11 ಅಮಾಯಕ ಜೀವಗಳ ಬಲಿ ಪಡೆದು ಈ ಸರ್ಕಾರ ಪಾಪಕ್ಕೆ ಗುರಿಯಾಗಿದೆ: ಸೋಮಣ್ಣ

Public TV
1 Min Read

ಬೆಂಗಳೂರು: 11 ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡು ಸಿದ್ದರಾಮಯ್ಯ (Siddaramaiah) ಸರ್ಕಾರ ಪಾಪಕ್ಕೆ ಗುರಿಯಾಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ (V Somanna) ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಮಾತಾನಾಡಿದ ಅವರು, ಇದೊಂದು ಲಜ್ಜೆಗೇಡಿ ಸರ್ಕಾರ. ಹೆಸರು ಬರುತ್ತೆ ಎಂದು ತರಾತುರಿಯಲ್ಲಿ ಕಾರ್ಯಕ್ರಮ ಮಾಡಿದರು. ಒಂದು ವಾರ ಬಿಟ್ಟು ಮಾಡಿದ್ರೆ ಏನು ಆಗುತ್ತಿತ್ತು. ಇಂತಹ ಕೆಲಸ ಮಾಡಿ ನೀವು ಪಾಪಕ್ಕೆ ಗುರಿಯಾಗಿದ್ದೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ

ಪೊಲೀಸ್ ಕಮೀಷನರ್ ದಯಾನಂದ್ ಪ್ರಾಮಾಣಿಕ ಅಧಿಕಾರಿ. ಅವರನ್ನು ಅಮಾನತು ಮಾಡ್ತೀರಾ. ಸಿದ್ದರಾಮಯ್ಯ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕಿತ್ತು. ಸಿದ್ದರಾಮಯ್ಯ ಅವರೇ ಯಾರು ನಿಮ್ಮ ಕಿವಿ ಕಚ್ಚಿದ್ರು ಇವತ್ತು ಮಾಡಿ ಅಂತ. ನಿಮ್ಮ ಅನುಭವ, ಚಿಂತನೆ ಏನಾಯ್ತು? ಮುಗ್ಧರನ್ನ ಸಾಯಿಸಿ ಶಾಪಗ್ರಸ್ತ ಸರ್ಕಾರ ಆಗಿದೆ ಈ ಸರ್ಕಾರ ಎಂದು ಹರಿಹಾಯ್ದರು. ಇದನ್ನೂ ಓದಿ: ಆತುರದ ನಿರ್ಧಾರದಿಂದ ತಪ್ಪು ಮಾಡಿದ್ದೇವೆ, ತಡವಾಗಿ ವಿಜಯೋತ್ಸವ ಆಚರಣೆ ಮಾಡ್ಬೋದಿತ್ತು: ಇಕ್ಬಾಲ್ ಹುಸೇನ್

ನಿಮಗೆ ಮಾನ ಮರ್ಯಾದೆ ಇದ್ದರೆ ಇದರ ಹೊಣೆ ಹೊರಬೇಕು. ಇಂತಹ ಘಟನೆ ಮಾಡಿ ಇತಿಹಾಸದಲ್ಲಿ ನೀವು ಉಳಿದುಕೊಂಡ್ರಿ. ಈಗ ಕಣ್ಣು ಒರೆಸೋ ತಂತ್ರ ಮಾಡ್ತಿದ್ದೀರಾ. ಒಳ್ಳೆಯ ಅಧಿಕಾರಿಗಳನ್ನು ಅಮಾನತು ಮಾಡಿದ್ರೆ ಅಧಿಕಾರಿಗಳಿಗೆ ನಿಮ್ಮ ಜೊತೆ ಕೆಲಸ ಮಾಡೋಕೆ ಹೇಗೆ ಆಗುತ್ತದೆ. ಸರ್ಕಾರಕ್ಕೆ ಹೆಸರು ಮಾಡೋ ಆತುರದ ಪರಮಾವಧಿ. ಇದಕ್ಕೆ ನಿಮಗೆ ಕೊಡಲಿ ಪೆಟ್ಟಾಗಿದೆ. ಈ ಘಟನೆ ಅಕ್ಷಮ್ಯ ಅಪರಾಧ. ಇದಕ್ಕೆ ನೀವೆ ಬೆಲೆ ತೆರಬೇಕು ಎಂದು ಸರ್ಕಾರದ ವಿರುದ್ಧ ಗುಡುಗಿದರು. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ – ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಬಾಂಬ್‌

Share This Article