ʻಬುರುಡೆʼ ಪ್ರಕರಣದಲ್ಲಿ ಚಿನ್ನಯ್ಯನೇ ಎ1 – ಹಳೆ ಸೆಕ್ಷನ್ ತೆಗೆದು ಹೊಸ ಸೆಕ್ಷನ್ ಹಾಕಿದ SIT

Public TV
2 Min Read

– ಫೋರ್ಜರಿ, ಸುಳ್ಳು ಸಾಕ್ಷಿಯಡಿ ಎಫ್‌ಐಆರ್

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರೋದಾಗಿ ಬುರುಡೆ ಬಿಟ್ಟ ಮಾಸ್ಕ್ ಮ್ಯಾನ್ ಚಿನ್ನಯ್ಯನ (Chinnayya) ವಿರುದ್ಧ ವಿಶೇಷ ತನಿಖಾ ತಂಡ (SIT) ಹೊಸ ಸೆಕ್ಷನ್‌ಗಳನ್ನು ಹಾಕಿದೆ.

ಇದರ ಪ್ರಕಾರ, ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನೇ ಎ-1 ಆಗಿದ್ದಾನೆ. ಇದು ಪಿತೂರಿಯಲ್ಲದೆ ಮತ್ತೋನೂ ಅಲ್ಲ ಅಂತ ಕೋರ್ಟಿಗೆ ಮಾಹಿತಿ ಕೊಟ್ಟಿದೆ. ಸುಳ್ಳು ಮಾಹಿತಿಯನ್ನು ಕೊಟ್ಟಿದ್ದರಿಂದ ಆತನನ್ನು ಬಂಧಿಸಲಾಗಿದೆ ಅಂತ ತಿಳಿಸಿದೆ. ಇದು ಕಪೋಲಕಲ್ಪಿತ ಷಡ್ಯಂತ್ರ ಅಂತಲೂ ಹೇಳಿರುವ ಎಸ್‌ಐಟಿ ಬಿಎನ್‌ಎಸ್ ಸೆಕ್ಷನ್ 336, 227 ರಿಂದ 238ರ ಅಡಿ ಎಫ್‌ಐಆರ್ (FIR) ದಾಖಲಿಸಿದೆ. ಇದನ್ನೂ ಓದಿ: SIT ದಾಳಿ ತಿಳಿದು ತಿಮರೋಡಿ ಎಸ್ಕೇಪ್ – ಅತ್ತ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಮತ್ತೊಂದು ದೂರು

ಇನ್ನೂ ಮಾಸ್ಕ್‌ ಮ್ಯಾನ್‌ ಚಿನ್ನಯ್ಯಗೆ ಆಶ್ರಯ ಕೊಟ್ಟ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ಮನೆಗೆ ನಿನ್ನೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ಒಂದಷ್ಟು ಮಹತ್ವದ ಸಾಕ್ಷ್ಯಗಳನ್ನ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಆರಂಭದ ದಿನದಿಂದಲೂ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ವಾಸ್ತವ್ಯವಿದ್ದ ಚಿನ್ನಯ್ಯನಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು. ತನಿಖಾಧಿಕಾರಿ ದಯಾಮಾ ನೇತೃತ್ವದಲ್ಲಿ ಶೋಧಕಾರ್ಯ ನಡೆದಿದ್ದು ಚಿನ್ನಯ್ಯನ ಮೊಬೈಲ್, ದಾಖಲೆ ಪತ್ರ, ಬಟ್ಟೆಗಳ ಬ್ಯಾಗ್ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಖುಷಿಯಾಗಿ ಗಣೇಶ ಹಬ್ಬ ಆಚರಣೆ – ಡಿವೋರ್ಸ್ ವದಂತಿ ತಳ್ಳಿಹಾಕಿದ ನಟ ಗೋವಿಂದ ದಂಪತಿ

ಕಾಲ್ ಡೀಟೇಲ್ಸ್ ನಾಪತ್ತೆ
ಮೊಬೈಲ್ (Mobile) ಪರಿಶೀಲಿಸಿದಾಗ ಕಾಲ್ ಡೀಟೇಲ್ಸ್ ನಾಪತ್ತೆಯಾಗಿದೆ. ಎಸ್‌ಐಟಿ ತನಿಖೆಗೆ ಹೋಗಲು ಚಿನ್ನಯ್ಯ ಬಳಸ್ತಿದ್ದ ಬಿಳಿ ಕಾರ್‌ನ ಮಾಲೀಕನಿಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ಇನ್ನು, ತಿಮರೋಡಿ ಮನೆಯಲ್ಲಿದ್ದ ಮೂರು ತಲ್ವಾರ್, ಸಿಸಿಟಿವಿ ಹಾರ್ಡ್ ಡಿಸ್ಕ್, ಮಹೇಶ್ ಶೆಟ್ಟಿ ಹೆಂಡತಿ ಮತ್ತು ಇಬ್ಬರು ಮಕ್ಕಳ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಸಹೋದರ ಮೋಹನ್ ಶೆಟ್ಟಿ ಮನೆಯಿಂದ ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ರೌಡಿಶೀಟರ್ ಮದನ್ ಬುಗಡಿಯನ್ನು ಮಾನವ ಹಕ್ಕು ಅಧಿಕಾರಿ ಎಂದು ಪರಿಚಯಿಸಿದ ಆರೋಪದಲ್ಲಿ ಗಿರೀಶ್ ಮಟ್ಟಣ್ಣವರ್ ವಿರುದ್ಧ ಬೆಂಗಳೂರಿನ ಮಾನವ ಹಕ್ಕುಗಳ ಆಯೋಗದಲ್ಲಿ ಹಿಂದೂ ಮುಖಂಡ ಸುರೇಶ್ ಗೌಡ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಸಿಎಂ ಆಗುವ ವೇಗದಲ್ಲಿ ಹಿಂದೂಗಳಿಗೆ ಅಪಮಾನ ಮಾಡ್ತಿದ್ದೀರಿ: ಡಿಕೆಶಿಗೆ ಶೋಭಾ ಕರಂದ್ಲಾಜೆ ಸ್ಟ್ರೈಟ್ ಹಿಟ್

Share This Article