ಸಾವಿರಾರು ಮೈಲಿ ದೂರವಿದ್ದರೂ ಸಿಗುತ್ತೆ ನೈಜ ಮುತ್ತಿನ ಗಮ್ಮತ್ತು – ಏನಿದು ಕಿಸ್ಸಿಂಗ್ ಡಿವೈಸ್ ಕರಾಮತ್ತು?

Public TV
2 Min Read

ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ಪ್ರೀತಿಸುವ ಮನಸ್ಸುಗಳು (Lovers) ದೂರಾಗುತ್ತಿದಂತೆ ತಮ್ಮವರನ್ನು ಸಾಕಷ್ಟು ಹತ್ತಿರದಿಂದಲೇ ನೋಡಬೇಕೆಂದು ಮನಸ್ಸು ಬಯಸುತ್ತದೆ. ಅದಕ್ಕೆಂದೆ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ-ಹೊಸ ಆವಿಷ್ಕಾರಗಳನ್ನೂ ನಡೆಸಲಾಗುತ್ತಿದೆ. ಆ ಮೂಲಕ ಪ್ರೀತಿ (Love) ಇದ್ದಾಗ ಪ್ರೀತಿಸುವವರು ಎಷ್ಟೇ ದೂರದಲ್ಲಿದ್ದರೂ ಮನಸು-ಹೃದಯ ಒಂದು ಅವ್ಯಕ್ತ ಅಗೋಚರ ಸಂಬಂಧ ಹೊಂದಿರುತ್ತವೆ.

ಇದೀಗ ಅದಕ್ಕೆಂತೆ ಹೊಸ ಆವಿಷ್ಕಾರವೊಂದು ನಡೆದಿದೆ. ಹೌದು ತಾವು ಪ್ರೀತಿಸುವವರು ಎಷ್ಟೇ ದೂರದಲ್ಲಿದ್ದರೂ ಪ್ರೀತಿಯನ್ನು ಪರಸ್ಪರ ಫೀಲ್ ಮಾಡಬಹುದು, ಸಾವಿರಾರು ಕಿಲೋ ಮೀಟರ್ ದೂರದಲ್ಲಿದ್ದರೂ ಅವರ ಚುಂಬನದ ಆಲಿಂಗನ ಅನುಭವಿಸಬಹುದಾಗಿದೆ. ಹಾಗಂತ ಇದು ಫ್ಲೈಯಿಂಗ್ ಕಿಸ್ ಥರ ಅಲ್ಲ. ನಿಜವಾದ ಮುತ್ತಲ್ಲದಿದ್ದರೂ ನೈಜ ಮುತ್ತು ಕೊಟ್ಟ ಅನುಭವವನ್ನೇ ನೀಡುತ್ತದೆ. ಅಂಥದ್ದೊಂದು ನೈಜ ಮುತ್ತಿನ ಅನುಭವಕ್ಕೆಂದೇ ಚುಂಬನ ಸಾಧನ `ಅರ್ಥಾತ್ ಕಿಸ್ಸಿಂಗ್ ಡಿಪ್ಸಸ್’ (Kissing Device) ರೂಪುಗೊಂಡಿದೆ.

