ಮಕ್ಕಳನ್ನು ಮಾಡ್ಕೊಳ್ಳಿ, 23.5 ಲಕ್ಷ ಸಾಲ ತಗೊಳ್ಳಿ ಎಂದ ಚೀನಾ ಸರ್ಕಾರ

Public TV
2 Min Read

ಬೀಜಿಂಗ್: ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರ ಚೀನಾ. ಆದರೆ ಸರ್ಕಾರ ಕೈಗೊಂಡಿದ್ದ ಜನಸಂಖ್ಯಾ ಸ್ಫೋಟ ತಡೆಯ ಪರಿಣಾಮದಿಂದಾಗಿ ಚೀನಾದಲ್ಲಿ ಜನಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದು ಇತ್ತೀಚಿನ ಕೈಗೊಂಡಿದ್ದ ಜನಗಣತಿಯಲ್ಲಿ ತಿಳಿದುಬಂದಿದೆ. ಪುನಃ ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ಸರ್ಕಾರ ಮಕ್ಕಳನ್ನು ಮಾಡಿಕೊಳ್ಳುವ ದಂಪತಿಗೆ ಸಾಲ ಸೌಲಭ್ಯ ನೀಡುವ ಯೋಜನೆಯೊಂದನ್ನು ತಂದಿದೆ.

ಕಳೆದ ಅಗಸ್ಟ್ ನಲ್ಲಿ ಚೀನಾ ಜನಸಂಖ್ಯಾ ತಡೆಗೆ ಕೈಗೊಂಡಿದ್ದ ನಿಯಮಗಳನ್ನು ಸ್ವಲ್ಪ ಸಡಿಲಗೊಳಿಸಿತ್ತು. ಆದರೂ ಜಿಲಿನ್, ಲಿಯಾನಿಂಗ್ ಮತ್ತು ಹೈಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ ದುಡಿಯುವ ಕೈಗಳ ಸಮಸ್ಯೆ ಎದ್ದು ಕಾಣುತ್ತಿದೆ. ಇದರಿಂದಾಗಿ ವಿಶೇಷ ಯೋಜನೆಯೊಂದನ್ನು ರೂಪಿಸಿ ಯುವಜನಾಂಗವನ್ನು ಹೆಚ್ಚಿಸಲು ತೀರ್ಮಾನ ತೆಗೆದುಕೊಂಡಿದೆ.

ಈ ಯೋಜನೆಯ ಪ್ರಕಾರ, ಮದುವೆಯಾಗಿ ಮಕ್ಕಳನ್ನು ಪಡೆಯುವ ದಂಪತಿಗೆ ವಿಶೇಷ ನೆರವಿನ ಪ್ಯಾಕೇಜ್ ಘೋಷಣೆ ಮಾಡಿದೆ. ಈಶಾನ್ಯ ಚೀನಾದ ಜಿಲಿಂಗ್ ಪ್ರಾಂತ್ಯದ ಜನಸಂಖ್ಯೆ ಇತರ ಎಲ್ಲಾ ಪ್ರಾಂತ್ಯಗಳಿಗಿಂತ ವೇಗವಾಗಿ ಕುಸಿಯುತ್ತಿದೆ. ಇಲ್ಲಿ ಎಲ್ಲಿ ನೋಡಿದರೂ ಹೆಚ್ಚಾಗಿ ವೃದ್ಧರೇ ಕಾಣಿಸಿಕೊಳ್ಳುತ್ತಿದ್ದಾರೆ. ದುಡಿಯುವ ಯುವ ಜನಾಂಗ ವಿರಳಾತಿ ವಿರಳವಾಗಿದೆ. ಇದರಿಂದಾಗಿ ಚೀನಾ ಸರ್ಕಾರ ಜನತೆಗೆ ವಿಶೇಷ ಯೋಜನೆಯೊಂದನ್ನು ಘೋಷಿಸಿದೆ.

ವಿಶೇಷ ರಿಯಾಯಿತಿ: ಮಕ್ಕಳನ್ನು ಹೆತ್ತರೆ ಖರ್ಚು ಹೆಚ್ಚು ಎನ್ನುವ ದಂಪತಿಗಾಗಿ ಈ ಯೋಜನೆ ಜಾರಿಯಾಗಿದೆ. ಇಲ್ಲಿ ಜನಸಂಖ್ಯೆಯನ್ನು ಹೆಚ್ಚಳ ಮಾಡಲು ಮಕ್ಕಳನ್ನು ಹೊಂದುವ ದಂಪತಿಗೆ ಸುಮಾರು 23.5 ಲಕ್ಷ ರೂ. ಸಾಲ ಸೌಲಭ್ಯ ನೀಡುವುದಾಗಿ ತಿಳಿಸಿದೆ. ಹೆಚ್ಚು ಮಕ್ಕಳನ್ನು ಹೊಂದಿದಷ್ಟೂ ಸರ್ಕಾರ ಖುಷಿ ಪಡುತ್ತದೆ. ಜೊತೆಗೆ ಅವರಿಗಾಗಿ ವಿಶೇಷ ರಿಯಾಯಿತಿಯನ್ನು ನೀಡಿದೆ ಎಂದು ಜಿಲಿನ್ ವಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಡೆದಾಡುವ ಅಪರೂಪದ ಮೀನು ಪತ್ತೆ – ವೀಡಿಯೋ ವೈರಲ್

BRIBE

ದಂಪತಿ ಹೊಂದುವ ಮಕ್ಕಳ ಆಧಾರದ ಮೇಲೆ ಕಮ್ಮಿ ಬಡ್ಡಿ ದರದಲ್ಲಿ ಬ್ಯಾಂಕ್‌ಗಳಿಂದ ಸಾಲ ಒದಗಿಸಲಾಗುವುದು. 2 ಅಥವಾ 3 ಮಕ್ಕಳನ್ನು ಹೊಂದುವ ಮಕ್ಕಳನ್ನು ಹೊಂದುವ ದಂಪತಿ ವ್ಯಾಪಾರವನ್ನು ಆರಂಭಿಸುವುದಾದರೆ ಅವರಿಗೆ ರಿಯಾಯಿತಿ ನೀಡಲಾಗುತ್ತದೆ.

ತಾಯ್ತನದ ರಜೆ ಅವಧಿ ಹೆಚ್ಚಳ: ಈಗಾಗಲೇ ಮಹಿಳಾ ನೌಕರರ ತಾಯ್ತನದ ರಜೆ ಅವಧಿಯನ್ನು ಹೆಚ್ಚಿಸಲಾಗಿದೆ. ಜೊತೆಗೆ ಪಿತೃತ್ವ ರಜೆಯನ್ನು ತೆಗೆದುಕೊಳ್ಳುವ ಪದ್ಧತಿ ಅನೇಕ ಪ್ರಾಂತ್ಯದಲ್ಲಿ ಇದೆ. ಮಹಿಳೆಯರಿಗೆ 180 ದಿನ ಹಾಗೂ ಪುರುಷರಿಗೆ 25 ದಿನ ರಜೆಯನ್ನು ನೀಡಲಾಗುತ್ತದೆ. ಇದರ ಜೊತೆಗೆ ವರ್ಷದಲ್ಲಿ 20 ದಿನ ಪೋಷಕರ ರಜೆಯನ್ನು ಪಡೆಯಬಹುದಾಗಿದೆ. ಇದನ್ನೂ ಓದಿ: ಮೋದಿ ಫೋಬಿಯಾ ಎನ್ನುವಂತೆ ಕಾಂಗ್ರೆಸ್‍ನವರು ನಡೆದುಕೊಳ್ಳುತ್ತಿದ್ದಾರೆ: ಪ್ರಹ್ಲಾದ್ ಜೋಶಿ

ಚೀನಿಯರ ತಿರಸ್ಕಾರ: ಜನಸಂಖ್ಯಾ ಹೆಚ್ಚಳಕ್ಕೆ ಸರ್ಕಾರ ಇಷ್ಟೆಲ್ಲಾ ಪ್ರೋತ್ಸಾಹದ ಕ್ರಮ ಕೈಗೊಂಡಿದ್ದರೂ ಇಲ್ಲಿನ ಜನ ನಿರುತ್ಸಾಹ ತೋರುತ್ತಿದ್ದಾರೆ. ಜೀವನ ಸಾಗಿಸುವುದೇ ಕಷ್ಟದ ಪರಿಸ್ಥಿತಿಯಲ್ಲಿರುವಾಗ ಮಕ್ಕಳನ್ನು ಹೊತ್ತು ಮತ್ತೊಂದಷ್ಟು ಸಾಲ ಹೊರಲಾಗುವುದಿಲ್ಲ. ಈ ಯೋಜನೆಯ ಹಿಂದೆ ಸರ್ಕಾರದ ದುರುದ್ದೇಶವೇನೋ ಇದೆ. ಮಕ್ಕಳ ಜೊತೆ ಸಾಲದ ಹೊರೆ ನಮಗೆ ಬೇಕಿಲ್ಲ ಎಂದು ತಿರಸ್ಕರಿಸಿದ್ದಾರೆ. ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್

Share This Article
Leave a Comment

Leave a Reply

Your email address will not be published. Required fields are marked *