ಶ್ರೀಲಂಕಾ ತಲುಪಿದ ಚೀನಾದ ಸರ್ವೇಕ್ಷಣಾ ಹಡಗು – ಈ ನೌಕೆಯ ವಿಶೇಷತೆ ಏನು?

Public TV
2 Min Read

ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದ ದಕ್ಷಿಣದ ಬಂದರಿಗೆ ಮಂಗಳವಾರ ಚೀನಾದ ಸರ್ವೇಕ್ಷಣಾ ಹಡಗು ತಲುಪಿದೆ. ಭಾರತದ ಸೇನಾ ನೆಲೆಯ ಮೇಲೆ ಚೀನಾ ಕಣ್ಣಿಡುವ ಆತಂಕದ ನಡುವೆಯೂ ಹಡಗು ಶ್ರೀಲಂಕಾವನ್ನು ಪ್ರವೇಶಿಸಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ.

ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಟ್ರ‍್ಯಾಕಿಂಗ್ ಹಡಗು ಯುವಾನ್ ವಾಂಗ್ 5 ಸ್ಥಳೀಯ ಕಾಲಮಾನ ಬೆಳಗ್ಗೆ 8:20ಕ್ಕೆ ಶ್ರೀಲಂಕಾದ ಹಂಬನತೋಟದ ದಕ್ಷಿಣದ ಬಂದರಿಗೆ ಆಗಮಿಸಿದೆ. ಇದು ಆಗಸ್ಟ್ 22 ರವರೆಗೆ ಅಲ್ಲಿಯೇ ಲಂಗರು ಹಾಕಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ಹಡಗು ಆಗಸ್ಟ್ 11 ರಂದೇ ಶ್ರೀಲಂಕಾ ತಲುಪಬೇಕಿತ್ತು. ಆದರೆ ಶ್ರೀಲಂಕಾದ ಅಧಿಕಾರಿಗಳು ಅನುಮತಿ ನೀಡಿರದ ಕಾರಣ ವಿಳಂಬವಾಗಿತ್ತು. ಚೀನಾದ ಹಡಗಿನ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶ್ರೀಲಂಕಾ ಹಡಗು ಪ್ರವೇಶವನ್ನು ಮುಂದೂಡುವಂತೆ ಚೀನಾವನ್ನು ಕೋರಿತ್ತು. ಬಳಿಕ ಶ್ರೀಲಂಕಾ ಶನಿವಾರದಂದು ಆಗಸ್ಟ್ 16 ರಿಂದ 22ರ ವರೆಗೆ ಭೇಟಿಗೆ ಅನುಮತಿ ನೀಡಿತು.

ಹಡಗಿನ ವಿಶೇಷತೆ:
ಯುವಾನ್ ವಾಂಗ್ 5 ಹಡಗು ಬಾಹ್ಯಾಕಾಶ ಹಾಗೂ ಉಪಗ್ರಹ ಟ್ರ್ಯಾಕಿಂಗ್‌ನಲ್ಲಿ ಕರಗತವಾಗಿದೆ. ಇದರ ಮೂಲಕ ಉಪಗ್ರಹಗಳು, ರಾಕೆಟ್ ಮಾತ್ರವಲ್ಲದೇ ವಿದೇಶಗಳ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಉಡಾವಣೆಯನ್ನು ಟ್ರ್ಯಾಕ್ ಮಾಡಬಹುದು. ಚೀನಾ ಯುವಾನ್ ವಾಂಗ್‌ನ 7 ಹಡಗುಗಳನ್ನು ಹೊಂದಿದ್ದು, ಬೇಹುಗಾರಿಕೆಯ ಉದ್ದೇಶದಿಂದಲೇ ನಿರ್ಮಿಸಲಾಗಿದೆ. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? – ನಡೆಯುತ್ತಾ ಮಹಿಳಾ ವಿಶ್ವಕಪ್‌?

ಯುವಾನ್ ವಾಂಗ್ 5 ಸೇನಾ ಹಡಗು ಅಲ್ಲ. ಆದರೆ ಅದು ಮಾಡುವ ಕೆಲಸ ಅತ್ಯಂತ ಆಘಾತಕಾರಿ. ಯಾವುದೇ ದೇಶಗಳು ಕ್ಷಿಪಣಿಗಳನ್ನು ಹಾರಿಸುವಾಗ ಹಡಗು ತನ್ನ ಚಲನೆಯನ್ನು ತೋರಿಸುತ್ತದೆ. 750 ಕಿ.ಮೀ ದೂರದಿಂದಲೂ ನೀವು ಮಾತನಾಡುವುದನ್ನು ಈ ಹಡಗಿನಲ್ಲಿ ಕುಳಿತು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು. ಈ ಹಡಗಿನಲ್ಲಿ 400 ಸಿಬ್ಬಂದಿ ಇರುವುದಾಗಿ ತಿಳಿದುಬಂದಿದೆ.

ಯುವಾನ್ ವಾಂಗ್ 5 ಹಡಗು ಶ್ರೀಲಂಕಾಗೆ ಸಂಶೋಧನೆ ಹಾಗೂ ಸಮೀಕ್ಷೆ ನಡೆಸುವ ಸಲುವಾಗಿ ಆಗಮಿಸಿದೆ ಎನ್ನಲಾಗಿದೆ. ಆದರೆ ಹಡಗು 2 ರೀತಿ ಕೆಲಸ ಮಾಡಬಲ್ಲ ಪತ್ತೆದಾರಿ ಹಡಗು ಎಂದು ಭಾರತ ಕಳವಳ ವ್ಯಕ್ತಪಡಿಸಿದೆ. ಚೀನಾದ ಹಡಗು ತನ್ನ ಕಾರ್ಯಾಚರಣೆ ನಡೆಸುವ ವೇಳೆ ಭಾರತದ ಸೇನಾ ನೆಲೆಯ ಮೇಲೆ ಕಣ್ಣಿಡುವ ಸಾಧ್ಯತೆ ಇದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮೆಟ್ರೋ ಸ್ಟೇಷನ್ ಒಳಗೂ ಸಾವರ್ಕರ್ ಫೋಟೋಗೆ ಆಕ್ಷೇಪ- ಟ್ವಿಟ್ಟರ್‌ನಲ್ಲಿ ಅಭಿಯಾನ

 

ಶ್ರೀಲಂಕಾ ತಾನು ಮಾಡಿದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆ 2017ರಲ್ಲಿ ಹಂಬನತೋಟ ಬಂದರನ್ನು 99 ವರ್ಷಗಳ ಗುತ್ತಿಗೆಗೆ ಚೀನಾಗೆ ಹಸ್ತಾಂತರಿಸಿದೆ. ಈ ಬಂದರು ಚೀನಾದ ನೌಕಾ ನೆಲೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹಾಗೂ ಅಮೆರಿಕ ಕಳವಳ ವ್ಯಕ್ತಪಡಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *