ವಾಷಿಂಗ್ಟನ್: ಮಧ್ಯಪ್ರಾಚ್ಯ ಕದನದಲ್ಲಿ ತಾನು ಯಾರ ಪರವೂ ಇಲ್ಲ ಎಂದು ತೋರಿಸಿಕೊಳ್ಳುವ ಚೀನಾ, ರಹಸ್ಯವಾಗಿ ಇರಾನ್‌ಗೆ (Iran) ಅಮೆರಿಕ ಸೇನೆಯನ್ನು ಬಗ್ಗುಬಡಿಯಲು ಸಹಾಯ ಮಾಡುತ್ತಿದೆಯೇ ಎಂಬ ಅನುಮಾನ ಮೂಡಿದೆ. ಇತ್ತೀಚೆಗೆ ಅಮೆರಿಕದ ಪ್ರತಿಷ್ಠಿತ ಪತ್ರಿಕೆ ʼವಾಷಿಂಗ್ಟನ್ ಪೋಸ್ಟ್ʼನಲ್ಲಿ (The Washington Post) ಪ್ರಕಟವಾಗಿದ್ದ ವರದಿಯಲ್ಲಿ, ಚೀನಾದ ಕೆಲ ಎಐ (AI) ಕಂಪನಿಗಳು ಮಧ್ಯಪ್ರಾಚ್ಯದಲ್ಲಿ ಅಮೆರಿಕದ (America) ಸೇನಾ ಚಲನವಲನದ ಬಗ್ಗೆ ಸ್ಯಾಟಲೈಟ್ ಇಮೇಜಿಂಗ್ ಆಧರಿತ ಮಾಹಿತಿಯನ್ನು ಮಾರಾಟ ಮಾಡುತ್ತಿವೆ ಎಂದು ವರದಿಯಾಗಿದೆ.
ಇದಕ್ಕೆ ಪುಷ್ಟಿ ಕೊಡುವಂತೆ, ‘ಮಿಜಾರ್‌ವಿಷನ್’ ಎಂಬ ಕಂಪನಿ, ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡಿರುವ ಶಸ್ತ್ರಾಸ್ತ್ರಗಳ ಜಾಗವನ್ನು ನಾವು ಪತ್ತೆ ಮಾಡಿದೆವು. ಅಮೆರಿಕದ ಯುದ್ಧವಿಮಾನ ವಾಹಕ ನೌಕೆಗಳ ಮರುಪೂರಣದ ಮಾದರಿಯನ್ನೂ ನಾವು ಗುರುತಿಸಿದ್ದೇವೆ. ವೆನಿಜುವೆಲಾ ಅಧ್ಯಕ್ಷ ಮಡುರೋ ಅಪಹರಣಕ್ಕೂ ತಿಂಗಳುಗಳ ಮುಂಚೆಯೇ ನಾವು ಅಮೆರಿಕದ ಕ್ಷಿಪಣಿಗಳ ಸ್ಥಾನ ಬದಲಾವಣೆಯನ್ನು ಗಮನಿಸಿದ್ದೆವು ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಕದನ ವಿರಾಮಕ್ಕೆ ಒಪ್ಪದ ಇರಾನ್ ಮೇಲೆ ಮಿಸೈಲ್ ಮಳೆಗರೆದ ಇಸ್ರೇಲ್ – ಹಲವೆಡೆ ಸ್ಫೋಟ
Chinese firms — some with links to the People’s Liberation Army — are marrying artificial intelligence with open-source data to market information they claim can “expose” the movements of U.S. forces. https://t.co/xZ3ruguUoR
— The Washington Post (@washingtonpost) April 4, 2026
ಪತ್ತೆ ಹೇಗೆ?
ಈ ಕಂಪನಿಗಳು ಯಾವುದೇ ರಹಸ್ಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಈ ಮಾಹಿತಿಯನ್ನು ಪಡೆಯುತ್ತಿಲ್ಲ. ಬದಲಿಗೆ, ಮಾರಾಟಕ್ಕಿರುವ ಸ್ಯಾಟಲೈಟ್ ಚಿತ್ರಗಳು, ವಿಮಾನ ಟ್ರ‍್ಯಾಕಿಂಗ್ ಡೇಟಾ, ಹಡಗುಗಳನ್ನು ಗುರುತಿಸುವ ಸೌಲಭ್ಯವನ್ನು ಬಳಸಿಕೊಂಡು, ಅವನ್ನೆಲ್ಲಾ ಎಐ ಟೂಲ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಅದು ಅವುಗಳ ಚಲನೆಯನ್ನು ಪರಿಶೀಲಿಸಿ, ಅಮೆರಿಕ ಸೇನೆಯ ಮುಂದಿನ ನಡೆಯನ್ನು ಅಂದಾಜಿಸುತ್ತದೆ. ಇದೇ ಮಾಹಿತಿಯನ್ನು ಆ ಕಂಪನಿಗಳು ಇರಾನ್‌ಗೆ ಮಾರಿವೆ ಎನ್ನುವುದು ಆರೋಪ. ಇದನ್ನೂ ಓದಿ: ಏ.10 ರಿಂದ ಟೋಲ್‌ಗಳಲ್ಲಿ ನಗದು ಸ್ವೀಕಾರ ಸಂಪೂರ್ಣ ಬಂದ್!

