಟೇ ಸಿಂಗ ಸಿನಿಮಾದ ಹಾಡಿಗಾಗಿ ಬ್ಯಾಂಕಾಕ್ ಗೆ ಹೋಗಿ ಬಂದಿದ್ದಾರೆ. ರಾಜಮಾರ್ತಾಂಡ, ರಣಮ್, ಆಧ್ಯ, ಜುಗಾರಿ ಕ್ರಾಸ್ ಮತ್ತು ಖಾಕಿ ಸದ್ಯ ಚಿರು ನಟಿಸುತ್ತಿರುವ ಚಿತ್ರಗಳು. ಬ್ಯಾಕ್ ಟು ಬ್ಯಾಕ್ ಕಾಲ್ ಶೀಟ್ ಗಳನ್ನು ಕೊಟ್ಟು ಒಂದು ದಿನ ಕೂಡಾ ಪುರುಸೊತ್ತಿಲ್ಲದೆ ಚಿರು ಸಿನಿಮಾ ಚಿತ್ರೀಕರಣಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಅನೌನ್ಸ್ ಆಗಿ ಚಿತ್ರೀಕರಣಗೊಳ್ಳುತ್ತಿರುವ ಸಿನಿಮಾಗಳೇ ಆರಕ್ಕಿಂತಾ ಹೆಚ್ಚಿವೆ. ಇದರ ಜೊತೆಗೆ ಧೈರ್ಯಂ ಖ್ಯಾತಿಯ ಶಿವ ತೇಜಸ್ ನಿರ್ದೇಶನದ ಸಿನಿಮಾ ಮತ್ತು ಅನಿಲ್ ಮಂಡ್ಯ ನಿರ್ದೇಶನದ ಚಿತ್ರಗಳೂ ಕ್ಯೂನಲ್ಲಿ ನಿಂತಿವೆ.

ಸಾಲದೆಂಬಂತೆ ತರುಣ್ ಶಿವಪ್ಪ ನಿರ್ಮಾಣದ ಸಿನಿಮಾ ಕೂಡಾ ಆರಂಭಗೊಳ್ಳಲಿದೆ. ಇಷ್ಟು ಸಿನಿಮಾಗಳಲ್ಲಿ ಯಾವುದು ಮೊದಲು ಚಿತ್ರೀಕರಣ ಪೂರೈಸಿ, ಬಿಡುಗಡೆಗೆ ತಯಾರಾಗುತ್ತದೋ ಗೊತ್ತಿಲ್ಲ. ಈ ನಡುವೆ ಶಿವತೇಜಸ್ ಮತ್ತು ಅನಿಲ್ ಮಂಡ್ಯ ಸ್ಕ್ರಿಪ್ಟ್ ಕೆಲಸಗಳನ್ನೆಲ್ಲಾ ಮುಗಿಸಿ ಚಿರು ಡೇಟ್ಸ್ ಗಾಗಿ ಕಾದು ಕುಳಿತಿದ್ದಾರೆ. ಈ ಇಬ್ಬರ ಸಿನಿಮಾಗಳಲ್ಲಿ ಯಾವುದು ಮೊದಲು ಮುಹೂರ್ತ ಆಚರಿಸಿಕೊಳ್ಳುತ್ತದೋ ಎನ್ನುವ ಕುತೂಹಲ ಎಲ್ಲರದ್ದಾಗಿದೆ.

ಚಿರು ಇಷ್ಟೊಂದು ಸಿನಿಮಾಗಳನ್ನು ಒಟ್ಟೊಟ್ಟಿಗೇ ಒಪ್ಪಿಕೊಂಡು ಬ್ಯುಸಿಯಾಗಿರೋದರ ನಡುವೆಯೇ ತಮ್ಮ ಪತ್ನಿ ಮೇಘನಾರಾಜ್ ಜೊತೆ ಹತ್ತು ದಿನಗಳ ಕಾಲ ಸ್ವಿಜರ್ ಲೆಂಡ್ ಟ್ರಿಪ್ಪಿಗೆ ಹೋಗಲು ಕೂಡಾ ಟೈಮು ಮಾಡಿಕೊಂಡಿದ್ದಾರೆ. ಇದೇ ತಿಂಗಳ ಮೂರನೇ ವಾರದ ಹೊತ್ತಿಗೆ ಚಿರು ದಂಪತಿ ಫಾರಿನ್ ಟ್ರಿಪ್ಪಿಗೆ ತೆರಳಲಿದೆ.

ಒಟ್ಟಾರೆ ಚಿರು ಬ್ಯುಸಿಯಾಗಿರೋ ರೀತಿಯನ್ನು ನೋಡಿದರೆ ಮದುವೆಯಾದ ಮೇಲೆ ಅವರ ನಸೀಬು ಬದಲಾದಂತೆ ಕಾಣುತ್ತಿದೆ. ಯಾಕೆಂದರೆ, ವರ್ಷಕ್ಕೆ ಒಂದೋ ಎರಡೋ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದ ಚಿರು ಕೈಲೀಗ ಮುಕ್ಕಾಲು ಡಜನ್ ಸಿನಿಮಾಗಳಿವೆ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *