ಚಿನ್ನಸ್ವಾಮಿ ಕಾಲ್ತುಳಿತ | ಸಿಎಂ, ಡಿಸಿಎಂ ಲಜ್ಜೆಗೆಟ್ಟ ಹೇಳಿಕೆಗಳನ್ನು ನೀಡುತ್ತಿದ್ದಾರೆ – ಭಗವಂತ್ ಖೂಬಾ

Public TV
1 Min Read

ಬೀದರ್: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ 11 ಜನ ಬಲಿಯಾದ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಲಜ್ಜಗೆಟ್ಟ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ (Bhagwant Khuba) ಕಿಡಿಕಾರಿದ್ದಾರೆ.ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಜಾತಿ ಗಣತಿ ಸಮೀಕ್ಷೆ – ಪ್ರಬಲ ಸಮುದಾಯದ ಒತ್ತಡಕ್ಕೆ ಮಣಿದ ʼಕೈʼಕಮಾಂಡ್

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 11 ಜನ ಅಮಾಯಕರ ಬಲಿ ತೆಗೆದುಕೊಂಡ ಸರ್ಕಾರವಿದು. ತಮ್ಮ ರಾಜಕೀಯ ಪ್ರತಿಷ್ಠೆಗಾಗಿ ಸಿಎಂ ಹಾಗೂ ಡಿಸಿಎಂ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮ ಮಾಡಿದ್ದಾರೆ. ಇದೀಗ ಪೊಲೀಸ್ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ಪರಸ್ಪರ ಕೆಸರೆರೆಚಾಟ ಮಾಡಿಕೊಳ್ಳುತ್ತಿದ್ದಾರೆ ಎಂದರು.

11 ಜನ ಬಲಿಯಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ. ಇದು ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಿಎಂ ಹಾಗೂ ಡಿಸಿಎಂಗೆ ಜನರು ಛೀಮಾರಿ ಹಾಕುತ್ತಿದ್ದಾರೆ. ಇದರಿಂದಾಗಿ ಹೈಕಮಾಂಡ್‌ಗೆ ನಾಚಿಕೆಯಾಗಿ, ಇಂದು ದೆಹಲಿಗೆ ಬರಲು ತಿಳಿಸಿದ್ದರು. ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಕಂಡು ಸಿಎಂ ಹಾಗೂ ಡಿಸಿಎಂ ಅವರ ಕಿವಿ ಹಿಂಡುವ ಕೆಲಸವನ್ನು ಹೈಕಮಾಂಡ್ ಮಾಡಿದೆ. ಇದರಿಂದ ಸಿದ್ದರಾಮಯ್ಯ ಅವರ ಬೇಜವಾಬ್ದಾರಿ ಬಗ್ಗೆ ಗೊತ್ತಾಗುತ್ತದೆ. ಜೊತೆಗೆ ಇಬ್ಬರು ಸೇರಿಕೊಂಡು ದ್ವಂದ್ವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ: ಹೊಸ ಅಧ್ಯಾಯಕ್ಕೆ ʻಜೀ ಕನ್ನಡʼ ಮುನ್ನುಡಿ…

Share This Article