– ಅಭಿಮಾನಿಯಿಂದ ರಾಕಿ ಕಟ್ಟಿಸಿಕೊಂಡು ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಚಿರಂಜೀವಿ
ತೆರೆಮೇಲೆ ಮಾತ್ರವಲ್ಲದೇ ತೆರೆಹಿಂದೆಯೂ ಮೆಗಾಸ್ಟಾರ್ ಚಿರಂಜೀವಿ (Chiranjeevi) ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ರಾಜೇಶ್ವರಿ ಹೆಸರಿನ ಮಹಿಳೆ ಚಿರು ಅವರ ಡೈಹಾರ್ಡ್ ಫ್ಯಾನ್ ಆಗಿದ್ದು, ಮೆಗಾಸ್ಟಾರ್ ಮೇಲಿನ ಅಭಿಮಾನದಿಂದಾಗಿ ಸುಮಾರು 300 ಕಿಲೋಮೀಟರ್ ಸೈಕಲ್ ತುಳಿದು ತನ್ನಷ್ಟಿದ ತಾರೆಯನ್ನು ಭೇಟಿಯಾಗಿ ಖುಷಿಪಟ್ಟಿದ್ದಾರೆ.
ರಾಜೇಶ್ವರಿಯವರು ಅದೋನಿ ನಗರದವರು. ಅದೋನಿಯಿಂದ ಹೈದ್ರಾಬಾದ್‌ಗೆ (Hyderabad) ಬರೋಬ್ಬರಿ 300 ಕಿಮೀ ಸೈಕಲ್ ಸವಾರಿಯಲ್ಲಿ ಬಂದ ರಾಜೇಶ್ವರಿಯವರನ್ನು ಚಿರಂಜೀವಿ ಪ್ರೀತಿಯಿಂದಲೇ ತಮ್ಮ ಮನೆಗೆ ಸ್ವಾಗತಿಸಿದ್ದಾರೆ. ಆಕೆಯ ಅಭಿಮಾನ ಕಂಡು ಪುಳಕಿತರಾಗಿದ್ದಾರೆ. ಅಭಿಮಾನಿಯಿಂದ (Chiranjeevi Fan) ರಾಕಿ ಕಟ್ಟಿಸಿಕೊಂಡು ಅಣ್ಣನ ಜವಾಬ್ದಾರಿ ಹೊತ್ತರಲ್ಲದೇ ಆಕೆಗೆ ತಂಗಿಯ ಸ್ಥಾನ ನೀಡಿದ್ದಾರೆ. ಇದನ್ನೂ ಓದಿ: ಸೆ.3ರಿಂದ ಶಿವಣ್ಣ – ಪವನ್ ಒಡೆಯರ್ ಕಾಂಬಿನೇಷನ್ ಚಿತ್ರ ಶುರು; ಮಂಡ್ಯದಲ್ಲೂ ಶೂಟಿಂಗ್‌ಗೆ ಪ್ಲ್ಯಾನ್
ರಾಜೇಶ್ವರಿಯಂತಹ ಅಪರೂಪದ ಅಭಿಮಾನಕ್ಕೆ ಚಿರಂಜೀವಿ ಚಿಕ್ಕ ಕಾಣಿಕೆ ಕೂಡ ನೀಡಿದ್ದಾರೆ. ರಾಜೇಶ್ವರಿಗೆ ಸೀರೆ ಕೊಟ್ಟು ಸತ್ಕರಿಸಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಇಟ್ಟ ಚಿರಂಜೀವಿ ರಾಜೇಶ್ವರಿ ಅವರ ಇಬ್ಬರ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊರುವ ಭರವಸೆ ಕೊಟ್ಟು ಕಳುಹಿಸಿದ್ದಾರೆ. ಇದನ್ನೂ ಓದಿ: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಸಭ್ಯ ಕಾಮೆಂಟ್ – 5 ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ FIR