ಚೀನಾದ ಜಿಯಾಂಗ್ ಝೂಂಗ್ಲಿ (China University) ಎಂಬಾತ ಈ ಸಾಧನವನ್ನು ವಿನ್ಯಾಸಗೊಳಿಸಿದ್ದಾನೆ. ದೂರದಲ್ಲಿರುವ ತನ್ನ ಪ್ರೇಯಸಿಗೆ ಮುತ್ತು ಕೊಡಲು ಹಾಗೂ ಅದು ಹತ್ತಿರದಲ್ಲೇ ಇದ್ದು ಕೊಡುವ ಮುತ್ತಿನಷ್ಟೇ ನೈಜ ಅನುಭವ ನೀಡಲು ಆತ ಈ ಉಪಕರಣ ಕಂಡು ಹಿಡಿದಿದ್ದಾನೆ. ಇದನ್ನು ಚೀನಾದ ಚಾಂಗ್ ಝ್ ಯುನಿವರ್ಸಿಟಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜಿಯಾಂಗ್ 2019ರಲ್ಲಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದ್ದರು, 2023ರ ಜನವಯಲ್ಲಿ ಪೇಟೆಂಟ್ ಪ್ರಕ್ರಿಯೆ ಮುಕ್ತಾಯಗೊಂಡಿತು. ಇದನ್ನ ಕೆಲವರು ಹಾಸ್ಯಾಸ್ಪದವಾಗಿ ನೋಡಿದ್ರೆ, ಇನ್ನೂ ಕೆಲವರು ಅಶ್ಲೀಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿಸ್ಸಿಂಗ್ ಡಿವೈಸ್ ಬಳಸೋದು ಹೇಗೆ?: ಈ ಚುಂಬನ ಸಾಧನ ಟಚ್ ಸೆನ್ಸಾರ್‌, ಆಕ್ಚುವೇಟರ್ಸ್‌ ಹಾಗೂ ಸಿಲಿಕಾನ್ ಲಿಪ್‌ಗಳನ್ನು ಒಳಗೊಂಡಿದೆ, ಇದರ ಮೂಲಕ ಮುತ್ತು ಹಂಚಿಕೊಂಡಾಗ ನಿಜವಾದ ಚುಂಬನದ ಸಂದರ್ಭದಲ್ಲಿನ ಚಲನ, ಶಬ್ದ ಹಾಗೂ ಬೆಚ್ಚನೆಯ ಅನುಭವ ಲಭಿಸಲಿದೆ ಎನ್ನಲಾಗುತ್ತಿದೆ.

ಈ ಸಾಧನವನ್ನ ಬಳಸುವವರು ತಮ್ಮ ಮೊಬೈಲ್‌ಫೋನ್‌ನಲ್ಲಿ ಆಪ್‌ವೊಂದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಈ ಸಾಧನವನ್ನು ಅವರ ಫೋನ್ ಚಾರ್ಜಿಂಗ್ ಸಾಕಟ್‌ಗೆ ಅಳವಡಿಸಿಕೊಳ್ಳಬೇಕು. ಪರಸ್ಪರ ಮುತ್ತು ಕೊಡಬೇಕಾದವರು ಈ ಆಪ್ ಬಳಸಿಕೊಂಡು ವೀಡಿಯೋ ಕಾಲ್ ಮಾಡಬೇಕು. ನಂತರ ಅವರು ಮುತ್ತು ಕೊಟ್ಟರೆ ಇಬ್ಬರೂ ಹತ್ತಿರವಿದ್ದೇ ಮುತ್ತು ಕೊಟ್ಟ ಅನುಭವ ನೀಡುತ್ತದೆ ಎಂದು ಹೇಳಲಾಗಿದೆ. ಈ ವೀಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಈ ವರ್ಷದಲ್ಲೇ ಮೋದಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡ್ತಾರೆ – RAW ಮಾಜಿ ನಿರ್ದೇಶಕ

ಚೀನಾದಲ್ಲಿ ಈಗಾಗಲೇ ಡೇಟಿಂಗ್ ಆರಂಭಿಸುವುದಕ್ಕೂ ಮುನ್ನ ಕಿಸ್ ಮಾಡಲೇಬೇಕೆಂಬ ನಿಯಮ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ ಕೋವಿಡ್ ಇರುವ ಕಾರಣ ಕಿಸ್ಸಿಂಗ್ ಮಾಡುವ ವಿಧಾನವನ್ನು ಬದಲಿಸಿಕೊಳ್ಳಲಾಗಿತ್ತು. ಇದೀಗ ಕಿಸ್ಸಿಂಗ್ ಡಿವೈಸ್‌ವೊಂದನ್ನು ಆವಿಷ್ಕಾರಗೊಳಿಸಲಾಗಿದ್ದು, ಇದಕ್ಕೆ ಪರ್ಯಾಯ ಮಾರ್ಗ ಸಹ ಸಿಕ್ಕಿದೆ ಎಂದು ಪ್ರೇಮಿಗಳು ಹರ್ಷಗೊಂಡಿದ್ದಾರಂತೆ. ಇದನ್ನೂ ಓದಿ: ಸಚಿವರು ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವಂತಿಲ್ಲ, 5 ಸ್ಟಾರ್‌ ಹೋಟೆಲ್‌ನಲ್ಲಿ ಉಳಿಯುವಂತಿಲ್ಲ – ಪಾಕ್‌ ಸರ್ಕಾರ

Share This Article
Leave a Comment

Leave a Reply

Your email address will not be published. Required fields are marked *