ಅರುಣಾಚಲ ಪ್ರದೇಶದಲ್ಲಿ ಉದ್ವಿಗ್ನತೆ ಸಾಧ್ಯತೆ – ಚೀನಾದ ಸಿಕ್ರೇಟ್ ಮಿಷನ್ ಬಹಿರಂಗಗೊಳಿಸಿದ ಯುಎಸ್‌ನ ಪೆಂಟಾಗನ್ ವರದಿ

1 Min Read
ನವದೆಹಲಿ: ಭಾರತ (India) ಮತ್ತು ಚೀನಾ (China) ನಡುವೆ ಲಡಾಖ್‌ನಲ್ಲಿ ವರ್ಷಗಳಿಂದ ನಡೆದ ಗಡಿ ಉದ್ವಿಗ್ನತೆ ಕೊನೆಗೊಂಡಿದ್ದರೂ ಕೂಡ ಮುಂದೆ ಅರುಣಾಚಲ ಪ್ರದೇಶದಲ್ಲಿ ಹೊಸ ಉದ್ವಿಗ್ನತೆ ಉಂಟಾಗಬಹುದು ಎಂದು ಅಮೆರಿಕದ ರಕ್ಷಣಾ ಇಲಾಖೆಯ (ಪೆಂಟಾಗನ್) ಇತ್ತೀಚಿನ ವರದಿ ಎಚ್ಚರಿಕೆ ನೀಡಿದೆ.

ಚೀನಾ ಅರುಣಾಚಲ ಪ್ರದೇಶದ ಮೇಲಿನ ಹಕ್ಕನ್ನು ತೈವಾನ್‌ನೊಂದಿಗೆ ಸಮಾನವಾಗಿ ತನ್ನ ಮೂಲಭೂತ ಆಸಕ್ತಿ (ಕೋರ್ ಇಂಟರೆಸ್ಟ್‌) ಎಂದು ಪರಿಗಣಿಸುತ್ತಿದೆ ಎಂದು ಈ ವರದಿ ಹೇಳಿದೆ. ಅಮೆರಿಕದ ಕಾಂಗ್ರೆಸ್‌ಗೆ ಸಲ್ಲಿಸಿದ ಈ ವಾರ್ಷಿಕ ವರದಿಯಲ್ಲಿ ಅರುಣಾಚಲ, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಇತರ ಪ್ರದೇಶಗಳ ಮೇಲಿನ ಹಕ್ಕುಗಳು 2049ರ ವೇಳೆಗೆ “ಮಹಾನ್ ಪುನರುಜ್ಜೀವನ” (ಗ್ರೇಟ್ ರಿಜುವಿನೇಷನ್) ಸಾಧಿಸುವಲ್ಲಿ ಪ್ರಮುಖವಾಗಿವೆ ಎಂದು ಉಲ್ಲೇಖಿಸಲಾಗಿದೆ.ಇದನ್ನೂ ಓದಿ: ಬುಲೆಟ್‌ ಪ್ರೂಫ್‌ ವಾಹನದಲ್ಲಿ ಢಾಕಾಗೆ ರೆಹಮಾನ್‌ ಎಂಟ್ರಿ; ಲಕ್ಷಾಂತರ ಜನರಿಂದ ಅದ್ದೂರಿ ಸ್ವಾಗತ

ಈ ಯೋಜನೆಯಡಿ ಚೀನಾ ವಿಶ್ವ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯಲು ಮತ್ತು “ಯುದ್ಧ ಮಾಡಿ ಗೆಲ್ಲುವ” ಸಾಮರ್ಥ್ಯದ ವಿಶ್ವದರ್ಜೆಯ ಸೇನೆಯನ್ನು ನಿರ್ಮಿಸಲು ಉದ್ದೇಶ ಹೊಂದಿದೆ ಎಂದು ವರದಿ ತಿಳಿಸಿದೆ. ಅರುಣಾಚಲ ಪ್ರದೇಶ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ ಎಂಬ ನಿಲುವನ್ನು ದೃಢವಾಗಿ ಹೊಂದಿದೆ. ಅರುಣಾಚಲದಲ್ಲಿ ಹೊಸ ಫ್ಲ್ಯಾಶ್ ಪಾಯಿಂಟ್ ಆಗುವ ಸಾಧ್ಯತೆಗಳಿದೆ ಎನ್ನಲಾಗುತ್ತಿದೆ.

ಕಳೆದ ವರ್ಷ ಭಾರತ-ಚೀನಾ ದೇಶಗಳು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಬಳಿ ಲಡಾಖ್‌ನಲ್ಲಿ ಸೈನಿಕರ ಹಿಂದಕ್ಕೆ ಸರಿಸುವ ಒಪ್ಪಂದಕ್ಕೆ ಬಂದಿದ್ದವು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಅರುಣಾಚಲ ಸಂಬಂಧಿತ ಉದ್ವಿಗ್ನತೆಯನ್ನು ಹೆಚ್ಚಿಸಿವೆ.ಇದನ್ನೂ ಓದಿ:

Share This Article