ಬೀಜಿಂಗ್: ಇಡೀ ವಿಶ್ವ ಅಮೆರಿಕ-ಇರಾನ್ (USA-Iran) ನಡುವಿನ ಶಾಂತಿ ಮಾತುಕತೆಯ ಬಗ್ಗೆ ಚರ್ಚೆ ನಡೆಸುತ್ತಿದ್ದರೆ ಇನ್ನೊಂದು ಕಡೆ ಕ್ಸಿ ಜಿನ್‌ಪಿಂಗ್ (Xi Jinping) ಮತ್ತು ತೈವಾನ್‌ನ ವಿರೋಧ ಪಕ್ಷದ ನಾಯಕಿ ಚೆಂಗ್ ಲಿ-ವುನ್ (Cheng Li-wun) ನಡುವೆ ನಡೆದ ಐತಿಹಾಸಿಕ ಮಾತುಕತೆ ನಡೆಸಿದ್ದಾರೆ.
ತೈವಾನ್‌ನ(Taiwan) ವಿರೋಧ ಪಕ್ಷವಾದ ಕುವೊಮಿಂಟಾಂಗ್ (KMT) ನಾಯಕಿ ಚೆಂಗ್ ಲಿ-ವುನ್ ಚೀನಾಗೆ ‘ಶಾಂತಿ ಮಿಷನ್’ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ಇಬ್ಬರು ನಾಯಕರು ಭೇಟಿಯಾದರು.
ಮಾತುಕತೆಯ ವೇಳೆ ಕ್ಸಿ ಜಿನ್‌ಪಿಂಗ್, ಜಲಸಂಧಿಯ ಎರಡೂ ಬದಿಯಲ್ಲಿರುವವರು ಒಂದೇ ಕುಟುಂಬಕ್ಕೆ ಸೇರಿದ ಚೀನಿಯರು. ಚೀನಾ ಮತ್ತು ತೈವಾನ್ ಜನರು ಒಂದು ದಿನ ಒಂದಾಗುತ್ತಾರೆ ಎಂಬ ಬಗ್ಗೆ ತಮಗೆ ಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು. ಇದನ್ನೂ ಓದಿ: ತೈವಾನ್‌ನಲ್ಲಿ ಅಮೆರಿಕ ಸ್ಪೀಕರ್ – ಚೀನಾ ಕೆಂಡಾಮಂಡಲ
ತೈವಾನ್‌ನಲ್ಲಿ ಅಧಿಕಾರದಲ್ಲಿರುವ ಸರ್ಕಾರ ಅಮೆರಿಕದತ್ತ ವಾಲುತ್ತಿರುವ ಸಮಯದಲ್ಲೇ ಜಿನ್‌ಪಿಂಗ್, ತೈವಾನ್‌ನ ಭವಿಷ್ಯದ ನಿರ್ಧಾರವು ಸಂಪೂರ್ಣವಾಗಿ ಚೀನಿಯರ ಕೈಯಲ್ಲೇ ಇರಬೇಕು ಮತ್ತು ಇದರಲ್ಲಿ ಬೇರೆ ಯಾವುದೇ ಹೊರಗಿನ ದೇಶಗಳ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ಸಂದೇಶ ಕಳುಹಿಸಿದ್ದಾರೆ.
🚨🇨🇳 MASSIVE BREAKING NEWS, WESTERN MAINSTREAM MEDIA KEEPS HUSH HUSH:
President Xi Jingping meets with Cheng Li-wun Chairwoman of Taiwan’s next ruling party (KMT), in Beijing.
