ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ತನಿಖಾ ಆಯೋಗದ ಮುಂದೆ ಮಾಹಿತಿ ಕೊಡ್ತೀವಿ – ಪರಮೇಶ್ವರ್

Public TV
2 Min Read

ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣದ ಬಗ್ಗೆ ತನಿಖಾ ಆಯೋಗದ ಮುಂದೆ ಮಾಹಿತಿ ಕೊಡುವುದಾಗಿ ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ ವಿಧಾನಸೌಧದ ಮುಂದೆ ಕಾರ್ಯಕ್ರಮ ಮಾಡಬೇಡಿ ಎಂದು ಪೊಲೀಸರು ಪತ್ರ ಬರೆದಿದ್ದರೂ ಕಾರ್ಯಕ್ರಮ ಮಾಡಿರುವ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಈಗ ಯಾವುದರ ಬಗ್ಗೆಯೂ ಮಾತನಾಡಲ್ಲ. ನ್ಯಾ.ಮೈಕಲ್ ಕುನ್ಹಾ ನೇತೃತ್ವದ ಆಯೋಗಕ್ಕೆ ತನಿಖೆಗೆ ವಹಿಸಿದ್ದೇವೆ. ಅವರು ತನಿಖೆ ಮಾಡಿ ವರದಿ ಕೊಡಲಿ. ತನಿಖೆ ಆಗೋವರೆಗೂ ನಾವು ಯಾರು ಏನೂ ಮಾತಾಡಲ್ಲ. ಈಗ ಹೇಳಿಕೆ ಕೊಟ್ಟರೆ ಅದು ಸರಿ ಹೋಗಲ್ಲ. ಅದಕ್ಕೋಸ್ಕರ ನಾನು ಈ ಬಗ್ಗೆ ಮಾತಾಡಲ್ಲ ಎಂದರು. ಇದನ್ನೂ ಓದಿ: Kerala | ಕೋಝಿಕ್ಕೋಡ್‌ನ ಬೇಪೋರ್ ಕರಾವಳಿಯಲ್ಲಿ ಸರಕು ಹಡಗಿಗೆ ಬೆಂಕಿ

ನಮ್ಮ ಬಳಿ ಎಲ್ಲಾ ಮಾಹಿತಿ ಇದೆ. ಅದನ್ನು ತನಿಖಾ ಸಂಸ್ಥೆಗೆ ಮಾಹಿತಿ ಕೊಡುತ್ತೇವೆ. ತನಿಖಾ ತಂಡದವರು ಏನೇ ಪ್ರಶ್ನೆ ಕೇಳಿದರೂ ಏನೇ ಮಾಹಿತಿ ಕೇಳಿದರೂ ಕೊಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಏರ್‌ಫೋರ್ಸ್‌ ಒನ್‌ ಮೆಟ್ಟಿಲ ಮೇಲೆ ಎಡವಿ ಬಿದ್ದ ಟ್ರಂಪ್‌ – ಎಲ್ರೂ ಕಾಲೆಳಿತದೆ ಕಾಲ ಎಂದ ನೆಟ್ಟಿಗರು!

ಪರಮೇಶ್ವರ್ ಓವರ್ ಟೇಕ್ ಮಾಡಿ ಕಾರ್ಯಕ್ರಮ ಮಾಡಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವತ್ತು ಏನು ಹೇಳಲ್ಲ. ತನಿಖೆಯಲ್ಲಿ ಅದನ್ನು ಕೇಳಿದ್ರೆ ಹೇಳುತ್ತೇನೆ. ಈಗ ನಾನು ಹೇಳಿದರೆ ತನಿಖೆಯ ದಿಕ್ಕು ಬೇರೆ ಕಡೆ ಹೋಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಸೊನ್ನೆ ಅಂಕ: ಸಿದ್ದರಾಮಯ್ಯ

ಚಿನ್ನಸ್ವಾಮಿ ಘಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನನ್ನ ಜೊತೆ ಮಾತಾಡಿಲ್ಲ. ರಾಹುಲ್ ಗಾಂಧಿ ಮಾತಾಡಿದ್ದಾರೆ ಅನ್ನೋದು ಸತ್ಯಕ್ಕೆ ದೂರವಾದ ಮಾತು. ದೆಹಲಿಗೆ ಕರೆದಿದ್ದಾರೆ ಅನ್ನೋದು ಸುಳ್ಳು. ಯಾರು ಕರೆದಿಲ್ಲ. ನಮ್ಮ ಹೈಕಮಾಂಡ್ ನಾಯಕರು ದೂರವಾಣಿ ಮೂಲಕ ಏನಾಗಿದೆ ಎಂದು ಕೇಳುತ್ತಾರೆ. ನಾನು ಅದಕ್ಕೆ ಮಾಹಿತಿ ಕೊಟ್ಟಿದ್ದೇನೆ. ಆದರೆ ನನಗೆ ಯಾರು ದೆಹಲಿಗೆ ಕರೆದಿಲ್ಲ. ಫೋನ್‌ನಲ್ಲಿ ಮಾತಾಡಿದ್ದೇನೆ. ಇರುವ ಮಾಹಿತಿ ಹೇಳಿದ್ದೇನೆ. ಅವರಿಗೂ ಪಕ್ಷ ಹೇಗೆ ಆಡಳಿತ ಮಾಡುತ್ತದೆ ಎಂಬ ಆತಂಕ ಇರುತ್ತದೆ. ಹೀಗಾಗಿ ಸಿಎಂ, ಡಿಸಿಎಂ, ನನಗೆ ಕೇಳುತ್ತಾರೆ, ಮಾಹಿತಿ ಪಡೆಯುತ್ತಾರೆ ಎಂದರು. ಇದನ್ನೂ ಓದಿ: ಹನಿಮೂನ್‌ ಮರ್ಡರ್‌ | ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್‌ ತಂದೆ

Share This Article