ಪತಿಯೊಂದಿಗೆ ವಾಸಿಸಲು 30 ಬಾರಿ ಅವಳಿ ಸಹೋದರಿಯ ಪಾಸ್‍ಪೋರ್ಟ್ ಬಳಕೆ

Public TV
1 Min Read

ಬೀಜಿಂಗ್: ವಿದೇಶಿ ಪ್ರಯಾಣಕ್ಕೆಂದು ಸುಮಾರು 30 ಬಾರಿ ಪಾಸ್‍ಪೋರ್ಟ್ ಬದಲಾಯಿಸಿದ ಆರೋಪದ ಮೇಲೆ ಚೀನಾ ಪೊಲೀಸರು ಅವಳಿ ಸಹೋದರಿಯನ್ನು ಬಂಧಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹರ್ಬಿಮ್ ನಗರದ ನಿವಾಸಿಯಾಗಿರುವ ಝೌ ಸಹೋದರಿಯರ ತನಿಖೆ ನಡೆಸಲಾಗುತ್ತಿದೆ. ಹಾಂಗ್ ಎನ್ನುವವಳು ಜಪಾನ್‍ನಲ್ಲಿರುವ ತನ್ನ ಪತಿಯೊಂದಿಗೆ ಇರಲು ಬಯಸಿದ್ದಳು. ಆದರೆ ಆಕೆಯ ವೀಸಾ ಅರ್ಜಿಗಳನ್ನು ಅಧಿಕಾರಿಗಳು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಜಪಾನ್, ಚೀನಾ, ರಷ್ಯಾ ದೇಶಗಳಿಗೆ ತೆರಳಲು ತನ್ನ ಅವಳಿ ಸಹೋದರಿಯ ಪಾಸ್‍ಪೋರ್ಟ್‍ನ್ನು ಬಳಸುತ್ತಿದ್ದಳು.

Passport

ಇದೇ ರೀತಿ ಸುಮಾರು 30 ಬಾರಿ ತನ್ನ ಅವಳಿ ಸಹೋದರಿಯ ಪಾಸ್‍ಪೋರ್ಟ್‍ನ್ನು ಬಳಸಿದ್ದಾಳೆ. ಆದರೆ ಈ ಬಾರಿ ಚೀನಾಕ್ಕೆ ಆಗಮಿಸುವಾಗ ಆಕೆ ಅವಳಿ ಸಹೋದರಿಯ ವೀಸಾವನ್ನು ಬಳಸಿರುವ ವಿಷಯ ಬಯಲಾಗಿದೆ. ಜೊತೆಗೆ ಆಕೆ ಈ ಮೊದಲು ಪ್ರಯಾಣ ಬೆಳೆಸಿದ್ದ ಇತಿಹಾಸವನ್ನು ಪರಿಶೀಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ಅವಳಿ ಸಹೋದರಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 130 ಸ್ಥಾನ ಗೆದ್ದು ಕಾಂಗ್ರೆಸ್ ಸರ್ಕಾರ ರಚಿಸೋದು ಗ್ಯಾರಂಟಿ: ಸಿದ್ದರಾಮಯ್ಯ ವಿಶ್ವಾಸ

ಈ ಬಗ್ಗೆ ಮಾತನಾಡಿದ ಅಲ್ಲಿನ ಪೊಲೀಸ್ ಅಧಿಕಾರಿಗಳು, ಅವಳಿ ಸಹೋದರಿಯರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಈ ರೀತಿ ಅವಳಿ ಸಹೋದರಿಯರು ಡಿಎನ್‍ಎ ಲಾಭವನ್ನು ಪಡೆದುಕೊಳ್ಳುವುದು ಅಪರಾಧವಾಗಿದೆ. ಜೊತೆಗೆ ಈ ರೀತಿಯಿಂದ ಮಾಡುವುದರಿಂದ ದೇಶದ ಭದ್ರತೆಗೂ ಅಪಾಯ ಉಂಟಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ NIA ಅಧಿಕಾರಿಗಳ ದಾಳಿ

Live Tv

Share This Article
Leave a Comment

Leave a Reply

Your email address will not be published. Required fields are marked *