It’s happening, reunification between Taiwan province and China mainland, The U.S. and Japan are… pic.twitter.com/KszHZMRDMR
— Gerhardt vd Merwe (@realgerhardtvdm) April 10, 2026
ಅಮೆರಿಕದ ಶಸ್ತ್ರಾಸ್ತ್ರ ಖರೀದಿಗೆಂದು ತಮ್ಮ ಸರ್ಕಾರ ಬಜೆಟ್‌ನಲ್ಲಿ 40 ಬಿಲಿಯನ್ ಡಾಲರ್ ಹಣವನ್ನು ಮೀಸಲಿಟ್ಟಿದ್ದನ್ನು ಚೆಂಗ್ ಲಿ-ವುನ್ ಟೀಕಿಸಿದ್ದಾರೆ. ತೈವಾನ್ ಒಂದು ಎಟಿಎಂ ಅಲ್ಲ ಎಂದು ಹೇಳುವ ಮೂಲಕ ಅವರು ಮಿಲಿಟರಿ ವೆಚ್ಚಕ್ಕಿಂತ ಶಾಂತಿ ಮಾತುಕತೆಗೆ ಒತ್ತು ನೀಡಬೇಕೆಂದು ಪ್ರತಿಪಾದಿಸಿದ್ದಾರೆ
ಕೃಷಿ ಮತ್ತು ಮೀನುಗಾರಿಕೆ ಉತ್ಪನ್ನಗಳಿಗೆ ಚೀನಾದ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ನೀಡುವ ಬಗ್ಗೆ ಮತ್ತು ತೈವಾನ್ ಉದ್ಯಮಿಗಳ ಹಿತರಕ್ಷಣೆಯ ಬಗ್ಗೆ ಚರ್ಚಿಸಲಾಗಿದೆ. ಜನರ ನಡುವಿನ ಸಂಬಂಧವನ್ನು ವೃದ್ಧಿಸಲು ಪ್ರವಾಸೋದ್ಯಮ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ಪುನಾರಂಭಿಸುವ ಬಗ್ಗೆ ಇಬ್ಬರೂ ನಾಯಕರು ಒಲವು ತೋರಿದ್ದಾರೆ.
ಭವಿಷ್ಯದಲ್ಲಿ ಒಂದು ದಿನ ತೈವಾನ್‌ಗೆ ಬರುವಂತೆ ಮತ್ತು ಅಲ್ಲಿ ತಾವೇ ಆತಿಥ್ಯ ನೀಡುವುದಾಗಿ ಚೆಂಗ್ ಲಿ-ವುನ್ ಅವರು ಕ್ಸಿ ಜಿನ್‌ಪಿಂಗ್ ಅವರಿಗೆ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಯುದ್ಧಕ್ಕೆ ಸಜ್ಜಾದ ತೈವಾನ್ – ಏನಿದು ಚೀನಾದ 2049ರ ಗುರಿ?
Xi Jinping, general secretary of the Communist Party of China (CPC) Central Committee, on Friday morning met with Cheng Li-wun, chairwoman of the Chinese Kuomintang (KMT) party, in Beijing.
Invited by the CPC Central Committee and Xi, Cheng is the first KMT chairperson to have… pic.twitter.com/v1CM53vXil
— China Perspective (@China_Fact) April 10, 2026
ಭೇಟಿಗೆ ಇಷ್ಟೊಂದು ಮಹತ್ವ ಯಾಕೆ?
2016ರ ನಂತರ ತೈವಾನ್‌ನ ಪ್ರಮುಖ ರಾಜಕೀಯ ಪಕ್ಷದ ನಾಯಕರೊಬ್ಬರು ಚೀನಾಕ್ಕೆ ಭೇಟಿ ನೀಡಿ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದು ಇದೇ ಮೊದಲು. ತೈವಾನ್ ಸುತ್ತಮುತ್ತ ಚೀನಿ ಯುದ್ಧ ನೌಕೆಗಳ ಸಂಚಾರ ಹೆಚ್ಚಾಗಿರುವ ಸಂಘರ್ಷಮಯ ಸಮಯದಲ್ಲಿ ಈ ʻಶಾಂತಿ ಮಿಷನ್ʼ ಭೇಟಿ ನಡೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ಭೇಟಿಗೂ ಮುನ್ನ ಈ ಮಾತುಕತೆ ನಡೆದಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
2015 ರ ನವೆಂಬರ್ 7 ರಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಂದಿನ ತೈವಾನ್ ಅಧ್ಯಕ್ಷ ಮಾ ಯಿಂಗ್-ಜಿಯೋ (Ma Ying-jeou) ಸಿಂಗಾಪುರದಲ್ಲಿ ಭೇಟಿಯಾಗಿದ್ದರು. 1949 ರ ಅಂತರ್ಯುದ್ಧದ ನಂತರ ಉಭಯ ದೇಶಗಳ ರಾಷ್ಟ್ರ ಮುಖ್ಯಸ್ಥರು ಭೇಟಿಯಾದ ಮೊದಲ ಸಂದರ್ಭ ಇದಾಗಿತ್ತು. 81 ಸೆಕೆಂಡುಗಳ ಕಾಲ ಅವರು ಹಸ್ತಲಾಘವ ಮಾಡಿದ್ದು ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದನ್ನೂ ಓದಿ: ಟ್ರಂಪ್ ಮಾತಿಗಿಲ್ಲ ಕಿಮ್ಮತ್ತು – ಲೆಬನಾನ್‌ನ 2 ಪಟ್ಟಣಗಳ ಮೇಲೆ ಮತ್ತೆ ಇಸ್ರೇಲ್ ದಾಳಿ
ಚೀನಾದಿಂದ ಓಡಿದ್ದ ಕೆಎಂಟಿ:
ಚೆಂಗ್ ಲಿ-ವುನ್ ಪ್ರತಿನಿಧಿಸುತ್ತಿರುವ ಕೆಎಂಟಿ ಪಕ್ಷ ಈ ಮೊದಲು ಚೀನಾದಲ್ಲಿ ಅಧಿಕಾರದಲ್ಲಿತ್ತು. 1945ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಚಿಯಾಂಗ್ ಕೈ-ಶೇಕ್ ನೇತೃತ್ವದ ಕೆಎಂಟಿ ಮತ್ತು ಮಾವೋ ಝೆಡಾಂಗ್ ನೇತೃತ್ವದ ಕಮ್ಯುನಿಸ್ಟ್ ಪಕ್ಷದ (CCP) ನಡುವೆ ಅಧಿಕಾರಕ್ಕಾಗಿ ತೀವ್ರ ಯುದ್ಧ ನಡೆದಿತ್ತು. 1949ರ ವೇಳೆಗೆ ಕಮ್ಯುನಿಸ್ಟ್ ಪಡೆಗಳು ಚೀನಾದ ಬಹುತೇಕ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿದ್ದವು.
ಅಂತರ್ಯುದ್ಧದಲ್ಲಿ ಸೋಲು ಖಚಿತವಾಗುತ್ತಿದ್ದಂತೆ ಚಿಯಾಂಗ್ ಕೈ-ಶೇಕ್ ಸುರಕ್ಷಿತ ನೆಲೆಗಾಗಿ ತೈವಾನ್ ದ್ವೀಪವನ್ನು ಆರಿಸಿಕೊಂಡರು. ತೈವಾನ್ ಮತ್ತು ಚೀನಾದ ನಡುವೆ ಇರುವ ಸಮುದ್ರವು ಕಮ್ಯುನಿಸ್ಟ್ ಪಡೆಗಳು ಸುಲಭವಾಗಿ ದಾಳಿ ಮಾಡುವುದನ್ನು ತಡೆಯಲು ಸಹಕಾರಿಯಾಗಿತ್ತು. 1949ರ ಡಿಸೆಂಬರ್‌ನಲ್ಲಿ ಕೆಎಂಟಿ ಸರ್ಕಾರವು ಅಧಿಕೃತವಾಗಿ ತೈವಾನ್‌ನ ತೈಪೆಯನ್ನು ತನ್ನ ತಾತ್ಕಾಲಿಕ ರಾಜಧಾನಿಯನ್ನಾಗಿ ಘೋಷಿಸಿತು.
ಚೀನಾ ತೈವಾನ್ ಅನ್ನು ತನ್ನದೇ ಒಂದು ಪ್ರಾಂತ್ಯವೆಂದು ಪರಿಗಣಿಸುತ್ತದೆ. ತೈವಾನ್ ತನ್ನನ್ನು ತಾನು ರಿಪಬ್ಲಿಕ್ ಆಫ್ ಚೀನಾ (ROC) ಎಂದು ಕರೆದುಕೊಳ್ಳುತ್ತದೆ. ಆದರೆ ಚೀನಾ ಇದನ್ನು ಒಪ್ಪುವುದಿಲ್ಲ.


